ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 14-07-2018, ಶನಿವಾರ

ದಿನ ಭವಿಷ್ಯ: 14-07-2018, ಶನಿವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಶನಿವಾರ, ಪುಷ್ಯ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:16 ರಿಂದ 10:52
ಗುಳಿಕಕಾಲ: ಬೆಳಗ್ಗೆ 6:05 ರಿಂದ 7:40
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40

ಮೇಷ ರಾಶಿ

ಮಧ್ಯಾಹ್ನದ ನಂತರ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ನೆಲೆಸಲಿದೆ. ಧಾರ್ಮಿಕ ಕಾರ್ಯ ಅಥವಾ ಪ್ರವಾಸ ಕೈಗೊಳ್ಳಲಿದ್ದೀರಿ. ಹೊಸ ಕಾರ್ಯ ಪ್ರಾರಂಭಿಸಲಿದ್ದೀರಿ. ಧನಲಾಭವಾಗಲಿದೆ.

ವೃಷಭ ರಾಶಿ

ಹೊಸ ಸ್ನೇಹಿತರು ದೊರೆಯುತ್ತಾರೆ. ವ್ಯಾಪಾರ ಮತ್ತು ಆರ್ಥಿಕ ಲಾಭವಾಗಲಿದೆ. ಆದ್ರೆ ಮಧ್ಯಾಹ್ನದ ನಂತರ ಸ್ವಲ್ಪ ಜಾಗರೂಕರಾಗಿರಿ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಹದಗೆಡಬಹುದು.

ಮಿಥುನ ರಾಶಿ

ಇವತ್ತು ನಿಮಗೆ ಅನುಕೂಲಕರ ಮತ್ತು ಲಾಭದಾಯಕ ದಿನ. ಹಿರಿಯ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿರುತ್ತದೆ. ಇದರಿಂದ ಸುಲಭವಾಗಿ ಪ್ರಗತಿ ಹೊಂದಲಿದ್ದೀರಿ. ವ್ಯಾಪಾರದಲ್ಲಿ ಆದಾಯ ವೃದ್ಧಿಸಲಿದೆ. ಬಾಕಿ ವಸೂಲಿಯಾಗುವ ಸಾಧ್ಯತೆ ಇದೆ.

ಕರ್ಕ ರಾಶಿ

ಹಿರಿಯ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸಿ, ಮಾತಿನ ಮೇಲೆ ನಿಯಂತ್ರಣವಿರಲಿ. ದೈಹಿಕ ಅಸ್ವಸ್ಥತೆ ಉಂಟಾಗಬಹುದು. ಮನಸ್ಸಿನಲ್ಲಿ ಚಿಂತೆಗಳು ಕಾಡಲಿವೆ. ವ್ಯಾಪಾರದಲ್ಲಿ ವಿಘ್ನ ಎದುರಾಗುವ ಸಾಧ್ಯತೆ ಇದೆ.

ಸಿಂಹ ರಾಶಿ

ಇಂದು ಕೋಪ ಮತ್ತು ಮಾತನ್ನು ನಿಯಂತ್ರಿಸಿಕೊಳ್ಳಿ. ಆರೋಗ್ಯದ ಬಗ್ಗೆ ಗಮನವಿರಲಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ. ಮಾನಸಿಕವಾಗಿ ವ್ಯಗ್ರರಾಗಿರುತ್ತೀರಿ. ಕುಟುಂಬದಲ್ಲಿ ಜಗಳವಾಗುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಬೆಳಗ್ಗೆ ಸ್ನೇಹಿತರೊಂದಿಗೆ ಸುತ್ತಾಟ, ಉಪಹಾರ ಮತ್ತು ಮನರಂಜನೆಯಲ್ಲಿ ಕಾಲ ಕಳೆಯುತ್ತೀರಿ. ಪಾಲುದಾರರೊಂದಿಗೂ ಉತ್ತಮ ಬಾಂಧವ್ಯ ಏರ್ಪಡಲಿದೆ. ಮಧ್ಯಾಹ್ನದ ನಂತರ ಕಠಿಣ ಪರಿಸ್ಥಿತಿಗಳು ಎದುರಾಗಬಹುದು.

ತುಲಾ ರಾಶಿ

ಇಂದು ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಅಂದುಕೊಂಡ ಕಾರ್ಯಗಳನ್ನೆಲ್ಲ ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಗೃಹಸ್ಥ ಜೀವನದಲ್ಲಿ ಸುಖ-ಶಾಂತಿ ಇರುತ್ತದೆ. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಆದ್ರೆ ಕೋಪ ಹೆಚ್ಚಾಗಬಹುದು.

ವೃಶ್ಚಿಕ ರಾಶಿ

ಇಂದು ಅತಿಯಾಗಿ ಭಾವುಕರಾಗುತ್ತೀರಿ. ಹಾಗಾಗಿ ಮಾನಸಿಕ ಸಂತುಲನ ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಓದು ಮತ್ತು ವೃತ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ಧನು ರಾಶಿ

ಕುಟುಂಬದ ಶಾಂತಿ ಕಾಪಾಡಿಕೊಳ್ಳಲು ನಿರರ್ಥಕ ವಾದ ವಿವಾದಗಳಿಂದ ದೂರವಿರಿ. ತಾಯಿಯ ಆರೋಗ್ಯ ಹದಗೆಡಬಹುದು. ಧನ ಮತ್ತು ಪ್ರತಿಷ್ಠೆಗೆ ಹಾನಿಯಾಗುವ ಸಂಭವವಿದೆ. ಮಧ್ಯಾಹ್ನದ ನಂತರ ಹೆಚ್ಚು ಭಾವುಕರಾಗುತ್ತೀರಿ.

ಮಕರ ರಾಶಿ

ಅವಶ್ಯಕ ನಿರ್ಣಯಗಳನ್ನು ತೆಗೆದುಕೊಳ್ಳಲು ಹೆಚ್ಚು ವೈಚಾರಿಕತೆ ಮತ್ತು ದೃಢಚಿತ್ತದ ಅವಶ್ಯಕತೆ ಬರಬಹುದು. ಮಿತ್ರರು ಮತ್ತು ಪ್ರೀತಿ ಪಾತ್ರರನ್ನು ಭೇಟಿಯಾಗಲಿದ್ದೀರಿ. ಆನಂದವಾಗಿ ಕಾಲ ಕಳೆಯಲಿದ್ದೀರಿ. ಚಿಕ್ಕದೊಂದು ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಕುಂಭ ರಾಶಿ

ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣವಿರಲಿ. ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬರದಂತೆ ಎಚ್ಚರ ವಹಿಸಿ. ಊಟ ತಿಂಡಿಯಲ್ಲೂ ಸಂಯಮ ವಹಿಸಿ. ಮಧ್ಯಾಹ್ನದ ನಂತರ ವೈಚಾರಿಕ ಸ್ಥಿರತೆ ಕಾಪಾಡಿಕೊಳ್ಳುತ್ತೀರಿ.

ಮೀನ ರಾಶಿ

ಇಂದು ನಿಮಗೆ ಶುಭದಿನ. ಶಾರೀರಿಕ, ಮಾನಸಿಕ ಸ್ವಾಸ್ಥ್ಯ ಮತ್ತು ಉತ್ಸಾಹವಿರುತ್ತದೆ. ಹೊಸ ಕಾರ್ಯ ಆರಂಭಿಸಲು ಸಮಯ ಅನುಕೂಲಕರವಾಗಿದೆ. ಕುಟುಂಬದವರೊಂದಿಗೆ ಆನಂದವಾಗಿ ಕಾಲ ಕಳೆಯಿರಿ. ಧಾರ್ಮಿಕ ಕಾರ್ಯಕ್ಕಾಗಿ ಹಣ ಖರ್ಚಾಗಲಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..