ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ..! ದಿನಭವಿಷ್ಯ: 07-06-2018, ಗುರುವಾರ

ದಿನಭವಿಷ್ಯ: 07-06-2018, ಗುರುವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ಪೂರ್ವ ಭಾದ್ರಪದ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:59 ರಿಂದ 3:35
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:47
ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:35

ಮೇಷ ರಾಶಿ

ಮಾತಿನ ಮೇಲೆ ಹಿಡಿತ ಇಟ್ಟುಕೊಂಡರೆ ತಪ್ಪು ಗ್ರಹಿಕೆಗಳಿಂದ ಬಚಾವ್ ಆಗುತ್ತೀರಿ. ಆಕಸ್ಮಿಕ ಧನಲಾಭವಿದೆ. ಹಿತಶತ್ರುಗಳಿಂದ ದೂರವಿರಿ. ಹೊಸ ಕೆಲಸವನ್ನು ಆರಂಭಿಸಬೇಡಿ. ಸ್ತ್ರೀಯರು ಮತ್ತು ನೀರಿನಿಂದ ದೂರವಿರುವುದು ಒಳಿತು.

ವೃಷಭ ರಾಶಿ

ಆರೋಗ್ಯ ಉತ್ತಮವಾಗಿರುತ್ತದೆ. ಧನಲಾಭದ ಯೋಗವಿದೆ. ಸಂಬಂಧಿಕರಿಂದ ಶುಭ ಸಮಾಚಾರ ದೊರೆಯಬಹುದು. ಪಾಲುದಾರಿಕೆಯಲ್ಲಿ ಲಾಭವಾಗಲಿದೆ. ಸಾರ್ವಜನಿಕ ಜೀವನದಲ್ಲಿ ಗೌರವ, ಪ್ರತಿಷ್ಠೆ ಸಿಗುತ್ತದೆ.

ಮಿಥುನ ರಾಶಿ

ಅಪೂರ್ಣವಾದ ಕೆಲಸ ಇಂದು ಪೂರ್ಣಗೊಳ್ಳಲಿದೆ. ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭವಾಗಲಿದೆ. ಕಚೇರಿಯಲ್ಲಿ ಸಂಘರ್ಷ ಅಥವಾ ಭಿನ್ನಾಭಿಪ್ರಾಯಗಳು ತಲೆದೋರುವ ಸಾಧ್ಯತೆ ಇದೆ.

ಕರ್ಕ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಶುಭ ಸಮಯವಲ್ಲ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಸ್ನೇಹಿತರೊಂದಿಗೆ ವಾದ-ವಿವಾದ ಹಾಗೂ ಭಿನ್ನಾಭಿಪ್ರಾಯ ಉಂಟಾಗಬಹುದು. ಅತ್ಯಧಿಕ ಕಾಮುಕತೆ ನಿಮ್ಮ ಮರ್ಯಾದೆಗೆ ಧಕ್ಕೆ ತರದಂತೆ ಎಚ್ಚರ ವಹಿಸಿ.

ಸಿಂಹ ರಾಶಿ

ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ. ತಂದೆ-ತಾಯಿಯ ಜೊತೆಗೆ ಜಗಳವಾಗಬಹುದು. ಅಥವಾ ಅವರ ಆರೋಗ್ಯ ಹದಗೆಡಬಹುದು. ಜಮೀನು, ಮನೆ ಅಥವಾ ವಾಹನ ದಸ್ತಾವೇಜಿನ ವಿಷಯದಲ್ಲಿ ಎಚ್ಚರಿಕೆ ವಹಿಸಿ.

ಕನ್ಯಾ ರಾಶಿ

ಕೆಲಸಗಳೆಲ್ಲ ಯಶಸ್ವಿಯಾಗಲಿವೆ. ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಿಗಲಿದೆ. ಒಡಹುಟ್ಟಿದವರು ಮತ್ತು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತೀರಿ. ಆರ್ಥಿಕ ಲಾಭವೂ ಇದೆ. ಸಮಾಜದಲ್ಲಿ ಗೌರವ ಸಿಗಲಿದೆ.

ತುಲಾ ರಾಶಿ

ಅತಿಯಾದ ಮಾತಿನಿಂದ ಸಂಘರ್ಷ ಏರ್ಪಡುವ ಸಾಧ್ಯತೆಗಳೇ ಹೆಚ್ಚು. ಮನಸ್ಸು ಗೊಂದಲದ ಗೂಡಾಗಲಿದೆ. ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಹತ್ವದ ನಿರ್ಣಯಗಳನ್ನು ಇವತ್ತು ತೆಗೆದುಕೊಳ್ಳಬೇಡಿ.

ವೃಶ್ಚಿಕ ರಾಶಿ

ಮಿತ್ರರು ಅಥವಾ ಸಂಬಂಧಿಕರಿಂದ ಉಪಹಾರ ದೊರೆಯುತ್ತದೆ. ಪ್ರಿಯ ವ್ಯಕ್ತಿಗಳ ಭೇಟಿ ಫಲಪ್ರದವಾಗಲಿದೆ. ಧನ ಲಾಭ ಮತ್ತು ಪ್ರವಾಸದ ಯೋಗವಿದೆ. ದಾಂಪತ್ಯ ಜೀವನದಲ್ಲಿ ಪ್ರಸನ್ನತೆಯ ಅನುಭವವಾಗಲಿದೆ.

ಧನು ರಾಶಿ

ಕುಟುಂಬದೊಂದಿಗಿನ ಭಿನ್ನಾಭಿಪ್ರಾಯದಿಂದ ಮನಸ್ಸು ಬೇಸರಗೊಳ್ಳುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ. ದುರ್ಘಟನೆಗಳಿಂದ ಪಾರಾಗಿ. ಕೋರ್ಟ್ ಕಚೇರಿ ವಿಷಯದಲ್ಲಿ ಜಾಗರೂಕರಾಗಿರಿ. ಖರ್ಚು ಹೆಚ್ಚಾಗುವುದರಿಂದ ಆರ್ಥಿಕ ಕೊರತೆ ಕಾಣಿಸಬಹುದು.

ಮಕರ ರಾಶಿ

ಒಡಹುಟ್ಟಿದವರೊಂದಿಗೆ ಹೊರಗೆ ಸುತ್ತಾಡಲು ತೆರಳುತ್ತೀರಿ. ಸ್ತ್ರೀ ಮಿತ್ರರು, ಪತ್ನಿ ಮತ್ತು ಪುತ್ರನಿಂದ ಲಾಭವಿದೆ. ವಿವಾಹದ ಬಗ್ಗೆ ಉತ್ಸುಕರಾಗಿರುವ ಯುವಕ, ಯುವತಿಯರಿಗೆ ವೈವಾಹಿಕ ಸಮಸ್ಯೆಗಳು ನಿವಾರಣೆ ಆಗಲಿವೆ.

ಕುಂಭ ರಾಶಿ

ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಸ್ಥಿತಿ ಇದೆ, ಲಾಭವೂ ಆಗಲಿದೆ. ಹಿರಿಯರು ಮತ್ತು ಉನ್ನತ ಅಧಿಕಾರಿಗಳ ಕೃಪಾದೃಷ್ಟಿ ನಿಮ್ಮ ಮೇಲಿದೆ. ಧನ ಪ್ರಾಪ್ತಿ ಮತ್ತು ಪದೋನ್ನತಿಯ ಯೋಗವಿದೆ.

ಮೀನ ರಾಶಿ

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಮಾಧಾನದಿಂದ ಕೆಲಸ ಮಾಡಿ. ಸಂತಾನದ ಸಮಸ್ಯೆಯಿಂದ ಚಿಂತಿತರಾಗುತ್ತೀರಿ. ಪ್ರತಿಸ್ಪರ್ಧಿ ಅಂದುಕೊಂಡಿದ್ದನ್ನು ಸಾಧಿಸುತ್ತಾನೆ. ಇಂದು ಮಹತ್ವದ ನಿರ್ಣಯ ಕೈಗೊಳ್ಳದೇ ಇರುವುದು ಒಳಿತು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..