ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 14-06-2018, ಗುರುವಾರ

ದಿನಭವಿಷ್ಯ: 14-06-2018, ಗುರುವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಗುರುವಾರ, ಮೃಗಶಿರ ನಕ್ಷತ್ರ
ಮಧ್ಯಾಹ್ನ 2:08 ನಂತರ ಆರಿದ್ರಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:00 ರಿಂದ 3:36
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:47
ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:35

ಮೇಷ ರಾಶಿ

ಆದಾಯ ವೃದ್ಧಿಸಲಿದೆ. ದಿನವಿಡೀ ಮನರಂಜನೆಯಲ್ಲಿ ಕಾಲ ಕಳೆಯುತ್ತೀರಿ. ಮನೆಯ ಅಲಂಕಾರದಲ್ಲಿ ಹೊಸತನವಿರಲಿದೆ. ವಾಹನ ಸುಖ ದೊರೆಯುವ ಸಾಧ್ಯತೆ ಇದೆ.

ವೃಷಭ ರಾಶಿ

ಅನೈತಿಕ ಮತ್ತು ಅಪ್ರಾಮಾಣಿಕ ಕಾರ್ಯ ನಿಮ್ಮನ್ನು ಆಪತ್ತಿನಲ್ಲಿ ಸಿಲುಕಿಸಬಹುದು. ಹಾಗಾಗಿ ಅವುಗಳಿಂದ ದೂರವಿರಿ. ಆಕಸ್ಮಿಕ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ಮಿಥುನ ರಾಶಿ

ಭಾವನಾತ್ಮಕ ಸಂಬಂಧ ಬೆಸೆಯುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಆರೋಗ್ಯ ಬಿಗಡಾಯಿಸುವ ಸಾಧ್ಯತೆ ಇದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಗತ್ಯ.

ಕರ್ಕ ರಾಶಿ

ಉದ್ಯಮವನ್ನು ವಿಸ್ತರಿಸಲು ಹಣ ಹೂಡಿಕೆಗೆ ಇವತ್ತು ಯೋಗ್ಯ ದಿನ. ನಿಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ ಆರ್ಥಿಕ ಲಾಭ ದೊರೆಯಲಿದೆ. ಧನಪ್ರಾಪ್ತಿಯ ಪ್ರಬಲ ಯೋಗವಿದೆ.

ಸಿಂಹ ರಾಶಿ

ಇವತ್ತು ವಸ್ತ್ರ ಮತ್ತು ಆಭರಣ ಖರೀದಿ ರೋಮಾಂಚನಕಾರಿಯಾಗಿ, ಆನಂದದಾಯಕವಾಗಿರಲಿದೆ. ವ್ಯಾಪಾರ ವೃದ್ಧಿಯಿಂದ ಮನಸ್ಸು ಉಲ್ಲಾಸಮಯವಾಗಿರುತ್ತದೆ. ಉದ್ಯಮಕ್ಕೆ ಸಮಯ ಅನುಕೂಲಕರವಾಗಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ದೊರೆಯುತ್ತದೆ.

ಕನ್ಯಾ ರಾಶಿ

ಇವತ್ತಿನ ದಿನ ನಿಮಗೆ ಮಧ್ಯಮ ಫಲದಾಯಕವಾಗಿದೆ. ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಮಧ್ಯಾಹ್ನದ ನಂತರ ಮನಸ್ಸಿಗೆ ಸಮಾಧಾನ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಸಮಯ.

ತುಲಾ ರಾಶಿ

ಉದ್ಯಮಿಗಳಿಗೆ ಇಂದು ಶುಭದಿನ. ಗೃಹಸ್ಥ ಜೀವನದಲ್ಲಿ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಅಪಕೀರ್ತಿ ಉಂಟಾಗಬಹುದು. ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಲಿದೆ. ಧನಹಾನಿಯಾಗಬಹುದು.

ವೃಶ್ಚಿಕ ರಾಶಿ

ಮಾತು ಮತ್ತು ವರ್ತನೆಯ ಮೇಲೆ ನಿಯಂತ್ರಣ ಇಟ್ಟುಕೊಂಡಲ್ಲಿ ಇತರರ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ದೂರವಿರಬಹುದು. ಇವತ್ತು ದಿನವಿಡೀ ಆಧ್ಯಾತ್ಮದೆಡೆಗೆ ನಿಮ್ಮ ಮನಸ್ಸು ಗಮನ ಹರಿಸಲಿದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಏಕಾಗ್ರತೆ ವಹಿಸಬೇಕು.

ಧನು ರಾಶಿ

ಉದ್ಯಮದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಗೃಹಸ್ಥ ಜೀವನದಲ್ಲಿ ತೊಡಕುಂಟಾಗಲಿದೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಎಂದಿನಂತಿರುತ್ತದೆ. ಮಧ್ಯಾಹ್ನದ ನಂತರ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ಬರಲಿದ್ದು, ಹತಾಶೆಯ ಭಾವನೆ ಕಾಡಬಹುದು.

ಮಕರ ರಾಶಿ

ಇವತ್ತು ಮನಸ್ಸಿನಲ್ಲಿ ಧಾರ್ಮಿಕ ಭಾವನೆಗಳು ಹೆಚ್ಚಾಗಿ ಮೂಡಲಿವೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಈಶ್ವರನನ್ನು ಆರಾಧಿಸಿ, ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಮಾಧಾನ ದೊರೆಯುತ್ತದೆ.

ಕುಂಭ ರಾಶಿ

ಇವತ್ತು ಆರ್ಥಿಕ ಲಾಭವಾಗಲಿದೆ. ಉದ್ಯಮದಲ್ಲೂ ಲಾಭ ದೊರೆಯುವ ಸಾಧ್ಯತೆ ಇದೆ. ಕುಟುಂಬದಲ್ಲೂ ಸುಖ ಶಾಂತಿ ನೆಲೆಸಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ.

ಮೀನ ರಾಶಿ

ಹಳೆ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಭವಿಷ್ಯಕ್ಕಾಗಿ ಹಣ ಕೂಡಿಡುವ ಆಲೋಚನೆ ಮನಸ್ಸಿನಲ್ಲಿ ಬರಬಹುದು. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..