ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 12-6-2018, ಮಂಗಳವಾರ

ದಿನಭವಿಷ್ಯ : 12-6-2018, ಮಂಗಳವಾರ

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ಉಪರಿ ಚತುರ್ದಶಿ ತಿಥಿ
ಮಂಗಳವಾರ, ಕೃತ್ತಿಕಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:35 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:23 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:47

ಮೇಷ ರಾಶಿ

ಕುಟುಂಬದವರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಮನೆಗೆ ಹೊಸ ಬಗೆಯ ಅಲಂಕಾರ ಮಾಡಲು ಚಿಂತನೆ ನಡೆಸಿದ್ದೀರಿ. ಕೆಲಸಗಳಲ್ಲಿ ಸಂತೃಪ್ತಿ ದೊರೆಯಲಿದೆ. ಸ್ತ್ರೀಯರಿಂದ ಹೆಚ್ಚಿನ ಗೌರವ ಸಿಗಲಿದೆ.

ವೃಷಭ ರಾಶಿ

ವಿದೇಶಕ್ಕೆ ತೆರಳಲು ಉತ್ಸುಕರಾಗಿರುವವರಿಗೆ ಉತ್ತಮ ಅವಕಾಶವಿದೆ. ಧಾರ್ಮಿಕ ಯಾತ್ರೆಯಿಂದ ಮನಸ್ಸು ಉಲ್ಲಾಸಗೊಳ್ಳಲಿದೆ. ಉದ್ಯಮ ಮತ್ತು ಕಚೇರಿಯಲ್ಲಿ ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.

ಮಿಥುನ ರಾಶಿ

ಅಶುಭ ಘಟನೆ ನಡೆಯುವ ಸಾಧ್ಯತೆ ಇದೆ. ಕೋಪದಿಂದ ನಿಮಗೇ ಹಾನಿಯಾಗಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಂಡರೆ ವಾದ-ವಿವಾದವನ್ನು ತಪ್ಪಿಸಬಹುದು. ಅಧಿಕ ಖರ್ಚಿನಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಾಗಲಿದೆ.

ಕರ್ಕ ರಾಶಿ

ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಮನರಂಜನೆ ಕೂಡ ದೊರೆಯಲಿದೆ. ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆ ಅಧಿಕವಾಗಿದೆ. ಪಾಲುದಾರಿಕೆಯಲ್ಲೂ ಲಾಭವಿದೆ. ಸಮಾಜದಲ್ಲೂ ಗೌರವ ಸಿಗಲಿದೆ.

ಸಿಂಹ ರಾಶಿ

ಚಿಂತೆಯಿಂದಾಗಿ ಮನಸ್ಸು ಅಶಾಂತಗೊಳ್ಳುತ್ತದೆ. ದೈನಂದಿನ ಕಾರ್ಯಗಳಿಗೆ ಅಡ್ಡಿ ಉಂಟಾಗಬಹುದು. ಹಿರಿಯ ಅಧಿಕಾರಿಗಳೊಂದಿಗೆ ಜಾಗರೂಕವಾಗಿ ವರ್ತಿಸಿ. ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಿಗದೇ ಇರುವುದರಿಂದ ನಿರಾಸೆ ಆವರಿಸಬಹುದು.

ಕನ್ಯಾ ರಾಶಿ

ವಿದ್ಯಾರ್ಥಿಗಳಿಗೆ ಇಂದು ಕಠಿಣ ಸಮಯ. ಮಕ್ಕಳ ಬಗ್ಗೆ ಚಿಂತೆ ಹೆಚ್ಚಲಿದೆ. ಮನಸ್ಸಿನಲ್ಲಿ ಖಿನ್ನತೆಯ ಭಾವನೆ ಮೂಡಲಿದೆ. ಇವತ್ತು ಬೌದ್ಧಿಕ ಚರ್ಚೆಯಿಂದ ದೂರವೇ ಇರುವುದು ಒಳಿತು.

ತುಲಾ ರಾಶಿ

ಶಾರೀರಿಕವಾಗಿ ಆರೋಗ್ಯವಾಗಿದ್ದರೂ ಮನಸ್ಸು ವ್ಯಾಕುಲಗೊಳ್ಳಲಿದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಜಾಗರೂಕರಾಗಿರಿ. ಯಾವುದೇ ಪ್ರಯಾಣ ಕೈಗೊಳ್ಳದಿರುವುದು ಒಳಿತು. ಸಮಾಜದಲ್ಲೂ ಗೌರವ ಕಡಿಮೆಯಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭದಿನ. ಕುಟುಂಬಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಒಡಹುಟ್ಟಿದವರೊಂದಿಗೆ ಚರ್ಚೆ ನಡೆಸಲಿದ್ದೀರಿ. ಆರ್ಥಿಕ ವೃದ್ಧಿಯಾಗಲಿದೆ. ಅಂದುಕೊಂಡ ಕಾರ್ಯಗಳೆಲ್ಲ ಯಶಸ್ವಿಯಾಗಲಿವೆ.

ಧನು ರಾಶಿ

ಇವತ್ತು ನಿಮ್ಮ ಮನಸ್ಸು ಗೊಂದಲದ ಗೂಡಾಗಲಿದೆ. ನಿಗದಿತ ಕೆಲಸಗಳು ಪೂರ್ಣಗೊಳ್ಳದೇ ಇರುವುದರಿಂದ ಮನಸ್ಸಿನಲ್ಲಿ ಹತಾಶೆಯ ಭಾವನೆ ಮೂಡಲಿದೆ. ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಡಿ. ಮನೆ ಮತ್ತು ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ.

ಮಕರ ರಾಶಿ

ಮಿತ್ರರಿಂದ ಉಪಹಾರ ದೊರೆಯಲಿದೆ. ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕೆಲಸದಿಂದ ಹಿರಿಯ ಅಧಿಕಾರಿಗಳು ಸಂತುಷ್ಟರಾಗುತ್ತಾರೆ. ಮಾನಸಿಕ ಶಾಂತಿ ನೆಲೆಸುತ್ತದೆ. ದೈಹಿಕ ಆಯಾಸವಾಗದಂತೆ ಎಚ್ಚರ ವಹಿಸಿ.

ಕುಂಭ ರಾಶಿ

ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಕುಟುಂಬದವರೊಂದಿಗೆ ವಿವಾದ ಉಂಟಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರವಿರಲಿ. ಕೋಪ ಮತ್ತು ಮಾತನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ.

ಮೀನ ರಾಶಿ

ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸಮಾಚಾರ ದೊರೆಯಬಹುದು. ಬಾಲ್ಯದ ಅಥವಾ ಹಳೆ ಸ್ನೇಹಿತರ ಭೇಟಿಯಾಗಲಿದೆ. ಉದ್ಯಮದಲ್ಲಿ ಆರ್ಥಿಕ ಲಾಭವಾಗಲಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: