ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..!! ದಿನಾಂಕ : 30/04/2018 , ಸೋಮವಾರ

ದಿನಾಂಕ : 30/04/2018 , ಸೋಮವಾರ

ರಾಹುಕಾಲ : ಬೆಳಗ್ಗೆ 7:38 ರಿಂದ 9:12
ಗುಳಿಕಕಾಲ : ಮಧ್ಯಾಹ್ನ 1:54 ರಿಂದ 3:28
ಯಮಗಂಡಕಾಲ : ಬೆಳಗ್ಗೆ 10:46 ರಿಂದ 12:20

ಮೇಷ ರಾಶಿ

ದೀರ್ಘಾವಧಿಯ ಆರ್ಥಿಕ ಯೋಜನೆಗೆ ಅನುಕೂಲಕರ ದಿನ. ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭವಿದೆ. ಉದ್ಯೋಗಿಗಳಿಗೂ ಲಾಭವಾಗುವ ಸಾಧ್ಯತೆ ಇದೆ.

ವೃಷಭ ರಾಶಿ

ದಿನದ ಆರಂಭದಲ್ಲಿ ಸ್ಪೂರ್ತಿ ಮತ್ತು ತಾಜಾತನದ ಅನುಭವವಾಗುತ್ತದೆ. ಭಾಗ್ಯವೃದ್ಧಿಯ ಅವಕಾಶಗಳು ದೊರೆಯುತ್ತವೆ. ವೇಗವಾಗಿ ಬದಲಾಗುವ ವಿಚಾರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು.

ಮಿಥುನ ರಾಶಿ

ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ನಿಗದಿತ ಕೆಲಸದಲ್ಲಿ ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಶಾರೀರಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.

ಕರ್ಕ ರಾಶಿ

ಇಂದು ಮಿತ್ರರಿಂದ ಲಾಭವಾಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಮಕ್ಕಳೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ. ಮಧ್ಯಾಹ್ನದ ನಂತರ ಆರೋಗ್ಯ ಹದಗೆಡಲಿದೆ.

ಸಿಂಹ ರಾಶಿ

ಮನೆ ಮತ್ತು ಕಚೇರಿಯಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಉದ್ಯೋಗಿಗಳಿಗೆ ಪ್ರಮೋಷನ್ ಅವಕಾಶ ಸಿಗಲಿದೆ. ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಗೃಹಸ್ಥ ಜೀವನದಲ್ಲಿ ಮಧುರತೆ ಇರುತ್ತದೆ.

ಕನ್ಯಾ ರಾಶಿ

ಹೊಸ ಕೆಲಸವನ್ನು ಆರಂಭಿಸಲು ಶುಭ ದಿನ. ಮಿತ್ರರು ಮತ್ತು ಸಂಬಂಧಿಕರನ್ನು ಭೇಟಿಯಾಗಲಿದ್ದೀರಿ. ಲಘು ಪ್ರವಾಸ ಕೈಗೊಳ್ಳಲಿದ್ದೀರಿ. ಸಮಾಜದಲ್ಲಿ ಗೌರವ ಪ್ರತಿಷ್ಠೆ ದೊರೆಯುತ್ತದೆ.

ತುಲಾ ರಾಶಿ

ಸಂಯಮ ಕಳೆದುಕೊಳ್ಳಬೇಡಿ, ಅನೈತಿಕ ವ್ಯವಹಾರ ಬೇಡ. ದುರ್ಘಟನೆಯಿಂದ ಪಾರಾಗಿ. ವ್ಯಾಪಾರ ವಿಸ್ತರಿಸಬಹುದು, ಆದಾಯ ವೃದ್ಧಿಸುತ್ತದೆ. ಧನಲಾಭ ಪ್ರಾಪ್ತಿಯಾಗಲಿದೆ.

ವೃಶ್ಚಿಕ ರಾಶಿ

ಮನೆಯಲ್ಲಿ ಸುಖ-ಶಾಂತಿ, ಆನಂದದ ವಾತಾವರಣವಿರುತ್ತದೆ. ಎಲ್ಲಾ ಕೆಲಸಗಳನ್ನೂ ಆತ್ಮವಿಶ್ವಾಸದಿಂದ ಮಾಡಿ ಮುಗಿಸಲಿದ್ದೀರಿ. ಸ್ವಭಾವದಲ್ಲಿ ಉಗ್ರತೆ ಮತ್ತು ಮಾತಿನಲ್ಲಿ ಆಕ್ರಮಣಶೀಲತೆ ಇರುತ್ತದೆ.

ಧನು ರಾಶಿ

ಇಂದು ನಿಮಗೆ ಶುಭ ದಿನ. ಗೃಹಸ್ಥ ಜೀವನದಲ್ಲಿ ಆನಂದ ತುಂಬಿರುತ್ತದೆ. ಪ್ರತಿ ಕಾರ್ಯದಲ್ಲೂ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳು ನಿಮ್ಮ ಕಾರ್ಯವನ್ನು ಮೆಚ್ಚಿಕೊಳ್ಳುತ್ತಾರೆ.

ಮಕರ ರಾಶಿ

ಊಟ, ತಿಂಡಿ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಅನಾರೋಗ್ಯ ಹಾಗೂ ಪ್ರವಾಸದಿಂದಾಗಿ ಹಣ ಖರ್ಚಾಗುತ್ತದೆ. ನಕಾರಾತ್ಮಕ ವಿಚಾರ ಮತ್ತು ಕೋಪವನ್ನು ದೂರ ಮಾಡಿಕೊಳ್ಳಿ.

ಕುಂಭ ರಾಶಿ

ಮಾತಿನ ಮೇಲೆ ಸಂಯಮ ಇರಲಿ. ಯಾವುದೇ ಘಟನೆ ಅಥವಾ ವಸ್ತುವನ್ನು ನಕಾರಾತ್ಮಕ ಭಾವನೆಯಿಂದ ನೋಡಬೇಡಿ. ಖರ್ಚು ಹೆಚ್ಚಾಗುವುದರಿಂದ ಆರ್ಥಿಕ ತೊಂದರೆ ಎದುರಾಗಬಹುದು.

ಮೀನ ರಾಶಿ

ಮನೆಯಲ್ಲಿ ಸುಖ-ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ದೈನಂದಿನ ಕೆಲಸದಲ್ಲಿ ಯಾವುದೇ ಅಡೆತಡೆ ಇಲ್ಲ. ಕೋಪ ಕಡಿಮೆ ಮಾಡಿಕೊಳ್ಳಿ. ಮಾತಿನ ಮೇಲೆ ನಿಯಂತ್ರಣ ಇರಲಿ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍