ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 07-08-2018, ಮಂಗಳವಾರ

ದಿನ ಭವಿಷ್ಯ: 07-08-2018, ಮಂಗಳವಾರ

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದಶಮಿ ಉಪರಿ ಏಕಾದಶಿ ತಿಥಿ,
ಮಂಗಳವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:37 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:20 ರಿಂದ 10:54

ಮೇಷ ರಾಶಿ

ದಿನದ ಆರಂಭದಲ್ಲೇ ಹೊಸ ಕಾರ್ಯದ ಆರಂಭಕ್ಕೆ ಉತ್ಸಾಹಿತರಾಗಿರುತ್ತೀರಿ. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸ್ನೇಹಿತರು ಸಂಬಂಧಿಕರೊಂದಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೀರಿ.

ವೃಷಭ ರಾಶಿ

ಕುಟುಂಬ ಸದಸ್ಯರ ಜೊತೆಗೆ ಅವಶ್ಯಕ ಚರ್ಚೆ ಮಾಡಲಿದ್ದೀರಿ. ಮನೆಯ ಅಲಂಕಾರದಲ್ಲಿ ಬದಲಾವಣೆ ಮಾಡಲು ಆಸಕ್ತಿ ಮೂಡಲಿದೆ. ತಾಯಿ ಜೊತೆಗೆ ಬಾಂಧವ್ಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ

ಕೌಟುಂಬಿಕ ಮತ್ತು ವ್ಯಾಪಾರಿ ಕ್ಷೇತ್ರದಲ್ಲಿ ಇವತ್ತಿನ ದಿನ ಅತ್ಯಂತ ಶುಭಫಲ ತರಲಿದೆ. ಅವಶ್ಯಕ ವಿಷಯಗಳ ಬಗ್ಗೆ ಚರ್ಚೆಯ ನಂತರ ನಿರ್ಣಾಯಕ ಸ್ಥಿತಿಗೆ ಬಂದು ತಲುಪಲಿದ್ದೀರಿ.

ಕರ್ಕ ರಾಶಿ

ಇವತ್ತು ನಿಮ್ಮ ವ್ಯವಹಾರ ನ್ಯಾಯಪೂರ್ಣವಾಗಿರುತ್ತದೆ. ನಿರ್ಧಾರಿತ ಕೆಲಸಗಳನ್ನು ಮಾಡಲು ಪ್ರೇರಣೆ ಸಿಗಲಿದೆ. ಎಷ್ಟೇ ಪರಿಶ್ರಮಪಟ್ಟರೂ, ಪ್ರಯತ್ನ ಮಾಡಿದ್ರೂ ಪರಿಣಾಮ ವಿರುದ್ಧ ದಿಸೆಯಲ್ಲಿ ಸಾಗುತ್ತಿದೆ ಎನಿಸಬಹುದು.

ಸಿಂಹ ರಾಶಿ

ಇಂದು ದಿನದ ಆರಂಭದಲ್ಲೇ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆ ಮತ್ತು ವ್ಯಗ್ರತೆಯ ಅನುಭವವಾಗಲಿದೆ. ಕೋಪ ಹೆಚ್ಚಾಗಿರುತ್ತದೆ. ಇದರಿಂದ ಯಾರೊಂದಿಗಾದ್ರೂ ಜಗಳ ಏರ್ಪಡುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಯಾವುದೇ ಹೊಸ ಕಾರ್ಯ ಅಥವಾ ಪ್ರವಾಸ ಕೈಗೊಳ್ಳಬೇಡಿ. ಕೋಪ, ದ್ವೇಷವನ್ನು ತ್ಯಜಿಸಿ ಪ್ರೇಮಪೂರ್ವಕವಾಗಿ ವ್ಯವಹರಿಸಿ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಿದ್ಧಿ ಲಭಿಸುವ ಸಾಧ್ಯತೆ ಇದೆ.

ತುಲಾ ರಾಶಿ

ದಿನದ ಆರಂಭ ಆನಂದಮಯವಾಗಿರುತ್ತದೆ. ಚಿಂತನೆಯಲ್ಲಿ ಉಗ್ರತೆ ಹೆಚ್ಚಾಗಿರುತ್ತದೆ. ಆರ್ಥಿಕ ಲಾಭವಾಗಬಹುದು. ಪ್ರವಾಸ ಕೈಗೊಳ್ಳುವ ಸಾಧ್ಯತೆ ಕೂಡ ಇದೆ.

ವೃಶ್ಚಿಕ ರಾಶಿ

ಬೌದ್ಧಿಕ ಕೆಲಸಕ್ಕೆ ಇಂದು ಶುಭ ದಿನ. ಜನರ ಜೊತೆ ಬೆರೆಯುವ ಪ್ರಯತ್ನ ಮಾಡಿ. ಸಣ್ಣದೊಂದು ಪ್ರವಾಸ ಮಾಡಬೇಕಾಗಿ ಬರಬಹುದು. ಹಣ ಮತ್ತು ಸಂಪತ್ತನ್ನು ಪಡೆಯಲು ಶುಭ ಸಮಯ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಅಧಿಕ ಶ್ರಮವಹಿಸಿದ್ರೂ ನಿರೀಕ್ಷಿತ ಫಲ ಸಿಗದೇ ಇರುವುದರಿಂದ ನಿರಾಸೆ ಆವರಿಸಬಹುದು. ಪ್ರವಾಸ, ಸುತ್ತಾಟವನ್ನು ಮುಂದೂಡಿ.

ಮಕರ ರಾಶಿ

ಇಂದು ಅಧಿಕ ಸಂವೇದನಾಶೀಲರಾಗಿರತ್ತೀರಾ. ನಿಮ್ಮ ಭಾವನೆಗಳಿಗೆ ಧಕ್ಕೆ ಬರಬಹುದು. ವಾಹನ ಚಾಲನೆ ವೇಳೆ ಜಾಗರೂಕರಾಗಿರಿ. ಅಪಾಯಕಾರಿ ವಿಚಾರ, ವರ್ತನೆಯಿಂದ ದೂರವಿರಿ.

ಕುಂಭ ರಾಶಿ

ಅವಶ್ಯಕ ಕೆಲಸಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಡಿ. ಹೊಸ ಕಾರ್ಯದ ಆರಂಭಕ್ಕೆ ಬೆಳಗಿನ ಸಮಯ ಅನುಕೂಲಕರವಾಗಿದೆ. ಮಧ್ಯಾಹ್ನದ ನಂತರ ನಿಮ್ಮ ಮಾನಸಿಕ ವ್ಯಗ್ರತೆ ಹೆಚ್ಚಲಿದೆ.

ಮೀನ ರಾಶಿ

ಸ್ವಾರ್ಥವನ್ನು ಕೈಬಿಟ್ಟು, ಪರರ ಹಿತದ ಬಗ್ಗೆಯೂ ಆಲೋಚನೆ ಮಾಡಿ. ಮನೆ ಮತ್ತು ಕಚೇರಿಯಲ್ಲಿ ಸಮಾಧಾನಕರ ವಾತಾವರಣವಿರುತ್ತದೆ. ಮಾತಿನ ಮೇಲೆ ಹಿಡಿತ ಇಟ್ಟುಕೊಂಡಲ್ಲಿ ವಾದ ವಿವಾದಗಳಿಂದ ದೂರವಿರಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..