ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 09-06-2018, ಶನಿವಾರ

ದಿನ ಭವಿಷ್ಯ : 09-06-2018, ಶನಿವಾರ

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಶನಿವಾರ, ರೇವತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:11 ರಿಂದ 10:47
ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:35
ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:35

ಮೇಷ ರಾಶಿ

ಧಾರ್ಮಿಕ ಅಥವಾ ಮಂಗಲ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ತೀರ್ಥಯಾತ್ರೆಯ ಯೋಗವಿದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಕ್ರೋಧದಿಂದಾಗಿ ಕಚೇರಿ ಮತ್ತು ಉದ್ಯಮದಲ್ಲಿ ಅಥವಾ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು.

ವೃಷಭ ರಾಶಿ

ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದ ಕಾರಣ ಹತಾಶರಾಗುತ್ತೀರಿ. ಕಾರ್ಯ ಸಫಲವಾಗಲು ಸ್ವಲ್ಪ ವಿಳಂಬವಾಗುತ್ತದೆ. ಅತಿಯಾಗಿ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತೀರಿ. ಹೊಸ ಕಾರ್ಯ ಪ್ರಾರಂಭಿಸಲು ಉಚಿತ ಸಮಯವಲ್ಲ.

ಮಿಥುನ ರಾಶಿ

ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಪಾರ್ಟಿ, ಪಿಕ್ನಿಕ್ ಅಥವಾ ಸಹಭೋಜನ ಆಯೋಜನೆ ಮಾಡಲಿದ್ದೀರಿ. ಹೊಸ ಬಟ್ಟೆ ಆಭರಣ ಮತ್ತು ವಾಹನ ಖರೀದಿ ಯೋಗವಿದೆ. ಮನಸ್ಸಿಗೆ ಆನಂದ ಸಿಗಲಿದೆ.

ಕರ್ಕ ರಾಶಿ

ಇವತ್ತು ಚಿಂತೆರಹಿತವಾಗಿ ಖುಷಿಯಾಗಿರುತ್ತೀರಾ. ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಲಿದ್ದೀರಿ. ಕೆಲಸಗಳಲ್ಲಿ ಯಶಸ್ಸು ಮತ್ತು ಸಫಲತೆ ದೊರೆಯುತ್ತದೆ. ಉದ್ಯೋಗಿಗಳಿಗೂ ಲಾಭವಿದೆ.

ಸಿಂಹ ರಾಶಿ

ಇವತ್ತು ತನು-ಮನ ಆರೋಗ್ಯವಾಗಿರಲಿದೆ. ನಿಮ್ಮ ಆಂತರಿಕ ಸೃಜನಶೀಲತೆ ಹೊಸ ರೂಪ ಪಡೆಯಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುತ್ತೀರಿ. ಪ್ರಿಯ ವ್ಯಕ್ತಿಗಳೊಂದಿಗಿನ ಭೇಟಿ ಸುಖಮಯವಾಗಿರಲಿದೆ.

ಕನ್ಯಾ ರಾಶಿ

ಇವತ್ತು ಕೊಂಚ ಪ್ರತಿಕೂಲ ಪರಿಸ್ಥಿತಿಗಳು ಎದುರಾಗಲಿವೆ. ಆರೋಗ್ಯವೂ ಸೂಕ್ಷ್ಮವಾಗಿರುತ್ತದೆ. ಮನಸ್ಸು ಚಿಂತೆಯ ಗೂಡಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಉಂಟಾಗಬಹುದು. ಕುಟುಂಬದವರ ಜೊತೆಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ.

ತುಲಾ ರಾಶಿ

ಹೊಸ ಕಾರ್ಯ ಪ್ರಾರಂಭಿಸಲು ಅನುಕೂಲಕರ ದಿನ. ಭಾಗ್ಯವೃದ್ಧಿ ಮತ್ತು ಧನಲಾಭದ ಸಾಧ್ಯತೆ ಇದೆ. ಕೌಟುಂಬಿಕ ಅಥವಾ ಕಚೇರಿ ಕೆಲಸದ ಮೇಲೆ ತುರ್ತಾಗಿ ಪ್ರಯಾಣ ಮಾಡಬೇಕಾಗುತ್ತದೆ. ಹತ್ತಿರದ ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸ ಆಯೋಜಿಸಲಿದ್ದೀರಿ.

ವೃಶ್ಚಿಕ ರಾಶಿ

ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿದೆ. ಹತ್ತಿರದ ಸಂಬಂಧಿಗಳು ಮತ್ತು ಮಿತ್ರರ ಆಗಮನವಾಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಅಲಂಕಾರಿಕ ವಸ್ತುಗಳು ಮತ್ತು ಸುಗಂಧ ದೃವ್ಯಗಳನ್ನು ಖರೀದಿಸಲಿದ್ದೀರಿ.

ಧನು ರಾಶಿ

ವಿದೇಶ ವ್ಯಾಪಾರದಿಂದ ಲಾಭವಿದೆ. ಧಾರ್ಮಿಕ ಮತ್ತು ಮಂಗಳಕರ ಕಾರ್ಯ ನೆರವೇರಿಸಲಿದ್ದೀರಿ. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಾಗಲಿದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಸಂಗಾತಿಯಿಂದ ಸುಖ ನೆಮ್ಮದಿ ಸಿಗಲಿದೆ.

ಮಕರ ರಾಶಿ

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮನಸ್ಸಿನಲ್ಲಿ ಹಿಂಜರಿಕೆಯ ಅನುಭವವಾಗುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೆಲಸದಲ್ಲಿ ವೃದ್ಧಿಯಾಗಲಿದೆ.

ಕುಂಭ ರಾಶಿ

ಮಂಗಳಕರವಾದ ಮತ್ತು ಹೊಸ ಕಾರ್ಯ ಆರಂಭಕ್ಕೆ ಅತ್ಯಂತ ಶುಭದಿನ. ಸಂಗಾತಿ ಮತ್ತು ಮಕ್ಕಳಿಂದ ಶುಭ ಸಮಾಚಾರ ದೊರೆಯಲಿದೆ. ಗೃಹಸ್ಥ ಜೀವನ ಮತ್ತು ದಾಂಪತ್ಯ ಜೀವನದಲ್ಲಿ ಸುಖ ಸಮೃದ್ಧಿಯ ಅನುಭವವಾಗಲಿದೆ.

ಮೀನ ರಾಶಿ

ನಿಮ್ಮ ಪ್ರತಿ ಕೆಲಸವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಉದ್ಯೋಗ ಮತ್ತು ಉದ್ಯಮದಲ್ಲಿ ಪದೋನ್ನತಿ ಸಿಗಲಿದೆ. ಬಾಕಿ ಹಣ ದೊರೆಯಲಿದೆ. ತಂದೆ ಅಥವಾ ಹಿರಿಯರಿಂದ ಲಾಭವಾಗಲಿದೆ. ಆರ್ಥಿಕ ಲಾಭ ಮತ್ತು ಕುಟುಂಬದಲ್ಲಿ ಆನಂದ ನೆಲೆಸುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: