ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 10-08-2018, ಶುಕ್ರವಾರ

ದಿನ ಭವಿಷ್ಯ: 10-08-2018, ಶುಕ್ರವಾರ

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಶುಕ್ರವಾರ, ಪುಷ್ಯ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:54 ರಿಂದ 12:28
ಗುಳಿಕಕಾಲ: ಬೆಳಗ್ಗೆ 7:46 ರಿಂದ 9:20
ಯಮಗಂಡಕಾಲ: ಮಧ್ಯಾಹ್ನ 3:26 ರಿಂದ 5:10

ದಿನ ವಿಶೇಷ: ಕಾತ್ಯಾಯನ ಅಮಾವಾಸ್ಯೆ

ಮೇಷ ರಾಶಿ

ಆಲೋಚನೆಯಲ್ಲಿನ ಅಸ್ಪಷ್ಟತೆ ನಿಮ್ಮಲ್ಲಿ ಗೊಂದಲ ಮೂಡಿಸಲಿದೆ. ಉದ್ಯೋಗ ಮತ್ತು ಉದ್ಯಮದಲ್ಲಿ ಸ್ಪರ್ಧಾತ್ಮಕ ವಾತಾವರಣ ಇರುತ್ತದೆ. ಅದರಿಂದ ಹೊರಬರುವ ಪ್ರಯತ್ನ ಕೂಡ ಸಫಲವಾಗಲಿದೆ.

ವೃಷಭ ರಾಶಿ

ಮನಸ್ಸಿನಲ್ಲಿರುವ ಗೊಂದಲ ದೃಢ ನಿರ್ಧಾರಕ್ಕೆ ಬರಲು ಅಡ್ಡಿಯಾಗಬಹುದು. ಇದರಿಂದ ಕೈಗೆ ಬಂದ ಅವಕಾಶ ತಪ್ಪಿ ಹೋಗುವ ಸಾಧ್ಯತೆ ಇದೆ. ಯಾರೊಂದಿಗಾದ್ರೂ ವಿನಾಕಾರಣ ಸಂಘರ್ಷ ಏರ್ಪಡುತ್ತದೆ.

ಮಿಥುನ ರಾಶಿ

ಇವತ್ತಿನ ದಿನ ಲಾಭದಾಯಕವಾಗಿರುತ್ತದೆ. ಬೆಳಗಿನಿಂದ್ಲೂ ಸ್ಪೂರ್ತಿ ಮತ್ತು ಉಲ್ಲಾಸದ ಅನುಭವವಾಗಲಿದೆ. ಮಿತ್ರರು ಮತ್ತು ಸಂಬಂಧಿಕರೊಂದಿಗೆ ಸೇರಿ ಉತ್ತಮ ಭೋಜನವನ್ನು ಸವಿಯಲಿದ್ದೀರಿ.

ಕರ್ಕ ರಾಶಿ

ಶರೀರ ಮತ್ತು ಮನಸ್ಸಿನಲ್ಲಿ ಆತಂಕ ಮತ್ತು ಅಸ್ವಸ್ಥತೆಯ ಅನುಭವವಾಗುತ್ತದೆ. ಮಾನಸಿಕ ಗೊಂದಲದಿಂದಾಗಿ ದೃಢ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕುಟುಂಬ ಸದಸ್ಯರೊಂದಿಗಿನ ಜಗಳದಿಂದಾಗಿ ಬೇಸರ ಮೂಡಲಿದೆ.

ಸಿಂಹ ರಾಶಿ

ಇವತ್ತು ನಿಮಗೆ ವಿವಿಧ ರೀತಿಯ ಲಾಭ ದೊರೆಯವ ಸಾಧ್ಯತೆ ಇದೆ. ಈ ಸಮಯದಲ್ಲಿ ಮನಸ್ಸಿನ ಅಸ್ಥಿರತೆ ನಿಮಗೆ ತೊಂದರೆ ಉಂಟುಮಾಡಬಹುದು. ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ.

ಕನ್ಯಾ ರಾಶಿ

ಹೊಸ ಕಾರ್ಯದ ಯೋಜನೆಗಳನ್ನು ಆರಂಭಿಸಲು ಇಂದು ಶುಭ ದಿನ. ವ್ಯಾಪಾರದಲ್ಲಿ ಲಾಭವಾಗಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ಉದ್ಯೋಗಿಗಳಿಗೆ ಪದೋನ್ನತಿಯ ಯೋಗವಿದೆ.

ತುಲಾ ರಾಶಿ

ದೀರ್ಘ ಪ್ರಯಾಣ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ತೆರಳುವ ಸಾಧ್ಯತೆ ಇದೆ. ವಿದೇಶ ಪ್ರಯಾಣಕ್ಕೂ ಸಮಯ ಅನುಕೂಲಕರವಾಗಿದೆ. ಮಕ್ಕಳು ಮತ್ತು ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ.

ವೃಶ್ಚಿಕ ರಾಶಿ

ಇವತ್ತು ಅತ್ಯಂತ ಸಮಾಧಾನದಿಂದಿರಿ. ಹೊಸ ಕಾರ್ಯ ಆರಂಭಿಸಬೇಡಿ. ಕೋಪ ಮತ್ತು ಅನೈತಿಕ ಕೆಲಸಗಳು ನಿಮಗೆ ಸಂಕಷ್ಟ ತರುತ್ತವೆ. ಸಮಯಕ್ಕೆ ಸರಿಯಾಗಿ ಊಟ ದೊರೆಯುವುದಿಲ್ಲ.

ಧನು ರಾಶಿ

ಬೌದ್ಧಿಕ, ತಾರ್ಕಿಕ ವಿಚಾರ ವಿನಿಮಯ ಮತ್ತು ಬರವಣಿಗೆಗೆ ಸಮಯ ಅನುಕೂಲಕರವಾಗಿದೆ. ಮನರಂಜನೆ, ಪ್ರವಾಸ, ಮಿತ್ರರ ಭೇಟಿ, ರುಚಿಕರ ಭೋಜನ, ವಸ್ತ್ರ, ಆಭರಣ ದೊರೆಯಲಿದೆ. ಪ್ರೀತಿಪಾತ್ರರೊಂದಿಗೆ ರೋಮಾಂಚನಕಾರಿ ಕ್ಷಣಗಳನ್ನು ಕಳೆಯಲಿದ್ದೀರಿ.

ಮಕರ ರಾಶಿ

ವ್ಯಾಪಾರ, ದಂಧೆಯಲ್ಲಿ ಅಭಿವೃದ್ಧಿಯಾಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನ. ಹಣದ ಕೊಡು ಕೊಳ್ಳುವಿಕೆ ಮಾಡಬಹುದು. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.

ಕುಂಭ ರಾಶಿ

ಮಕ್ಕಳು ಮತ್ತು ಆರೋಗ್ಯದ ಬಗ್ಗೆ ಆತಂಕಗೊಳ್ಳುತ್ತೀರಿ. ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ವಿಚಾರಗಳಲ್ಲಿ ತ್ವರಿತ ಬದಲಾವಣೆಯಿಂದ ಮಾನಸಿಕ ಗೊಂದಲ ಉಂಟಾಗಲಿದೆ.

ಮೀನ ರಾಶಿ

ಶಾರೀರಿಕ ಮತ್ತು ಮಾನಸಿಕ ಭಯವಿರುತ್ತದೆ. ಕುಟುಂಬಸ್ಥರೊಂದಿಗೆ ವಾದ-ವಿವಾದ ಉಂಟಾಗಬಹುದು. ತಾಯಿಯ ಆರೋಗ್ಯ ಹದಗೆಡಬಹುದು. ಬೇಡದ ಕೆಲವು ಘಟನೆಗಳು ನಡೆಯಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..