ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..!! ದಿನಾಂಕ: 17/05/2018, ಗುರುವಾರ

ದಿನಾಂಕ: 17/05/2018, ಗುರುವಾರ

ಮೇಷ ರಾಶಿ

ಇಂದು ಉಲ್ಲಾಸ ಮತ್ತು ಉತ್ಸಾಹದಿಂದ ದಿನ ಕಳೆಯಲಿದ್ದೀರಿ. ಶಾರೀರಿಕ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಇಂದು ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿವೆ.

ವೃಷಭ ರಾಶಿ

ಇವತ್ತು ಹತ್ತಾರು ಚಿಂತೆಗಳು ನಿಮ್ಮನ್ನು ಆವರಿಸುತ್ತವೆ. ಆರೋಗ್ಯದಲ್ಲೂ ಸ್ವಲ್ಪ ಏರುಪೇರಾಗಲಿದೆ. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.

ಮಿಥುನ ರಾಶಿ

ಇಂದು ವ್ಯಾಪಾರಿಗಳಿಗೆ ಅತ್ಯಂತ ಲಾಭದಾಯಕ ದಿನ. ವ್ಯಾಪಾರ ವಿಸ್ತರಿಸಲಿದೆ. ಆದಾಯ ಕೂಡ ವೃದ್ಧಿಸುತ್ತದೆ. ಆರ್ಥಿಕ ಸಮಸ್ಯೆಗಳೆಲ್ಲ ಬಗೆಹರಿಯುವ ಸಾಧ್ಯತೆ ಇದೆ.

ಕರ್ಕ ರಾಶಿ

ಇಂದು ನಿಮಗೆ ಶುಭ ದಿನ. ಉದ್ಯೋಗಿಗಳಿಗೆ ಪದೋನ್ನತಿ ಯೋಗವಿದೆ. ಕುಟುಂಬದಲ್ಲಿ ಮೈತ್ರಿಪೂರ್ವಕ ವಾತಾವರಣ ಇರುತ್ತದೆ. ಸಂಬಂಧಿಕರೊಂದಿಗೆ ಉತ್ತಮ ಒಡನಾಟ ಹೊಂದಲಿದ್ದೀರಿ.

ಸಿಂಹ ರಾಶಿ

ಇಂದು ಆಲಸ್ಯ ಮತ್ತು ಆಯಾಸ ನಿಮ್ಮನ್ನು ಕಾಡುತ್ತದೆ. ಮನಸ್ಸು ಅತ್ಯಂತ ವ್ಯಗ್ರವಾಗಲಿದೆ. ಹೊಟ್ಟೆ ನೋವಿಗೆ ಸಂಬಂಧಪಟ್ಟ ಸಮಸ್ಯೆ ಕಾಣಿಸಿಕೊಳ್ಳಬಹುದು.

ಕನ್ಯಾ ರಾಶಿ

ಊಟ-ತಿಂಡಿ ಬಗ್ಗೆ ವಿಶೇಷ ಗಮನ ಹರಿಸಿ. ಆವೇಶ ಮತ್ತು ಕೋಪ ಹೆಚ್ಚಾಗಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮಾತಿನ ಮೇಲೆ ಕೂಡ ಸಂಯಮ ಇಟ್ಟುಕೊಳ್ಳಿ.

ತುಲಾ ರಾಶಿ

ಸಾಂಸಾರಿಕ ಜೀವನದ ಆನಂದ ಅನುಭವಿಸಲಿದ್ದೀರಿ. ಕುಟುಂಬ ಸದಸ್ಯರೊಂದಿಗೆ ಸುತ್ತಾಡಲು ತೆರಳಲಿದ್ದೀರಿ. ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಮನೆಯಲ್ಲಿ ಆನಂದ ಮತ್ತು ಉಲ್ಲಾಸದ ವಾತಾವರಣ ಇರುತ್ತದೆ. ಮನಸ್ಸಿನಲ್ಲೂ ಸ್ಪೂರ್ತಿಯ ಅನುಭವವಾಗಲಿದೆ. ಪ್ರತಿಸ್ಪರ್ಧಿ ಮತ್ತು ಸ್ನೇಹಿತರ ರೂಪದಲ್ಲಿ ಶತ್ರುಗಳಿರಬಹುದು. ಆದ್ರೆ ಅವರ ಪ್ರಯತ್ನ ಫಲಿಸುವುದಿಲ್ಲ.

ಧನು ರಾಶಿ

ಇಂದು ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯವಶ್ಯ. ಉದರ ಬಾಧೆಯಿಂದ ತೊಂದರೆ ಅನುಭವಿಸಲಿದ್ದೀರಿ. ಯಾವುದೇ ಕಾರ್ಯದಲ್ಲಿ ಯಶಸ್ಸು ಸಿಗದೇ ಇರುವುದರಿಂದ ನಿರಾಸೆ ಆವರಿಸಲಿದೆ.

ಮಕರ ರಾಶಿ

ಇವತ್ತು ನಿಮ್ಮ ಪಾಲಿಗೆ ಕಠಿಣ ದಿನ. ನಿಮ್ಮಲ್ಲಿ ಸ್ಪೂರ್ತಿಯ ಅಭಾವವಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಜಗಳ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು.

ಕುಂಭ ರಾಶಿ

ನಿಮ್ಮ ಮನಸ್ಸಿನಲ್ಲಿದ್ದ ಚಿಂತೆಯ ಭಾರ ಇಳಿಯಲಿದೆ. ಮಾನಸಿಕವಾಗಿ ಪ್ರಸನ್ನತೆಯ ಅನುಭವವಾಗಲಿದೆ. ಶಾರೀರಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಮೀನ ರಾಶಿ

ನಕಾರಾತ್ಮಕ ವಿಚಾರಗಳನ್ನು ಮನಸ್ಸಿನಿಂದ ತೆಗೆದುಹಾಕಿ. ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣ ಇರಲಿ. ಯಾರೊಂದಿಗೂ ವಾದ-ವಿವಾದ ಅಥವಾ ಜಗಳದಲ್ಲಿ ತೊಡಗಬೇಡಿ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍