ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 09-07-2018, ಸೋಮವಾರ

ದಿನ ಭವಿಷ್ಯ: 09-07-2018, ಸೋಮವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಸೋಮವಾರ, ಭರಣಿ ನಕ್ಷತ್ರ ಉಪರಿ ಕೃತಿಕಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:40 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:28

ಮೇಷ ರಾಶಿ

ಇಂದು ಹಾನಿಕಾರಕ ವಿಚಾರ, ವ್ಯವಹಾರ ಮತ್ತು ಕೆಲಸಗಳಿಂದ ದೂರವಿರಿ. ಇಲ್ಲವಾದಲ್ಲಿ ದೈಹಿಕ ಆಲಸ್ಯ ಮತ್ತು ವ್ಯಾಕುಲತೆ ಉಂಟಾಗಲಿದೆ. ಆರೋಗ್ಯ ಕೊಂಚ ಏರುಪೇರಾಗಬಹುದು. ಎಲ್ಲಾ ಕೆಲಸಗಳು ಯಶಸ್ವಿಯಾಗಲಿವೆ.

ವೃಷಭ ರಾಶಿ

ಸರ್ಕಾರ ವಿರೋಧಿ ಪ್ರವೃತ್ತಿಯಿಂದ ದೂರವಿರುವುದು ಒಳಿತು. ಹೊಸ ಕಾರ್ಯವನ್ನು ಇಂದು ಆರಂಭಿಸಬೇಡಿ. ಆರೋಗ್ಯ ಹದಗೆಡಬಹುದು. ಮನಸ್ಸು ಕೂಡ ವ್ಯಗ್ರವಾಗಿರಲಿದೆ.

ಮಿಥುನ ರಾಶಿ

ಸುಖ-ಶಾಂತಿಯಿಂದ ದಿನ ಕಳೆಯಲಿದ್ದೀರಿ. ದೈನಂದಿನ ಕಾರ್ಯಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಮನಸ್ಸನ್ನು ಹಗುರವಾಗಿಸಲು ಮನರಂಜನೆಯ ಮೊರೆ ಹೋಗಲಿದ್ದೀರಿ.

ಕರ್ಕ ರಾಶಿ

ಬಹುದೊಡ್ಡ ಆರ್ಥಿಕ ಲಾಭ ನಿಮ್ಮ ಪ್ರತೀಕ್ಷೆಯಲ್ಲಿದೆ. ಉದ್ಯಮಿಗಳಿಗೆ ಇವತ್ತು ಲಾಭದಾಯಕ ದಿನ. ಕೆಲಸದ ಯಶಸ್ಸಿನಿಂದ ಪದೋನ್ನತಿ ಮತ್ತು ಗೌರವ ದೊರೆಯಲಿದೆ.

ಸಿಂಹ ರಾಶಿ

ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಒಲವು ಮೂಡಲಿದೆ. ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಉದರ ಸಂಬಂಧಿ ತೊಂದರೆಯಿಂದ ಶರೀರ ಅಸ್ವಸ್ಥವಾಗಲಿದೆ.

ಕನ್ಯಾ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚು ಗಮನಹರಿಸಿ. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಸ್ನೇಹಿತರಿಗೆ ಅಪಾಯಕಾರಿ ಸಂದರ್ಭ ಎದುರಾಗಬಹುದು.

ತುಲಾ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಇಂದು ಅನುಕೂಲಕರ ದಿನ. ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಹೊಂದುತ್ತೀರಿ. ರಹಸ್ಯ ವಿಷಯಗಳು ನಿಮ್ಮನ್ನು ಹೆಚ್ಚಾಗಿ ಆಕರ್ಷಿಸಲಿವೆ.

ವೃಶ್ಚಿಕ ರಾಶಿ

ಕುಟುಂಬದಲ್ಲಿ ಗೊಂದಲ ಅಥವಾ ಜಗಳದ ವಾತಾವರಣವಿರುತ್ತದೆ. ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳಿ. ಕೆಲಸದಲ್ಲಿ ಅಂದುಕೊಂಡ ಯಶಸ್ಸು ಸಿಗುವುದಿಲ್ಲ. ಮನಸ್ಸು ಗೊಂದಲಮಯವಾಗಿರುತ್ತದೆ.

ಧನು ರಾಶಿ

ಇಂದು ನಿಮಗೆ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಸ್ನೇಹಿತರು ಮನೆಗೆ ಭೇಟಿ ನೀಡಬಹುದು. ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸುಖ ಮತ್ತು ಆನಂದ ದೊರೆಯಲಿದೆ.

ಮಕರ ರಾಶಿ

ಯಾವುದೇ ಕಾರಣಕ್ಕೂ ಕೋರ್ಟ್ ಕಚೇರಿಗಳಲ್ಲಿ ಸಾಕ್ಷ್ಯ ನುಡಿಯಲು ಹೋಗಬೇಡಿ. ಮನಸ್ಸು ವ್ಯಗ್ರವಾಗಿರುತ್ತದೆ. ಇದರಿಂದ ಶಾರೀರಿಕವಾಗಿಯೂ ಆಲಸ್ಯ ಮತ್ತು ಅನಾರೋಗ್ಯದ ಅನುಭವವಾಗುತ್ತದೆ.

ಕುಂಭ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ಅಪರಿಚಿತ ಪತ್ರ ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು.

ಮೀನ ರಾಶಿ

ನಿಮ್ಮ ವಿಚಾರಗಳು ಇವತ್ತು ವಿಭಿನ್ನವಾಗಿರುತ್ತವೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ. ಪದೋನ್ನತಿಯ ಯೋಗವಿದೆ. ವ್ಯಾಪಾರದಲ್ಲಿ ಪ್ರಗತಿಯಾಗಲಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..