ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 07-07-2018, ಶನಿವಾರ

ದಿನ ಭವಿಷ್ಯ: 07-07-2018, ಶನಿವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಶನಿವಾರ, ರೇವತಿ ನಕ್ಷತ್ರ
ಬೆಳಗ್ಗೆ 7:40 ನಂತರ ಅಶ್ವಿನಿ ನಕ್ಷತ್ರ.

ರಾಹುಕಾಲ: ಬೆಳಗ್ಗೆ 9:16 ರಿಂದ 10:52
ಗುಳಿಕಕಾಲ: ಬೆಳಗ್ಗೆ 6:03 ರಿಂದ 7:40
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40

ಮೇಷ ರಾಶಿ

ಇವತ್ತು ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯಗತ್ಯ. ನಿಮ್ಮ ಯಾವುದೇ ಕೆಲಸ ಕಾರ್ಯಗಳು ಕೋಪದ ಕಾರಣದಿಂದ್ಲೇ ಹದಗೆಡುವ ಸಾಧ್ಯತೆ ಇದೆ. ಶರೀರದಲ್ಲಿ ಸ್ಪೂರ್ತಿಯ ಅಭಾವ ಕಾಣಿಸಿಕೊಳ್ಳಲಿದೆ.

ವೃಷಭ ರಾಶಿ

ಕೆಲಸ ಪೂರ್ಣಗೊಳ್ಳುವುದು ವಿಳಂಬವಾಗಬಹುದು. ಶಾರೀರಿಕ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಮನಸ್ಸಿನಲ್ಲಿ ಹತಾಶೆಯ ಭಾವನೆ ಉಂಟಾಗಬಹುದು. ಕೆಲಸದ ಒತ್ತಡದಿಂದಾಗಿ ಆಯಾಸ ಮತ್ತು ಆತಂಕವೂ ಹೆಚ್ಚಲಿದೆ.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಪ್ರಫುಲ್ಲರಾಗಿರುತ್ತೀರಿ. ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಪ್ರವಾಸ ಅಥವಾ ಪಾರ್ಟಿಗೆ ತೆರಳುವ ಸಾಧ್ಯತೆ ಇದೆ. ಮನರಂಜನೆಗೆ ಬೇಕಾದ ಎಲ್ಲಾ ಸಾಮಗ್ರಿಗಳು ನಿಮಗೆ ದೊರೆಯಲಿವೆ.

ಕರ್ಕ ರಾಶಿ

ಇವತ್ತು ನಿಮಗೆ ಯಶಸ್ಸು ಮತ್ತು ಸಂತೋಷ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಖುಷಿ ಖುಷಿಯಾಗಿ ದಿನ ಕಳೆಯಲಿದ್ದೀರಿ. ಉದ್ಯೋಗ ಮಾಡುವವರಿಗೆ ಲಾಭ ದೊರೆಯುವ ಸಾಧ್ಯತೆಯಿದೆ.

ಸಿಂಹ ರಾಶಿ

ಲೇಖನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಪ್ರೇರಣೆ ದೊರೆಯುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಯಶಸ್ಸು ಪಡೆಯುತ್ತಾರೆ. ಪ್ರೇಮ ಸಂಬಂಧದಲ್ಲಿ ಯಶಸ್ಸು ಸಿಗಲಿದೆ. ಪ್ರಿಯ ವ್ಯಕ್ತಿಗಳ ಭೇಟಿಯಿಂದ ಮನಸ್ಸು ಉಲ್ಲಸಿತವಾಗಲಿದೆ.

ಕನ್ಯಾ ರಾಶಿ

ಇಂದು ಪ್ರತಿ ಕಾರ್ಯದಲ್ಲೂ ಪ್ರತಿಕೂಲತೆಯ ಅನುಭವವಾಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮನಸ್ಸು ಚಿಂತಾಗ್ರಸ್ಥವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಕಲಹದಿಂದ ಮನೆಯಲ್ಲಿ ಅಶಾಂತಿಯ ವಾತಾವರಣವಿರುತ್ತದೆ.

ತುಲಾ ರಾಶಿ

ಧಾರ್ಮಿಕ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಒಡಹುಟ್ಟಿದವರೊಂದಿಗೆ ಸೌಹಾರ್ದಪೂರ್ಣ ಸಂಬಂಧ ಹೊಂದಿರುತ್ತೀರಿ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ. ವ್ಯಾವಹಾರಿಕ ಕೆಲಸಕ್ಕಾಗಿ ಹೊರಹೋಗಲಿದ್ದೀರಿ.

ವೃಶ್ಚಿಕ ರಾಶಿ

ಕೌಟುಂಬಿಕ ಜಗಳ ಮತ್ತು ದ್ವೇಷದ ವಾತಾವರಣ ಮೂಡದಂತೆ ಎಚ್ಚರ ವಹಿಸಿ. ಕುಟುಂಬದವರೊಂದಿಗೆ ಮತಭೇದ ಉಂಟಾಗದಂತೆ ಜಾಗರೂಕರಾಗಿರಿ. ಮನಸ್ಸಿನಲ್ಲಿ ಮೂಡುವ ನಕಾರಾತ್ಮಕ ಆಲೋಚನೆಗಳನ್ನು ಹೊಡೆದೋಡಿಸಿ.

ಧನು ರಾಶಿ

ಇವತ್ತು ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ತೀರ್ಥಯಾತ್ರೆಗೆ ತೆರಳುವ ಅವಕಾಶ ಒದಗಿ ಬರಬಹುದು.

ಮಕರ ರಾಶಿ

ಇವತ್ತು ಜಾಗರೂಕರಾಗಿ ಇರುವುದು ಬಹಳ ಅವಶ್ಯಕ. ಹೆಚ್ಚು ಶ್ರಮಪಟ್ಟರೂ ಅದಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವುದರಿಂದ ನಿರಾಸೆ ಆವರಿಸಬಹುದು. ಮನೆಯಲ್ಲೂ ಅಶಾಂತಿಯ ವಾತಾವರಣವಿರುತ್ತದೆ.

ಕುಂಭ ರಾಶಿ

ಇಂದು ಹೊಸ ಕಾರ್ಯಕ್ಕಾಗಿ ಯೋಜನೆ ಹಮ್ಮಿಕೊಳ್ಳಲಿದ್ದೀರಿ. ಉದ್ಯೋಗ ಮತ್ತು ಉದ್ಯಮದಲ್ಲಿ ಲಾಭ ದೊರೆಯುತ್ತದೆ. ಮಹಿಳಾ ಮಿತ್ರರಿಂದ ಸಹಕಾರ ಸಿಗಲಿದೆ. ನಿಮ್ಮ ಪ್ರಗತಿಗೆ ಸಾಥ್ ಕೊಡಲಿದ್ದಾರೆ.

ಮೀನ ರಾಶಿ

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಹಕಾರ, ಪ್ರೋತ್ಸಾಹ ಸಿಗುತ್ತದೆ. ವ್ಯಾಪಾರ ವೃದ್ಧಿಸಲಿದೆ. ಬಾಕಿ ಇರುವ ಹಣ ಮರಳಿ ಸಿಗಲಿದೆ. ಮನಸ್ಸು ಅತ್ಯಂತ ಪ್ರಸನ್ನವಾಗಿರುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..