ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 11-08-2018, ಶನಿವಾರ

ದಿನಭವಿಷ್ಯ: 11-08-2018, ಶನಿವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಶನಿವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:20 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:11 ರಿಂದ 7:46
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:36

ಮೇಷ ರಾಶಿ

ಇವತ್ತು ನಿಮ್ಮ ಮನಸ್ಸು ಹೆಚ್ಚು ಚಂಚಲವಾಗಿರುತ್ತದೆ. ಇದರಿಂದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಹತ್ವದ ಕೆಲಸವನ್ನು ಪೂರ್ಣಗೊಳಿಸಲು ಕಾಯಬೇಕಾಗುತ್ತದೆ. ಹೊಸ ಕಾರ್ಯ ಆರಂಭಕ್ಕೆ ಪ್ರೇರಣೆ ಸಿಗಲಿದೆ.

ವೃಷಭ ರಾಶಿ

ಇಂದು ಸಂಪೂರ್ಣ ಸ್ಥಿರತೆಯಿಂದ ಕೆಲಸ ಮಾಡಿ. ಇಲ್ಲವಾದಲ್ಲಿ ಒಳ್ಳೆ ಅವಕಾಶ ಕೈತಪ್ಪಿ ಹೋಗಬಹುದು. ಹಠಮಾರಿತನ ಬಿಟ್ಟು ಸಮಾಧಾನದಿಂದಿರಿ. ಪ್ರವಾಸದ ಆಯೋಜನೆ ಸಫಲವಾಗುವುದಿಲ್ಲ.

ಮಿಥುನ ರಾಶಿ

ಇವತ್ತಿನ ದಿನ ಆರ್ಥಿಕ ದೃಷ್ಟಿಯಿಂದ ಲಾಭದಾಯಕವಾಗಿದೆ. ಶಾರೀರಿಕ ಮತ್ತು ಮಾನಸಿಕವಾಗಿ ಸ್ಪೂರ್ತಿಯ ಅನುಭವವಾಗಲಿದೆ. ಸ್ವಾದಿಷ್ಟ ಭೋಜನ ಮತ್ತು ಸುಂದರ ಉಡುಪಿನ ಯೋಗವಿದೆ.

ಕರ್ಕ ರಾಶಿ

ಇಂದು ಮನಸ್ಸಿನಲ್ಲಿ ಖಿನ್ನತೆ ಮತ್ತು ಭಯ ಆವರಿಸಲಿದೆ. ಮನೆಯಲ್ಲಿ ಭಿನ್ನಾಭಿಪ್ರಾಯದಿಂದ ಕಲಹದ ವಾತಾವರಣ ಉಂಟಾಗಲಿದೆ. ಮನಸ್ಸು ಗೊಂದಲದ ಗೂಡಾಗಲಿದೆ.

ಸಿಂಹ ರಾಶಿ

ವ್ಯಾಪಾರದಲ್ಲಿ ಲಾಭವಾಗಲಿದೆ. ಆದಾಯ ವೃದ್ಧಿಸಲಿದೆ. ಉತ್ತಮ ಭೋಜನ ಪ್ರಾಪ್ತವಾಗಲಿದೆ. ಮಿತ್ರರೊಂದಿಗೆ ರಮಣೀಯ ಸ್ಥಳಕ್ಕೆ ತೆರಳಲಿದ್ದೀರಿ. ಪುತ್ರನ ಸಹಕಾರ ದೊರೆಯಲಿದೆ.

ಕನ್ಯಾ ರಾಶಿ

ಹೊಸ ಕೆಲಸಕ್ಕೆ ಯೋಜನೆ ರೂಪಿಸಲಿದ್ದೀರಿ. ಅದು ಇಂದು ಪೂರ್ಣಗೊಳ್ಳಲಿದೆ. ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೂ ಇಂದು ಶುಭ ದಿನ. ಅನಿರೀಕ್ಷಿತ ಲಾಭ ದೊರೆಯಲಿದೆ.

ತುಲಾ ರಾಶಿ

ಹೊಸ ಕೆಲಸ ಆರಂಭಿಸಲು ಪ್ರಯತ್ನಿಸಲಿದ್ದೀರಿ. ಬೌದ್ಧಿಕ ಕಾರ್ಯ ಮತ್ತು ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಲಿದ್ದೀರಿ. ತೀರ್ಥಯಾತ್ರೆಗೆ ತೆರಳುವ ಅವಕಾಶ ದೊರೆಯಲಿದೆ. ವಿದೇಶದಿಂದ ಶುಭ ಸಮಾಚಾರ ಬರುತ್ತದೆ.

ವೃಶ್ಚಿಕ ರಾಶಿ

ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕಫ, ಉಸಿರಾಟ ಮತ್ತು ಉದರ ಬಾಧೆ ಕಾಣಿಸಿಕೊಳ್ಳಬಹುದು. ಶಾರೀರಿಕ ಮತ್ತು ಮಾನಸಿಕವಾಗಿ ಅಸ್ವಸ್ಥರಾಗಿರುತ್ತೀರಿ. ಕೋಪ ನಿಯಂತ್ರಿಸಿಕೊಳ್ಳಿ.

ಧನು ರಾಶಿ

ಬೌದ್ಧಿಕ, ತಾರ್ಕಿಕ ವಿಚಾರ ವಿನಿಮಯ ಮತ್ತು ಬರವಣಿಗೆಗೆ ಶುಭ ದಿನ. ಮನರಂಜನೆ, ಪ್ರವಾಸ, ಮಿತ್ರರ ಭೇಟಿ ಸಾಧ್ಯತೆ ಇದೆ. ಭೂರಿ ಭೋಜನ ದೊರೆಯಲಿದೆ.

ಮಕರ ರಾಶಿ

ಇವತ್ತು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಶಸ್ಸು, ಕೀರ್ತಿ ಮತ್ತು ಸಂತೋಷ ನಿಮ್ಮದಾಗಲಿದೆ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ. ವ್ಯಾಪಾರ ವೃದ್ಧಿಗೆ ಇಂದು ಶುಭ ದಿನ.

ಕುಂಭ ರಾಶಿ

ಇವತ್ತಿನ ದಿನ ಸಾಮಾನ್ಯವಾಗಿರಲಿದೆ. ವೈಚಾರಿಕವಾಗಿ ಹೆಚ್ಚು ವ್ಯಗ್ರರಾಗಿರುತ್ತೀರಿ. ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಡಿ. ಯಾತ್ರೆ ಅಥವಾ ಪ್ರವಾಸಕ್ಕೆ ಅಡ್ಡಿ ಉಂಟಾಗಬಹುದು.

ಮೀನ ರಾಶಿ

ಇಂದು ಉತ್ಸಾಹ ಮತ್ತು ಸ್ಪೂರ್ತಿಯ ಅನುಭವವಾಗಲಿದೆ. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಸಂಬಂಧಿಕರು ಮತ್ತು ಮಿತ್ರರೊಂದಿಗೆ ವಾದ-ವಿವಾದ ಏರ್ಪಡಬಹುದು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..