ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 09-08-2018, ಗುರುವಾರ

ದಿನಭವಿಷ್ಯ: 09-08-2018, ಗುರುವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಗುರುವಾರ, ಆರಿದ್ರಾ ನಕ್ಷತ್ರ.
ಬೆಳಗ್ಗೆ 8:25 ನಂತರ ಪುನರ್ವಸು ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:03 ರಿಂದ 3:37
ಗುಳಿಕಕಾಲ: ಬೆಳಗ್ಗೆ 9:20 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:11 ರಿಂದ 7:46

ಮೇಷ ರಾಶಿ

ದಿನದ ಆರಂಭ ಸ್ಪೂರ್ತಿದಾಯಕವಾಗಿರುತ್ತದೆ. ಮನೆಗೆ ಸಂಬಂಧಿಕರು ಮತ್ತು ಮಿತ್ರರ ಆಗಮನವಾಗಲಿದೆ. ಅವರ ಆಕಸ್ಮಿಕ ಭೇಟಿಯಿಂದ ಖುಷಿ ದುಪ್ಪಟ್ಟಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದೆ.

ವೃಷಭ ರಾಶಿ

ನಕಾರಾತ್ಮಕ ವಿಚಾರಗಳಿಂದ ದೂರವಿರಿ. ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಯೋಚಿಸುವುದು ಒಳಿತು. ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಮನಸ್ಸು ಕೂಡ ಉದಾಸೀನಗೊಳ್ಳಲಿದೆ.

ಮಿಥುನ ರಾಶಿ

ಸಾಮಾಜಿಕ, ಆರ್ಥಿಕ, ಪಾರಿವಾರಿಕ ಕ್ಷೇತ್ರದಲ್ಲಿ ಲಾಭವಿದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ವೃದ್ಧಿಸಲಿದೆ. ಮಿತ್ರರಿಂದ ಲಾಭ ದೊರೆಯಲಿದೆ. ಅವರಿಗಾಗಿ ಹಣ ಖರ್ಚು ಮಾಡಬೇಕಾಗಿ ಬರುತ್ತದೆ.

ಕರ್ಕ ರಾಶಿ

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ನಿಮ್ಮ ಉತ್ಸಾಹ ದ್ವಿಗುಣಗೊಳ್ಳಲಿದೆ. ವೇತನ ಹೆಚ್ಚಳ ಅಥವಾ ಪದೋನ್ನತಿಯ ಸಾಧ್ಯತೆ ಇದೆ. ತಾಯಿಯ ಜೊತೆಗಿನ ನಿಕಟತೆ ಹೆಚ್ಚಲಿದೆ.

ಸಿಂಹ ರಾಶಿ

ಆಲಸ್ಯ ಮತ್ತು ಆಯಾಸ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಲಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಅಸ್ವಸ್ಥತೆಯ ಅನುಭವವಾಗಲಿದೆ. ನೌಕರಿ ಮತ್ತು ವ್ಯಾಪಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಲಿವೆ.

ಕನ್ಯಾ ರಾಶಿ

ಅತಿಯಾದ ಕೋಪದಿಂದ ಜಗಳ ಏರ್ಪಡುವ ಸಾಧ್ಯತೆ ಇದೆ. ಹಾಗಾಗಿ ಕೊಂಚ ಸಂಯಮದಿಂದಿರಿ. ಹಿತಶತ್ರುಗಳು ನಿಮಗೆ ವಿಘ್ನ ಉಂಟುಮಾಡಬಹುದು. ಎಚ್ಚರಿಕೆಯಿಂದ ಇರಿ.

ತುಲಾ ರಾಶಿ

ದೈನಂದಿನ ಕೆಲಸದ ಹೊರೆ ಕಡಿಮೆಯಾಗಲಿದೆ. ಪಾರ್ಟಿ, ಸಿನೆಮಾ, ನಾಟಕ ಅಂತಾ ಮನರಂಜನೆಯಲ್ಲಿ ಕಾಲ ಕಳೆಯಲಿದ್ದೀರಿ. ಪ್ರಿಯ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಇವತ್ತು ಕೆಲವೊಂದು ಆಕಸ್ಮಿಕ ಘಟನೆಗಳು ನಡೆಯಲಿವೆ. ಪೂರ್ವ ನಿಗದಿತ ಭೇಟಿ ರದ್ದಾಗಲಿದ್ದು, ಇದರಿಂದ ಹತಾಶೆ ಮತ್ತು ಕೋಪ ಆವರಿಸಲಿದೆ. ಅವಕಾಶಗಳು ಕೈತಪ್ಪಿ ಹೋಗುವ ಸಾಧ್ಯತೆ ಇದೆ.

ಧನು ರಾಶಿ

ಮಕ್ಕಳ ಓದು ಮತ್ತು ಆರೋಗ್ಯದ ಬಗೆಗಿನ ಚಿಂತೆಯಿಂದ ಮನಸ್ಸು ವ್ಯಗ್ರವಾಗಲಿದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲಸದಲ್ಲಿನ ಅಸಫಲತೆ ನಿಮ್ಮಲ್ಲಿ ಹತಾಶೆ ಉಂಟುಮಾಡಲಿದೆ.

ಮಕರ ರಾಶಿ

ಸ್ಪೂರ್ತಿಯ ಅಭಾವದಿಂದ ಹತಾಶೆ ಉಂಟಾಗಲಿದೆ. ಮನಸ್ಸಿನಲ್ಲಿ ಚಿಂತೆಯ ಭಾವನೆ ಮೂಡುತ್ತದೆ. ಕುಟುಂಬ ಸದಸ್ಯರೊಂದಿಗೆ ಜಗಳವಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಇವತ್ತು ನಿಮ್ಮ ಮನಸ್ಸು ಚಿಂತೆಯಿಂದ ಮುಕ್ತವಾಗಿ ಹಗುರವಾಗಲಿದೆ. ನಿಮ್ಮ ಉತ್ಸಾಹದಲ್ಲೂ ವೃದ್ಧಿಯಾಗಲಿದೆ. ಹಿರಿಯರು ಮತ್ತು ಮಿತ್ರರಿಂದ ಲಾಭದ ಅಪೇಕ್ಷೆ ಇಟ್ಟುಕೊಳ್ಳಬಹುದು.

ಮೀನ ರಾಶಿ

ಆರ್ಥಿಕ ವಹಿವಾಟುಗಳಿಗೆ ಇವತ್ತು ಶುಭದಿನ. ನಿರ್ಧಾರಿತ ಕಾರ್ಯ ಪೂರ್ಣಗೊಳಿಸಲಿದ್ದೀರಿ. ಆದಾಯ ವೃದ್ಧಿಸಲಿದೆ. ಮನೆಯಲ್ಲಿ ಸುಖ-ಶಾಂತಿಯ ವಾತಾವರಣವಿರುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..