ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 12-07-2018, ಗುರುವಾರ

ದಿನ ಭವಿಷ್ಯ : 12-07-2018, ಗುರುವಾರ

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ
ಮಧ್ಯಾಹ್ನ 12:02 ನಂತರ ಅಮಾವಾಸ್ಯೆ,
ಗುರುವಾರ, ಆರಿದ್ರಾ ನಕ್ಷತ್ರ.

ದಿನವಿಶೇಷ: ಕಾತ್ಯಾಯನ ಅಮಾವಾಸ್ಯೆ

ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:05 ರಿಂದ 7:40

ಮೇಷ ರಾಶಿ

ಇವತ್ತು ಸ್ನೇಹಿತರ ಭೇಟಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ದಿನ ಕಳೆಯಲಿದ್ದೀರಿ. ಹಣ ಖರ್ಚು ಮಾಡಬೇಕಾಗಿ ಬರಬಹುದು. ಹೊಸ ಸ್ನೇಹಿತರು ದೊರೆಯುವ ಸಾಧ್ಯತೆ ಇದೆ. ಅವರಿಂದ ಭವಿಷ್ಯದಲ್ಲಿ ನಿಮಗೆ ಲಾಭವಾಗಲಿದೆ.

ವೃಷಭ ರಾಶಿ

ಇವತ್ತು ನಿಮಗೆ ಶುಭದಿನ. ಅದರಲ್ಲೂ ಉದ್ಯಮ ಮತ್ತು ವ್ಯಾಪಾರ ಮಾಡುವವರಿಗೆ ಅಧಿಕ ಲಾಭದಾಯಕವಾಗಿದೆ. ಉದ್ಯೋಗದಲ್ಲಿ ಪದೋನ್ನತಿ ದೊರೆಯಲಿದೆ. ಹಿರಿಯ ಅಧಿಕಾರಿಗಳ ಸಹಯೋಗ ಸಿಗಲಿದೆ.

ಮಿಥುನ ರಾಶಿ

ಇವತ್ತು ನಿಮಗೆ ಪ್ರತಿಕೂಲ ದಿನ. ಮನಸ್ಸು ವ್ಯಗ್ರವಾಗಿರುತ್ತದೆ, ದೇಹ ಕೂಡ ಕ್ರೀಯಾಶೀಲವಾಗಿರುವುದಿಲ್ಲ. ಕೆಲಸ ಮಾಡುವ ಉತ್ಸಾಹ ಕಳೆದುಕೊಂಡಿರುತ್ತೀರಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ನಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ.

ಕರ್ಕ ರಾಶಿ

ಖರ್ಚು ಹೆಚ್ಚಾಗಲಿದೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರ ವಹಿಸಿ. ಇವತ್ತು ಹೊಸ ಕಾರ್ಯಗಳನ್ನು ಆರಂಭಿಸಬೇಡಿ. ಸರ್ಕಾರ ವಿರೋಧಿ ಕೆಲಸಗಳಿಂದ ದೂರವಿರಿ.

ಸಿಂಹ ರಾಶಿ

ಪತಿ ಪತ್ನಿ ನಡುವೆ ಜಗಳದಿಂದಾಗಿ ದಾಂಪತ್ಯ ಜೀವನದಲ್ಲಿ ವಿರಸ ಮೂಡಬಹುದು. ಇಬ್ಬರಲ್ಲಿ ಯಾರಾದ್ರೂ ಒಬ್ಬರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಸಾಂಸಾರಿಕ ಮತ್ತು ಇತರ ಚಿಂತೆಗಳಿಂದಾಗಿ ಮನಸ್ಸು ಉದಾಸೀನಗೊಳ್ಳಲಿದೆ.

ಕನ್ಯಾ ರಾಶಿ

ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯುತ್ತದೆ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಮನೆಯಲ್ಲಿ ಸುಖ ಸಂತೋಷ ತುಂಬಿರುತ್ತದೆ. ಆರ್ಥಿಕ ಲಾಭವಿದೆ. ಶಾರೀರಿಕ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ

ವೈಚಾರಿಕ ವೈಶಾಲ್ಯತೆ ಮತ್ತು ಮಧುರ ಮಾತುಗಳಿಂದ ಇತರರನ್ನು ಪ್ರಭಾವಿತಗೊಳಿಸಲಿದ್ದೀರಿ. ಇದರಿಂದ ಸಂಬಂಧಗಳು ಸುಧಾರಿಸಲಿವೆ. ಆದ್ರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ.

ವೃಶ್ಚಿಕ ರಾಶಿ

ಸ್ನೇಹಿತರೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಎಚ್ಚರಿಕೆಯಿಂದ ವರ್ತಿಸಿ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ವ್ಯಗ್ರತೆ ಉಂಟಾಗಲಿದೆ. ತಾಯಿಯ ಆರೋಗ್ಯ ಹದಗೆಡಬಹುದು. ನಿಮ್ಮ ಪ್ರತಿಷ್ಠೆಗೆ ಹಾನಿಯಾಗಲಿದೆ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಹೊಸ ಕಾರ್ಯದ ಶುಭಾರಂಭ ಮಾಡಲು ಸಮಯ ಅನುಕೂಲಕರವಾಗಿದೆ. ಸ್ನೇಹಿತರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ.

ಮಕರ ರಾಶಿ

ಇವತ್ತು ನಿಮಗೆ ಮಿಶ್ರಫಲವಿದೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯ ಮತ್ತು ಜಗಳದಿಂದ ಮನಸ್ಸು ಮುದುಡಬಹುದು. ನಿರರ್ಥಕವಾಗಿ ಹಣ ಖರ್ಚಾಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ.

ಕುಂಭ ರಾಶಿ

ಆರ್ಥಿಕ ದೃಷ್ಟಿಕೋನದಿಂದ ಇವತ್ತು ಲಾಭದಾಯಕ ದಿನ. ಕುಟುಂಬದಲ್ಲಿ ಆನಂದದ ವಾತಾವರಣವಿರುತ್ತದೆ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಖುಷಿಯಾಗಿ ಸಮಯ ಕಳೆಯಲಿದ್ದೀರಿ. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.

ಮೀನ ರಾಶಿ

ಇಂದಿನ ಎಲ್ಲಾ ಕಾರ್ಯಗಳನ್ನೂ ಏಕಾಗ್ರತೆಯಿಂದ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಗಮನವಹಿಸಿ. ಆತ್ಮೀಯರಿಂದ ದೂರವಾಗಬೇಕಾಗಬಹುದು. ಕುಟುಂಬದವರೊಂದಿಗೆ ಜಗಳವಾಗಲಿದೆ. ಲಾಭ ಪಡೆಯುವ ಅವಸರದಲ್ಲಿ ನಷ್ಟವಾಗದಂತೆ ಎಚ್ಚರ ವಹಿಸಿ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..