ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 08-06-2018, ಶುಕ್ರವಾರ 

ದಿನ ಭವಿಷ್ಯ : 08-06-2018, ಶುಕ್ರವಾರ

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಶುಕ್ರವಾರ, ಉತ್ತರಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:11

ಮೇಷ ರಾಶಿ

ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ಮಧ್ಯಾಹ್ನದ ನಂತರ ಹೊಸ ಕೆಲಸ ಪ್ರಾರಂಭ ಮಾಡುವುದು. ಉದ್ಯಮ ಕ್ಷೇತ್ರದಲ್ಲಿ ಜಾಗರೂಕರಾಗಿ ವ್ಯವಹರಿಸಿ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ವೃಷಭ ರಾಶಿ

ನಿಮ್ಮ ಬದುಕಿನಲ್ಲಿ ಬೇರೊಬ್ಬ ವ್ಯಕ್ತಿಯ ಪ್ರವೇಶವಾಗಲಿದೆ. ನೀವು ಬಳಸುವ ಭಾಷೆಯ ಬಗ್ಗೆ ಗಮನವಿರಲಿ, ಇಲ್ಲದೇ ಹೋದಲ್ಲಿ ವಿವಾದಕ್ಕೆ ಕಾರಣವಾಗಬಹುದು. ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಗಮನವಿರಲಿ.

ಮಿಥುನ ರಾಶಿ

ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರಲಿದೆ. ಕಚೇರಿಯಲ್ಲಿ ಸಹಯೋಗಪೂರ್ಣ ವಾತಾವರಣವಿರುತ್ತದೆ. ಸ್ನೇಹಿತರ ಜೊತೆಗೆ ಸುಂದರ ಸ್ಥಳಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ.

ಕರ್ಕ ರಾಶಿ

ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಆರೋಗ್ಯ ಸುಧಾರಿಸಲಿದೆ. ಮಾನಸಿಕವಾಗಿಯೂ ಆರೋಗ್ಯವಾಗಿರುತ್ತೀರಾ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅಪೂರ್ಣ ಕೆಲಸ ಪೂರ್ಣವಾಗಲಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ನಿಮ್ಮದೇ.

ಸಿಂಹ ರಾಶಿ

ಶಾರೀರಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ಕುಟುಂಬದವರ ಜೊತೆ ಜಗಳವಾಗುವ ಸಾಧ್ಯತೆ ಇದೆ. ಬೌದ್ಧಿಕ ಚರ್ಚೆಗಳಿಂದ ದೂರವಿರಿ. ಹಣಕಾಸು ಸಂಬಂಧಿ ಯೋಜನೆಗಳಿಗೆ ಸಮಯ ಅನುಕೂಲಕರವಾಗಿದೆ.

ಕನ್ಯಾ ರಾಶಿ

ಬಂಧುಗಳು ಮತ್ತು ಸ್ನೇಹಿತರಿಂದ ಲಾಭವಿದೆ. ಸಂಬಂಧದಲ್ಲಿ ಪ್ರೀತಿ ಮತ್ತು ಗೌರವವೇ ಪ್ರಧಾನವಾಗಲಿದೆ. ಹತ್ತಿರದ ಸಂಬಂಧಿಗಳೊಂದಿಗೆ ವಿವಾದ ಉಂಟಾಗಬಹುದು. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಜಲಾಶಯದಿಂದ ದೂರವಿರಿ.

ತುಲಾ ರಾಶಿ

ನಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಬೇಡಿ. ಕುಟುಂಬ ಸದಸ್ಯರೊಂದಿಗೆ ತಪ್ಪು ಗ್ರಹಿಕೆ ಮೂಡದಂತೆ ಎಚ್ಚರ ವಹಿಸಿ. ಹೊಸ ಕಾರ್ಯವನ್ನು ಆರಂಭಿಸಲು ಉತ್ಸುಕರಾಗಿರುತ್ತೀರಾ. ಪ್ರತಿಸ್ಪರ್ಧಿಗಳ ವಿರುದ್ಧ ಜಯ ಸಿಗಲಿದೆ.

ವೃಶ್ಚಿಕ ರಾಶಿ

ಇಂದು ಶುಭ ಸಮಾಚಾರ ದೊರೆಯುತ್ತದೆ. ಮಧ್ಯಾಹ್ನದ ನಂತರ ಕುಟುಂಬದಲ್ಲಿ ಜಗಳದ ವಾತಾವರಣ ಸೃಷ್ಟಿಯಾಗುತ್ತದೆ. ಅನಾವಶ್ಯಕ ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಆರೋಗ್ಯ ಹದಗೆಡಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಡಚಣೆಯಾಗಲಿದೆ.

ಧನು ರಾಶಿ

ಮೋಜು, ಮಸ್ತಿಗಾಗಿ ಹಣ ಖರ್ಚು ಮಾಡುತ್ತೀರಿ. ಸ್ವಭಾವದಲ್ಲಿ ವ್ಯಗ್ರತೆ ಕಾಣಿಸಿಕೊಳ್ಳಬಹುದು. ಸಂಬಂಧಿಗಳೊಂದಿಗೆ ವಿವಾದ ಏರ್ಪಡುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಶಾರೀರಿಕ ಮತ್ತು ಮಾನಸಿಕ ಪ್ರಸನ್ನತೆಯಿಂದ ಹಿತಾನುಭವ ಉಂಟಾಗಲಿದೆ.

ಮಕರ ರಾಶಿ

ಸಾಂಸಾರಿಕ ಜೀವನದಲ್ಲಿನ ಸುಖದಿಂದಾಗಿ ಮನಸ್ಸು ಪ್ರಸನ್ನವಾಗಿರುತ್ತದೆ. ಮಾತುಕತೆ ವೇಳೆ ಗೊಂದಲ ಮೂಡದಂತೆ ಎಚ್ಚರ ವಹಿಸಿ. ಮನರಂಜನೆಗಾಗಿ ಹೆಚ್ಚು ಹಣ ಖರ್ಚಾಗಲಿದೆ. ಮಾನಹಾನಿಯಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ಉದ್ಯಮ ಕ್ಷೇತ್ರದಲ್ಲಿ ಲಾಭ ದೊರೆಯಲಿದೆ. ಉದ್ಯಮ ಅಥವಾ ವ್ಯಾಪಾರದಲ್ಲಿ ಪದೋನ್ನತಿಯ ಯೋಗವಿದೆ. ಹಿಡಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.

ಮೀನ ರಾಶಿ

ಹೊಸ ಕಾರ್ಯ ಆರಂಭಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ದೂರ ಪ್ರಯಾಣ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಶರೀರದಲ್ಲಿ ಉಲ್ಲಾಸ ಮತ್ತು ಆಯಾಸ ಎರಡೂ ಅನುಭವವಾಗಲಿದೆ. ಯಾವುದೇ ವಿಘ್ನವಿಲ್ಲದೆ ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: