ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..!! ದಿನಾಂಕ : 16/05/2018, ಬುಧವಾರ

ದಿನಾಂಕ : 16/05/2018, ಬುಧವಾರ

ಮೇಷ ರಾಶಿ

ಆರ್ಥಿಕ ವ್ಯವಹಾರ, ಕೊಡು-ಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ. ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ.

ವೃಷಭ ರಾಶಿ

ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಾ. ದಿನವಿಡೀ ಸ್ಪೂರ್ತಿ ಮತ್ತು ಉಲ್ಲಾಸ ತುಂಬಿರುತ್ತದೆ.

ಮಿಥುನ ರಾಶಿ

ಇವತ್ತು ಮಾತು ಮತ್ತು ವ್ಯವಹಾರದಲ್ಲಿ ಅತ್ಯಂತ ಎಚ್ಚರಿಕೆ ಮತ್ತು ಸಮಾಧಾನವಿರಲಿ. ನಿಮ್ಮ ಮಾತಿನಿಂದ್ಲೇ ತಪ್ಪು ಗ್ರಹಿಕೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಮಾತು ಮಿತವಾಗಿರಲಿ.

ಕರ್ಕ ರಾಶಿ

ಇವತ್ತು ನಿಮಗೆ ಲಾಭದಾಯಕ ದಿನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಧನ ಲಾಭ ದೊರೆಯುವ ಸಾಧ್ಯತೆ ಇದೆ.

ಸಿಂಹ ರಾಶಿ

ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ಪ್ರತಿ ಕಾರ್ಯವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದೀರಿ. ವ್ಯಾಪಾರದಲ್ಲಿ ನಿಮ್ಮ ಬೌದ್ಧಿಕ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ.

ಕನ್ಯಾ ರಾಶಿ

ಇಂದು ನಿಮಗೆ ಅತ್ಯಂತ ಆನಂದದಾಯಕ ದಿನ. ಆರ್ಥಿಕ ಲಾಭವಾಗಲಿದೆ. ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸಮಾಚಾರ ದೊರೆಯಲಿದೆ.

ತುಲಾ ರಾಶಿ

ಹೊಸ ಕಾರ್ಯವನ್ನು ಆರಂಭಿಸದೇ ಇರುವುದು ಒಳಿತು. ನಿಮ್ಮ ಮಾತು ಮತ್ತು ವ್ಯವಹಾರದ ಮೇಲೆ ನಿಯಂತ್ರಣವಿರಲಿ. ಇಲ್ಲವಾದಲ್ಲಿ ತಪ್ಪು ಗ್ರಹಿಕೆಯಿಂದ ನಿಮಗೇ ನಷ್ಟವಾಗಬಹುದು.

ವೃಶ್ಚಿಕ ರಾಶಿ

ಇವತ್ತಿನ ದಿನವನ್ನು ಮೋಜು-ಮಸ್ತಿಯಲ್ಲಿ ಕಳೆಯಲು ಇಚ್ಛಿಸುತ್ತೀರಿ. ದೈನಿಕ ಕಾರ್ಯಗಳಿಂದ ಮುಕ್ತಿ ಪಡೆದು ನಿಮಗಾಗಿ ಕೊಂಚ ಬಿಡುವು ಮಾಡಿಕೊಳ್ಳಲಿದ್ದೀರಿ.

ಧನು ರಾಶಿ

ಇವತ್ತು ನಿಮ್ಮ ಪಾಲಿಗೆ ಶುಭ ದಿನ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಶಸ್ಸು, ಕೀರ್ತಿ ಪ್ರಾಪ್ತವಾಗಲಿದೆ. ಆನಂದವಾಗಿ ದಿನ ಕಳೆಯಲಿದ್ದೀರಿ.

ಮಕರ ರಾಶಿ

ಮನಸ್ಸಿನಲ್ಲಿ ಅಶಾಂತಿ ತುಂಬಿರುತ್ತದೆ. ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಬೇಡಿ.

ಕುಂಭ ರಾಶಿ

ಇಂದು ಅತ್ಯಂತ ಸಂವೇದನಾಶೀಲರಾಗಿರುತ್ತೀರಾ. ಇದರಿಂದ ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಮತ್ತು ಅಸ್ವಸ್ಥತೆ ಕಾಡಬಹುದು. ಒಂದು ಬಗೆಯ ಜಡತ್ವ ನಿಮ್ಮನ್ನು ಆವರಿಸಲಿದೆ.

ಮೀನ ರಾಶಿ

ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಇಂದು ಶುಭ ದಿನ. ಸಾಕಷ್ಟು ವಿಚಾರಗಳು ಮನಸ್ಸಿನಲ್ಲಿ ಮೂಡಲಿವೆ. ಸೃಜನಾತ್ಮಕ ಮತ್ತು ಕಲಾತ್ಮಕ ಶಕ್ತಿ ವೃದ್ಧಿಸಲಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍