ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 10-07-2018, ಮಂಗಳವಾರ

ದಿನ ಭವಿಷ್ಯ: 10-07-2018, ಮಂಗಳವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಮಂಗಳವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:40 ರಿಂದ 5:16
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:04
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:52

ಮೇಷ ರಾಶಿ

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಕಚೇರಿ ಕೆಲಸಕ್ಕಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ತಾಯಿ ಅಥವಾ ಸ್ತ್ರೀ ವರ್ಗದಿಂದ ಲಾಭವಾಗುವ ಸಾಧ್ಯತೆ ಇದೆ. ನಿಮ್ಮ ಯೋಜನೆಗಳಿಗೆ ಸರ್ಕಾರದಿಂದ ಸಹಕಾರ ಸಿಗಲಿದೆ.

ವೃಷಭ ರಾಶಿ

ಮನಸ್ಸು ಪ್ರಸನ್ನವಾಗಿರುತ್ತದೆ. ವಿದೇಶಕ್ಕೆ ತೆರಳಲು ಆಸಕ್ತರಾಗಿರುವವರಿಗೆ ಅನುಕೂಲಕರ ಸಮಯ. ದೂರ ಪ್ರಯಾಣ ಮಾಡುವ ಅವಕಾಶ ದೊರೆಯುತ್ತದೆ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ.

ಮಿಥುನ ರಾಶಿ

ಇಂದು ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಕೋಪದಿಂದಾಗಿ ಯಾವುದೇ ಅನಾಹುತವಾಗದಂತೆ ಎಚ್ಚರ ವಹಿಸಿ. ರೋಗಿಗಳು ಯಾವುದೇ ಮಹತ್ವದ ಚಿಕಿತ್ಸೆಗೆ ಇಂದು ಒಳಗಾಗಬೇಡಿ. ಕಾಮಾಸಕ್ತಿಯ ಬಗ್ಗೆ ಸಂಯಮ ಇರಲಿ.

ಕರ್ಕ ರಾಶಿ

ಭೌತಿಕ ಸಾಧನ, ಬಟ್ಟೆ ಇತ್ಯಾದಿಗಳನ್ನು ಖರೀದಿಸಲಿದ್ದೀರಿ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಲಿದೆ. ಉತ್ತಮ ಭೋಜನ, ವಾಹನ ಸುಖದ ಯೋಗವಿದೆ. ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರದಲ್ಲೂ ಇಂದು ಲಾಭದಾಯಕ ದಿನ.

ಸಿಂಹ ರಾಶಿ

ಹಿರಿಯ ಅಧಿಕಾರಿಗಳೊಂದಿಗೆ ವಾದ ವಿವಾದದಲ್ಲಿ ತೊಡಗಿಕೊಳ್ಳಬೇಡಿ. ತವರು ಮನೆಯಿಂದ ಆತಂಕದ ಸುದ್ದಿ ಬರಬಹುದು. ಉದಾಸೀನತೆ ಮತ್ತು ಅನುಮಾನ ನಿಮ್ಮ ಮನಸ್ಸಿನಲ್ಲಿ ಹೆಚ್ಚಾಗಿ ಮೂಡಲಿದೆ. ಇದರಿಂದ ಮಾನಸಿಕ ವ್ಯಾಕುಲತೆ ಉಂಟಾಗಲಿದೆ.

ಕನ್ಯಾ ರಾಶಿ

ಮನಸ್ಸು ಚಂಚಲಗೊಳ್ಳುವ ಸಾಧ್ಯತೆ ಇದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ನೋವು ಅನುಭವಿಸುತ್ತೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅಡಚಣೆ ಉಂಟಾಗಬಹುದು. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ.

ತುಲಾ ರಾಶಿ

ಇಂದು ಹೆಚ್ಚು ಭಾವುಕರಾಗಿರುತ್ತೀರಿ. ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಂದಾಗಿ ಚಿಂತಿತರಾಗುತ್ತೀರಿ. ಸ್ತ್ರೀಯರ ಬಗ್ಗೆ ಚಿಂತೆ ಕಾಡಲಿದೆ. ಪ್ರವಾಸಕ್ಕೆ ಇವತ್ತಿನ ದಿನ ಅನುಕೂಲಕರವಾಗಿಲ್ಲ. ನೀರಿನಿಂದ ದೂರವಿರಿ.

ವೃಶ್ಚಿಕ ರಾಶಿ

ಕೆಲಸದಲ್ಲಿ ಯಶಸ್ಸು, ಆರ್ಥಿಕ ಲಾಭ ಮತ್ತು ಭಾಗ್ಯವೃದ್ಧಿಯ ಯೋಗವಿದೆ. ಒಡಹುಟ್ಟಿದವರೊಂದಿಗೆ ಕೌಟುಂಬಿಕ ವಿಷಯಗಳ ಚರ್ಚೆಯಾಗಲಿದೆ. ತನು-ಮನದಲ್ಲಿ ಸ್ಪೂರ್ತಿ ಮತ್ತು ಆನಂದದ ಅನುಭವವಾಗಲಿದೆ. ಮಿತ್ರರು ಮತ್ತು ಸಂಬಂಧಿಕರು ಮನೆಗೆ ಆಗಮಿಸಲಿದ್ದಾರೆ.

ಧನು ರಾಶಿ

ಇಂದು ಯಾವುದೇ ಮಹತ್ವಪೂರ್ಣ ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಡಿ. ದೂರದಲ್ಲಿ ನೆಲೆಸಿರುವ ಸಂಬಂಧಿಕರಿಂದ ನಿಮಗೆ ಲಾಭವಾಗಲಿದೆ. ಕೆಲಸದ ಒತ್ತಡ ಹೆಚ್ಚಾಗಲಿದೆ.

ಮಕರ ರಾಶಿ

ಸಮಾಜದಲ್ಲಿ ಗೌರವ ದೊರೆಯಲಿದೆ. ನೌಕರಿಯಲ್ಲಿ ಪದೋನ್ನತಿ ಯೋಗವಿದೆ. ಮಿತ್ರರನ್ನು ಭೇಟಿ ಮಾಡಲಿದ್ದೀರಿ. ಗೃಹಸ್ಥಜೀವನ ಆನಂದಮಯವಾಗಿರಲಿದೆ. ದುರ್ಘಟನೆಯಿಂದ ಪೆಟ್ಟಾಗದಂತೆ ಎಚ್ಚರ ವಹಿಸಿ. ಆರೋಗ್ಯ ಉತ್ತಮವಾಗಿರಲಿದೆ.

ಕುಂಭ ರಾಶಿ

ನಿಮ್ಮ ಮಾತುಗಳಿಗೆ ಯಾರೂ ಸಹಮತ ವ್ಯಕ್ತಪಡಿಸದೇ ಇರುವ ಸಾಧ್ಯತೆ ಇದೆ. ಇತರರ ಮಾತಿನಲ್ಲಿ ಹಸ್ತಕ್ಷೇಪ ಮಾಡಬೇಡಿ. ಇದರಿಂದ ನಿಮಗೆ ನಷ್ಟವಾಗಲಿದೆ. ಭ್ರಮೆ ಮತ್ತು ಮೂಢನಂಬಿಕೆಯಿಂದ ದೂರವಿರಿ. ಕೋಪವನ್ನು ಕೂಡ ನಿಯಂತ್ರಿಸಿಕೊಳ್ಳಿ.

ಮೀನ ರಾಶಿ

ಹೊಸ ಸ್ನೇಹಿತರು ದೊರೆಯಲಿದ್ದಾರೆ. ಅವರಿಂದ ಭವಿಷ್ಯದಲ್ಲಿ ನಿಮಗೆ ಲಾಭವಾಗಲಿದೆ. ಮನೆಯಲ್ಲಿ ಶುಭ ಸಮಾಚಾರ ದೊರೆಯಲಿದೆ. ಮಕ್ಕಳಿಂದ ಲಾಭವಿದೆ. ಆಕಸ್ಮಿಕ ಧನಲಾಭ ಯೋಗವಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ ..