ನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ..! 11-07-2018, ಬುಧವಾರ

ದಿನ ಭವಿಷ್ಯ: 11-07-2018, ಬುಧವಾರ

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಮೃಗಶಿರ ನಕ್ಷತ್ರ, ಬುಧವಾರ.

ರಾಹುಕಾಲ: ಮಧ್ಯಾಹ್ನ 12:28 ರಿಂದ 2:04
ಗುಳಿಕಕಾಲ: ಬೆಳಗ್ಗೆ 10:52 ರಿಂದ 12:28
ಯಮಗಂಡಕಾಲ: ಬೆಳಗ್ಗೆ 7:40 ರಿಂದ 9:16

ಮೇಷ ರಾಶಿ

ಪ್ರವಾಸಕ್ಕೆ ಇಂದು ಅನುಕೂಲಕರ ದಿನ. ವ್ಯಾಪಾರ ಸಂಬಂಧಿ ಕೆಲಸಗಳಿಂದ್ಲೂ ಲಾಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳ ಆಯೋಜನೆಯಾಗಲಿದೆ. ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ.

ವೃಷಭ ರಾಶಿ

ಇಂದು ನಿಮಗೆ ಮಿಶ್ರಫಲವಿದೆ, ಅನುಕೂಲತೆ, ಪ್ರತಿಕೂಲತೆ ಎರಡೂ ಸಂದರ್ಭಗಳು ಎದುರಾಗುತ್ತವೆ. ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸುತ್ತೀರಿ. ಆಲಸ್ಯ ಮತ್ತು ವ್ಯಗ್ರತೆ ಮನಸ್ಸಿನಲ್ಲಿ ತುಂಬಿರುತ್ತದೆ.

ಮಿಥುನ ರಾಶಿ

ವಾಹನ ಚಾಲನೆ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಮಧ್ಯಾಹ್ನದ ನಂತರ ಬೌದ್ಧಿಕ ಮತ್ತು ಸಾಹಿತ್ಯ ಪ್ರವೃತ್ತಿಗಳ ಬಗ್ಗೆ ಆಸಕ್ತಿ ಮೂಡಲಿದೆ.

ಕರ್ಕ ರಾಶಿ

ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ. ಉದ್ಯೋಗ ಮತ್ತು ಉದ್ಯಮದಲ್ಲಿ ಅನುಕೂಲಕರ ಪರಿಸ್ಥಿತಿ ಇದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ.

ಸಿಂಹ ರಾಶಿ

ಪ್ರಬಲ ಲಾಭದ ಯೋಗವಿದೆ. ಆಕಸ್ಮಿಕವಾಗಿ ಹಣವೂ ಖರ್ಚಾಗಲಿದೆ. ಪಾಲುದಾರರೊಂದಿಗೆ ಜಗಳವಾಗಬಹುದು. ಕೋಪದ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಇಂದು ಹೊಸ ಕಾರ್ಯ ಆರಂಭಿಸಬೇಡಿ.

ಕನ್ಯಾ ರಾಶಿ

ಮನಸ್ಸು ವಿಚಲಿತವಾಗಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ವ್ಯಾಧಿಯಿಂದ ನೋವು ಅನುಭವಿಸುತ್ತೀರಿ. ವಿದ್ಯಾಭ್ಯಾಸ ಮಾಡುವವರಿಗೆ ವಿಘ್ನಗಳು ಎದುರಾಗಬಹುದು. ಆಕಸ್ಮಿಕವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.

ತುಲಾ ರಾಶಿ

ಇವತ್ತು ನಿಮಗೆ ಮಧ್ಯಮ ಫಲದಾಯಕ ದಿನ. ಶಾರೀರಿಕ ಸ್ಪೂರ್ತಿ ಮತ್ತು ಮಾನಸಿಕ ಪ್ರಸನ್ನತೆಯ ಅಭಾವವಾಗಲಿದೆ. ಮನೆಯಲ್ಲಿ ಉಗ್ರ ವಾತಾವರಣವಿರುತ್ತದೆ. ವ್ಯಾವಹಾರಿಕ ಬದುಕಿನಲ್ಲಿ ಮಾನಹಾನಿಯಾಗದಂತೆ ಎಚ್ಚರ ವಹಿಸಿ.

ವೃಶ್ಚಿಕ ರಾಶಿ

ಆಸ್ತಿ ಮತ್ತು ಗೃಹಸ್ಥ ಜೀವನಕ್ಕೆ ಸಂಬಂಧಿಸಿದಂತೆ ಆಕಸ್ಮಿಕ ಘಟನೆಗಳು ನಡೆಯಲಿವೆ. ವ್ಯಾಪಾರಿಗಳಿಗೆ ಇಂದು ಅನುಕೂಲಕರ ದಿನ. ಸಹೋದರರು ಮತ್ತು ಬಂಧುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದೀರಿ.

ಧನು ರಾಶಿ

ಆರೋಗ್ಯ ಉತ್ತಮವಾಗಿರುತ್ತದೆ. ಆಧ್ಯಾತ್ಮಿಕ ಕೆಲಸಗಳಿಗೆ ಇಂದು ಶುಭದಿನ. ಆರ್ಥಿಕ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಬೇಕು. ಮಧ್ಯಾಹ್ನದ ನಂತರ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.

ಮಕರ ರಾಶಿ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವೃತ್ತಿಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ವ್ಯಾಪಾರ ಮತ್ತು ಉದ್ಯಮದಲ್ಲೂ ಪರಿಸ್ಥಿತಿ ಅನುಕೂಲಕರವಾಗಿದೆ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

ಕುಂಭ ರಾಶಿ

ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಾದ ವಿವಾದ ಉಂಟಾಗಬಹುದು. ನಿಮ್ಮಲ್ಲಿ ಆಧ್ಯಾತ್ಮಿಕ ಭಾವನೆಗಳು ಹೆಚ್ಚಾಗಿ ಮೂಡಲಿವೆ.

ಮೀನ ರಾಶಿ

ವ್ಯಾಪಾರ ಕ್ಷೇತ್ರದಲ್ಲಿ ಇಂದು ಲಾಭದಾಯಕ ದಿನ. ವಿವಾಹ ಉತ್ಸುಕರಿಗೆ ನಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಸ್ನೇಹಿತರಿಂದ ಉತ್ತಮ ಭೋಜನ ದೊರೆಯಲಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..