ವಾವ್.. ಹೇಗಿದೆ ಗೊತ್ತಾ ಅಂಬಾನಿ ಮಗನ ಮದುವೆ ಇನ್ವಿಟೇಶನ್..? ಇದರ ಸ್ಪೆಷಾಲಿಟಿ ಏನು..?

ಮುಂಬೈ: ಗಣಿಧಣಿ ಜನಾರ್ಧನ ರೆಡ್ಡಿ ತಮ್ಮ ಮಗಳ ಮದುವೆಗೆ ಮಾಡಿಸಿದ್ದ ಆಹ್ವಾನ ಪತ್ರಿಕೆಯನ್ನೇ ನೋಡಿದ ಜನರು ಮೂಗಿನ ಮೇಲೆ ಬೆರಳಿಟ್ಟಿದ್ದರು. ಇದೀಗ ದೇಶದ ಅತ್ಯುನ್ನತ ಸಾಹುಕಾರ, ಮುಖೇಶ್​ ಅಂಬಾನಿಯ ಮಗನ ಮದುವೆಯ ಇನ್ವಿಟೇಶನ್​ ಹೇಗಿದೆ ಅದರ ರೇಟ್​ ಎಷ್ಟು ಎನ್ನುವುದು ಗೊತ್ತಾದ್ರೆ ಅದೇನ್​ ಅಂತಿರೋ?

ಆಕಾಶ್ ಅಂಬಾನಿಗೂ ಮತ್ತು ರಶೆಲ್​ ಮೆಹ್ತಾರ ಪುತ್ರಿ ಶ್ಲೋಕಾ ಮೆಹ್ತಾಗೂ ಇದೇ ವರ್ಷಾಂತ್ಯದಲ್ಲಿ ಮದುವೆ ನಡೆಯಲಿದೆ. ಈ ಸಂಬಂಧ ಇದೇ 30 ರಂದು ನಿಶ್ಚಿತಾರ್ಥ ನಡೆಯಲಿದೆ. ಇದಕ್ಕಾಗಿ ಈಗಾಗಲೇ ವಿಡಿಯೋ ಆಮಂತ್ರಣ ಮಾಡಿರೋ ಮುಖೇಶ್​ ದಂಪತಿ ಇದೀಗ ಮದುವೆ ಆಮಂತ್ರಣ ಪತ್ರಿಕೆಯ ಮಾದರಿಯನ್ನ ತರಿಸಿಕೊಂಡು ಬಹುತೇಕ ಫೈನಲ್​ ಮಾಡಿದೆಯಂತೆ.

ಬಿಳಿ ಬಾಕ್ಸ್​, ದೇವರ ಕೋಣೆಯಂತೆ ಓಪನ್​ ಮಾಡಿದರೆ ಒಳಗೊಂದು ಮಂಟಪ ಕಾಣಿಸುತ್ತೆ. ಅದರಲ್ಲಿ ಅದರೊಳಗೆ ಪುಟ್ಟ ಗಣೇಶನ ಮೂರ್ತಿ.ಅದರಡಿಯಲ್ಲಿ ಆಮಂತ್ರಣ ಪತ್ರಿಕೆ. ಇದಿಷ್ಟು ಆಮಂತ್ರಣ ಪತ್ರಿಕೆಯ ವಿಶೇಷ. ಇನ್ನೂ ಅದ್ಧೂರಿಯಾಗಿರೋ ಈ ಆಮಂತ್ರಣ ಪತ್ರಿಕೆಯೊಂದಕ್ಕೆ ಒಂದು ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಲಾಗ್ತಿದೆಯಂತೆ.

ವೀಡಿಯೋ ನೋಡಿ..

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: