ಪ್ರೀತಿ ಕಳೆದುಕೊಂಡ, ನೊಂದ ಯುವಕನಿಗೆ ಏನಂದ್ರು ಗೊತ್ತಾ ಕಿಚ್ಚ ಸುದೀಪ್..?

ಬೆಂಗಳೂರು: ಸ್ಯಾಂಡಲ್ ವುಡ್ ನಟ ಸುದೀಪ್ ಅವರು ತಮ್ಮ ಅಭಿಮಾನಿಗೆ ಲವ್ ಗುರು ಆದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು. ಅಭಿಮಾನಿಯೊಬ್ಬ ತನ್ನ ಪ್ರೀತಿಯನ್ನು ಕಳೆದುಕೊಂಡಿದ್ದು, ಆ ನೋವನ್ನು ತನ್ನ ನೆಚ್ಚಿನ ನಟ ಸುದೀಪ್ ಬಳಿ ಹೇಳುವ ಮೂಲಕ ಕಣ್ಣೀರಿಟ್ಟಿದ್ದಾರೆ. ಟ್ವಿಟ್ಟರ್ ಮೂಲಕ ತಾನು ಪ್ರೀತಿಯನ್ನು ಕಳೆದುಕೊಂಡಿರುವುದಾಗಿ ತನ್ನ ದುಃಖ ತೋಡಿಕೊಂಡಿದ್ದಾರೆ.

ಅಭಿಮಾನಿ ಟ್ವೀಟ್ ನಲ್ಲೇನಿತ್ತು?:
`ಪ್ರೀತಿ ಮಾಡೋಕೆ ಆಸ್ತಿ, ಅಂತಸ್ತು, ಅಂದ ಹಾಗೂ ಚೆಂದ ಇವೆಲ್ಲಾ ಬೇಕಾ ಬಾಸ್. ಎಲ್ಲಾ ಬಿಟ್ಟು ಹುಚ್ಚನ ತರಹ ಪ್ರೀತಿಸಿದ್ದರು ಅರ್ಥನೇ ಮಾಡಿಕೊಳ್ಳುತ್ತಿಲ್ಲ. ಸ್ನೇಹ ಕಳೆದುಕೊಳ್ಳಬೇಕಾಗುತ್ತದೆ ಎಂದು ಸುಮ್ಮನೆ ನೋವು ಅನುಭವಿಸಿದ್ದೀನಿ. ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ ಅಣ್ಣ. ಅವಳು ಇಲ್ಲದೇ ನನಗೆ ಇರೋಕೆ ಆಗಲ್ಲ ಎಂದು ಜೀವ ಎಂಬ ಅಭಿಮಾನಿಯೊಬ್ಬರು ಕಿಚ್ಚನಿಗೆ ಟ್ವೀಟ್ ಮಾಡಿದ್ದಾರೆ.

ಸುದೀಪ್ ಪ್ರತಿಕ್ರಿಯೆ:
ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಿಚ್ಚ `ಒಂದು ಜೀವನ. ಒಂದು ಅವಕಾಶ. ಪ್ರೀತಿ ಎಂದರೆ ಕೊಡುವುದು ಹೊರತು ಅದನ್ನು ಕಿತ್ತುಕೊಳ್ಳುವುದ್ದಲ್ಲ. ನಿಮ್ಮ ಕುಟುಂಬಕ್ಕೆ ನೀವು ಒಳ್ಳೆಯವರಾಗಿರಿ. ಅಲ್ಲದೇ ನಿಮ್ಮ ಜೀವನದಲ್ಲಿರುವ ವ್ಯಕ್ತಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಿಮ್ಮ ಜೀವನವನ್ನು ಅದ್ಭುತವಾಗಿರುವ ಹಾಗೆ ಮಾಡಿಕೊಳ್ಳಿ. ಸುಮ್ಮನೆ ನಿನ್ನ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ” ಎಂದು ಸುದೀಪ್ ರೀ-ಟ್ವೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಈ ಹಿಂದೆ ನಟಿಸಿದ ಮುಸ್ಸಂಜೆ ಮಾತು ಚಿತ್ರದಲ್ಲಿ ಆರ್ ಜೆ ಆಗಿ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ನೊಂದ ಮನಸ್ಸನ್ನು ಸಮಾಧಾನಪಡಿಸಿ ಅವರು ತಮ್ಮ ಜೀವನದಲ್ಲಿ ಮುಂದುವರಿಯಲು ಧೈರ್ಯ ಹೇಳುತ್ತಿದ್ದರು. ಆದರೆ ಈಗ ನಿಜ ಜೀವನದಲ್ಲೂ ಸುದೀಪ್ ಪ್ರೀತಿ ಕಳೆದುಕೊಂಡು ನೋವಲ್ಲಿರುವ ಅಭಿಮಾನಿಗೆ ಧೈರ್ಯ ಹೇಳಿದ್ದಾರೆ. ಅಲ್ಲದೇ ತನ್ನನ್ನು ಪ್ರೀತಿಸುವವರನ್ನು ಪ್ರೀತಿ ಮಾಡು ಸುಮ್ಮನೆ ಸಮಯ ವ್ಯರ್ಥ ಮಾಡಬೇಡ ಎಂದು ಬುದ್ಧಿ ಮಾತು ಹೇಳಿದ್ದಾರೆ.

ಕಿಚ್ಚ ಸುದೀಪ್ ಅವರ ಈ ಟ್ವೀಟ್‍ಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಅಭಿಮಾನಿ ಕಿಚ್ಚನ ಟ್ವೀಟ್‍ಗೆ ಪ್ರತಿಕ್ರಿಯಿಸಿ ಅಣ್ಣ ಮುತ್ತಿನಂತ ಮಾತು. ನಿಮ್ಮ ಪ್ರತಿಯೊಂದು ಟ್ವೀಟ್ ನನಗೆ ಸ್ಫೂರ್ತಿ. ತುಂಬಾ ತುಂಬಾ ಪ್ರೀತಿ ಎಂದು ಟ್ವೀಟ್ ಮಾಡಿದ್ದಾರೆ.

 👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍