ಬರೋಬ್ಬರಿ 12 ವರ್ಷಗಳ ಬಳಿಕ ಪೆಪ್ಸಿಕೋ ಸಿಇಓ ಹುದ್ದೆಯಿಂದ ಕೆಳಗಿಳಿದ ಭಾರತದ ಹೆಮ್ಮೆಯ ಮಹಿಳೆ ಪದ್ಮಭೂಷಣ ಇಂದ್ರಾ ನೂಯಿ..!

ದೀರ್ಘ ಕಾಲದವರೆಗೆ ಪೆಪ್ಸಿಕೋ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಂದ್ರಾ ನೂಯಿ ಈಗ ಆ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಭಾರತೀಯ ಮೂಲದ ಇಂದ್ರಾ ನೂಯಿ, ಕಳೆದ 12 ವರ್ಷದಿಂದ ನ್ಯೂಯಾರ್ಕ್‌ ಮೂಲದ ಸಂಸ್ಥೆಗೆ ಸಿಇಒ ಆಗಿ ಜವಾಬ್ದಾರಿ ಹೊತ್ತಿದ್ದರು. ಸಂಸ್ಥೆಯ ಅಧ್ಯಕ್ಷ ರಾಮೊನ್‌ ಲಾಗುರ್ತಾ ಅವರು ನೋಯಿ ಸ್ಥಾನದ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಸಂಸ್ಥೆ ವಿವರಿಸಿದೆ.  54 ವರ್ಷದ ರಾಮೊನ್‌ ಅವರನ್ನು ನಿರ್ದೇಶಕ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.

ಅವರ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹೇಳಿದ್ದು, ರಾಮೊನ್‌ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದಾರೆ. ಅವರ ಆಡಳಿತ ವೈಖರಿಯಿಂದ ಸಂಸ್ಥೆ ಇನ್ನಷ್ಟು ಉತ್ತಮ ಬೆಳವಣಿಗೆ ಕಾಣಲಿದೆ. ನನಗೆ ಈ ದಿನ ಒಂದು ರೀತಿಯ ಮಿಕ್ಸ್‌ಡ್‌ ಫೀಲಿಂಗ್‌ನ ದಿನ ಎಂದವರು ಹೇಳಿಕೊಂಡಿದ್ದಾರೆ.

ಕಳೆದ 24 ವರ್ಷದಿಂದ ನೂಯಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, 12 ವರ್ಷದಿಂದ ಸಿಇಒ ಆಗಿದ್ದರು. ಅಕ್ಟೋಬರ್‌ 3 ಅವರ ಅಧಿಕಾರದ ಕೊನೆ ದಿನವಾಗಿರಲಿದೆ.

ಚೆನ್ನೈನಲ್ಲಿ ಹುಟ್ಟಿದ ಇಂದ್ರಾ ಅವರು ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜಿನ ಪದವೀಧರೆ. 1994ರಲ್ಲಿ ಹಿರಿಯ ಉಪಾಧ್ಯಕ್ಷೆಯಾಗಿ ಯೋಜನೆ ವಿಭಾಗದಲ್ಲಿ ಸಂಸ್ಥೆಗೆ ಸೇರಿದ್ದರು.

ಅಂದಹಾಗೇ ತಮಿಳುನಾಡು ಮೂಲದ 62 ವರ್ಷದ ಇಂದಿರಾ ನೂಯಿ ಅವರು 1994 ರಲ್ಲಿ ಪೆಪ್ಸಿ ಕಂಪೆನಿಗೆ ಹಿರಿಯ ಉಪಾಧ್ಯಕ್ಷರಾಗಿ ಸೇರಿದ್ದರು. ಬಳಿಕ 2006 ರಲ್ಲಿ ಕಂಪೆನಿಯ ಸಿಒಇ ಹುದ್ದೆಗೆ ನೇಮಕಗೊಂಡಿದ್ದರು. ಸತತ 24 ವರ್ಷಗಳ ಕಾಲ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಂಪೆನಿಯಲ್ಲಿ ಇಷ್ಟು ವರ್ಷ ಕಾರ್ಯನಿರ್ವಹಿಸುವುದು ನನ್ನ ಜೀವಿತಾವಧಿಯ ಗೌರವ ಹಾಗೂ ಹೆಮ್ಮೆ ತಂದಿದೆ. ಸಂಸ್ಥೆಯ ಷೇರುದಾರರು ಮಾತ್ರವಲ್ಲದೇ ನಾವು ಕಾರ್ಯನಿರ್ವಹಿಸಿದ ಸಮುದಾಯಗಳಲ್ಲಿಯೂ ಉತ್ತಮವಾಗಿ ಸಾಧನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಕೇವಲ ಇಂದಿರಾ ಅವರು ಪೆಪ್ಸಿ ಕಂಪೆನಿಯಲ್ಲಿ ಮಾತ್ರ ಸಾಧನೆಯನ್ನು ಮಾಡದೆ ಇತರೇ ಸಮುದಾಯದ ಕಾರ್ಯಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರ ಭಾಗವಾಗಿ ನೂಯಿ ಅವರು 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕಮಿಟಿ (ಐಸಿಸಿ)ಗೆ ಮೊದಲ ಮಹಿಳಾ ಸ್ವತಂತ್ರ್ಯ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದರು. ಅಲ್ಲದೇ ಭಾರತದಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ಪರಿಚಯಿಸಿದ ಹೆಗ್ಗಳಿಕೆಯನ್ನು ನೂಯಿ ಹೊಂದಿದ್ದಾರೆ.

ನೂಯಿ ಅವರ ಸೇವೆಯನ್ನು ಗುರುತಿಸಿದ ಸರ್ಕಾರ ಕೇಂದ್ರ ಸರ್ಕಾರ 2017 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..