#UniteForHumanity ಅಭಿಯಾನಕ್ಕೆ ಓಗೊಟ್ಟು ಸ್ಪಂದಿಸಿದ ಸಹೃದಯಿ ಕನ್ನಡಿಗರಿಗೆ ನಾನು ಆಭಾರಿ – ನಟ ಸಿಂಬು !! ಅಭಿಯಾನಕ್ಕೆ ಕರೆ ಕೊಟ್ಟಿದ್ದು ಏಕೆ? ಅಸಲಿ ಕಾರಣವನ್ನ ತಿಳಿಸಿದ್ರು ಸಿಂಬು..

ಕಾವೇರಿ ವಿಚಾರವಾಗಿ ತಾನು ನೀಡಿದ್ದ ಕರೆಗೆ ಕನ್ನಡಿಗರು ಸ್ಪಂದಿಸಿದ ಹಿನ್ನೆಲೆಯಲ್ಲಿ ತಮಿಳು ನಟ ಸಿಂಬು ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಸಿಂಬು ಫೇಸ್​​ಬುಕ್​​ನಲ್ಲಿ ಆಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕನ್ನಡಿಗರಿಗೆ ಆಭಾರಿ..!

ನಾನು ವಿಜಯ್ ಎಸ್ ಟಿಆರ್ , ಇವತ್ತು ತುಂಬಾ ಸಂತೋಷ ಆಗ್ತಿದೆ ಕಾವೇರಿ ವಿಷಯದಲ್ಲಿ ನಾನು ಕರೆ ಕೊಟ್ಟಂತೆ ಕನ್ನಡಿಗರು ಮಾನವೀಯತೆ ಮೆರೆದಿದ್ದಾರೆ. ಅವರೆಲ್ಲರಿಗೂ ಆಬಾರಿಯಾಗಿದ್ದೇನೆ. ಇದು ತುಂಬಾ ಹೆಮ್ಮೆ ಅನಿಸುತ್ತೆ ಎಂದು ಸಿಂಬು ಆಡಿಯೋದಲ್ಲಿ ಹೇಳಿದ್ದಾರೆ.

ಅಭಿಯಾನಕ್ಕೆ ಕರೆ ಕೊಟ್ಟಿದ್ದು ಏಕೆ?

ಈ ತರಹದ ಒಂದು ಅಭಿಯಾನಕ್ಕೆ ಏಕೆ ಕರೆ ಕೊಟ್ಟೆ? ಅನ್ನೋದನ್ನು ಹೇಳೋಕೆ ಬಯಸುತ್ತೇನೆ. ಅದನ್ನು ಆಗ ಹೇಳಿದ್ದರೆ ತಪ್ಪಾಗುತ್ತಿತ್ತು. ಈಗ ಅದನ್ನು ಹೇಳೋಕೆ ಬಯಸುತ್ತೇನೆ. ಮೊದಲು ನನ್ನ ಕನ್ನಡ ಸಹೋದರ ಸಹೋದರೊಯರಿಗೆ ಧನ್ಯವಾದವನ್ನು ಹೇಳಬಯಸುತ್ತೇನೆ. ಇದುವರೆಗೂ ಕನ್ನಡಿಗರನ್ನು ಒಂದು ರೀತಿಯಲ್ಲಿ ಭಿನ್ನವಾಗಿ ಬಿಂಬಿಸಲಾಗುತ್ತಿತ್ತು.

ಕನ್ನಡಿಗರು ತಮಿಳು ದ್ವೇಷಿಗರು, ತಮಿಳರನ್ನು ತಪ್ಪಾಗಿ ನೋಡುತ್ತಾರೆ ಅಂತಾನೆ ಹೇಳಲಾಗುತ್ತಿತ್ತು. ಕನ್ನಡ- ತಮಿಳು ಬಾಂಧವ್ಯಕ್ಕೆ ಕಂಟಕ ತರುವಂತಹ ಕೆಲಸವನ್ನೇ ಎಲ್ಲರೂ ಮಾಡುತ್ತಿದ್ದರು. ಇಂಥವರ ಮುಖವಾಡವನ್ನು ಕಳಚಿ ಹಾಕಬೇಕು, ಸೌಹಾರ್ದತೆಯನ್ನು ಮೆರೆಸಬೇಕು, ಬಾಂಧವ್ಯದ ಬೆಸುಗೆಯನ್ನು ಬಲಪಡಿಸಬೇಕು ಅನ್ನೋದು ನನ್ನ ಗುರಿ. ಆ ನಿಟ್ಟಿನಲ್ಲಿ ಈ ಒಂದು ಕರೆಯನ್ನು ಕೊಟ್ಟಿದ್ದೆ. ಅದಕ್ಕೆ ಅಭೂತಪೂರ್ವ ಬೆಂಬಲ ಕನ್ನಡಿಗ ಸಹೋದರ-ಸಹೋದರಿಯರಿಂದ ಬಂದಿದೆ. ಸಹೋದರತ್ವವನ್ನು, ಮಾನವೀಯತೆಯನ್ನು ಅವರು ಮೆರೆದಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಸಿಂಬು ಹೇಳಿದ್ದಾರೆ.

ಬಾಂಧವ್ಯ ಒಡೆಯೋ ಕೆಲಸ ಮಾಡಲಾಗುತ್ತಿತ್ತು

ತಮಿಳುನಾಡಿನಲ್ಲೂ ಒಂದು ರೀತಿಯ ವಿಷಬೀಜ ಬಿತ್ತೋ ಕೆಲಸ ನಡೆದಿದೆ. ಕರ್ನಾಟಕದವರು ನೀರು ಕೊಡೋದಿಲ್ಲ ಎಂಬ ಭಾವನೆಯನ್ನು ಬಿಂಬಿಸಲಾಗುತ್ತಿದೆ. ಆದರೆ ತಮಿಳರಲ್ಲಿ ರಾಜಕೀಯವಾಗಿ ಬಿತ್ತಲಾದ ಭಾವನೆ ಈಗ ದೂರ ಆಗೋದಕ್ಕೆ, ಈ ಆಂದೋಲನ ಮುಖ್ಯ ಪಾತ್ರ ವಹಿಸಿದೆ. ಈ ಒಂದು ವಿಷಯ ಬಹಳ ದೊಡ್ಡ ಉಪಕಾರಿಯಾಗಿದೆ. ನಾನು ಅಂದುಕೊಂಡಿದ್ದನ್ನು ದೇವರು ನೆರವೇರಿಸುತ್ತಾನೆ. ಎರಡೂ ಭಾಷಿಕರ ಮಧ್ಯೆ ಬಾಂಧವ್ಯ ಒಡೆಯೋ ಕೆಲಸ ಮಾಡಲಾಗುತ್ತಿತ್ತು . ಕರ್ನಾಟಕದಲ್ಲಿ ಯಾವುದೋ ತಮಿಳುನಾಡು ಬಸ್​ಗೆ ಕಲ್ಲು ತೂರೋದನ್ನು ಅಥವಾ ತಮಿಳಿಗರ ಮೇಲೆ ಹಲ್ಲೆ ಮಾಡೋದನ್ನು ಸೆರೆ ಹಿಡಿದು ಅದನ್ನು ತಮಿಳು ಛಾನಲ್ ಗಳಲ್ಲಿ ದೊಡ್ಡದಾಗಿ ತೋರಿಸುತ್ತಿದ್ದರು.ಆದರೆ ಇವತ್ತು ಕನ್ನಡಿಗರು ತಮಿಳು ಬಾಂಧವರಿಗೆ ನೀರು ಕೊಟ್ಟಿದ್ದನ್ನು ಮಾತ್ರ ಕೆಲವೇ ಮೀಡಿಯಾಗಳು ತೋರಿಸುತ್ತಿವೆ. ಎಲ್ಲ ಮಾಧ್ಯಮಗಳು, ಈ ವಿಷಯವನ್ನು ಮರೆಮಾಚುತ್ತಿವೆ ಅನೇಕರು ಈ ವಿಷಯವನ್ನು ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಈ ಮೂಲಕ ಯಾರಿಗೂ ಸೌಹಾರ್ದತೆ ಬೇಕಾಗಿಲ್ಲ ಎನ್ನೋದು ಸ್ಪಷ್ಟವಾಗ್ತಿದೆ. ಎರಡೂ ಭಾಷಿಕರ ಮಧ್ಯೆ ಬಾಂಧವ್ಯಕ್ಕೆ ಕಂಟಕ ತರುತ್ತಿರುವವರ ಮುಖವಾಡ ಕಳಚಿ ಬಿದ್ದಿದೆ. ಹೋರಾಟದ ಹೆಸರಲ್ಲಿ ಹಿಂಸೆ ಪ್ರಚೋದಿಸಿ ಎರಡೂ ರಾಜ್ಯಗಳ ಜನರ ಮನಸ್ಸಲ್ಲಿ ಒಡಕು ಉಂಟು ಮಾಡೋದು ಯಾರು? ಎನ್ನೋದು ಬಹಿರಂಗವಾಗಿದೆ ಎಂದಿದ್ದಾರೆ.

ಇವತ್ತು ಎರಡೂ ರಾಜ್ಯಗಳ ಜನರು ನಾವೆಲ್ಲರೂ ಒಂದು, ನಾವು ಸೌಹಾರ್ದವಾಗಿದ್ದೇವೆ ಎನ್ನೋದನ್ನು ಜನ ತೋರಿಸಿದ್ದಾರೆ. ತಮಿಳುನಾಡಲ್ಲಿ ಇರಬಹುದು, ಕರ್ನಾಟಕದಲ್ಲಿ ಇರಬಹುದು ಜನರ ಮಧ್ಯೆ ಒಡಕು ಮೂಡಿಸೋರಿಗೆ ಇನ್ನು ಜಾಗ ಇಲ್ಲ ಎನ್ನೋದನ್ನ ಜನರು ತೋರಿಸಿದ್ದಾರೆ. ದೇವರು ನಮ್ಮ ಜತೆ ಇದ್ದಾನೆ. ಎಲ್ಲವೂ ಸರಿಯಾಗುತ್ತೆ. ಮಾನವೀಯತೆಗೆ ಅಂತಿಮ ಗೆಲುವು ಶತಃಸಿದ್ದ. ಹಿಂಸೆ ಯಾವತ್ತೂ ಗೆಲ್ಲುವುದಿಲ್ಲ ಪ್ರೀತಿ ಸಹಬಾಳ್ವೆಗೆ ಗೆಲುವು ಅನ್ನೋದು ಸಧ್ಯದಲ್ಲೇ ಎಲ್ಲರಿಗೂ ತಿಳಿಯುತ್ತೆ ಎಂದು ಹೇಳುವ ಮೂಲಕ ಸಿಂಬು ಕನ್ನಡಿಗರ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: