ಚಿರು-ಮೇಘನಾ ಮದುವೆ ಸಂಭ್ರಮ..!! ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಮದುವೆಯ ಜಲಕ್ ಹೇಗಿತ್ತು ಗೊತ್ತಾ..?

ಬೆಂಗಳೂರು: ಕನ್ನಡದ ಸ್ಟಾರ್​ ನಟರಾದ ಚಿರು ಸರ್ಜಾ ಮತ್ತು ಮೇಘನಾ ರಾಜ್ ಇಂದು ರೋಮನ್ ಕ್ಯಾಥೋಲಿಕ್​ ಸಂಪ್ರದಾಯದಂತೆ ಚರ್ಚ್​ನಲ್ಲಿ ರಿಂಗ್ ಬದಲಾಯಿಸಿಕೊಂಡರು. ಹೊಸೂರು ರಸ್ತೆಯಲ್ಲಿರೋ ಸೆಂಟೋ ಆ್ಯಂಟೋನಿ ಚರ್ಚ್​​ನಲ್ಲಿ ವಿವಾಹ ಸಮಾರಂಭ ನಡೆಯಿತು.

ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆ್ಯಂಥೋನೀಸ್ ಫೈರಿ ಚರ್ಚ್ ನಲ್ಲಿ ಇಂದು ಮಧ್ಯಾಹ್ನ ಮೇಘನಾ ಚಿರಂಜೀವಿ ಸರ್ಜಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ.

ಕಪ್ಪು ಬಿಎಂಡಬ್ಲ್ಯೂ ಕಾರಿನಲ್ಲಿ ಮೇಘನಾ ಹಾಗೂ ಬಿಳಿ ಕಾರಿನಲ್ಲಿ ಚಿರಂಜೀವಿ ಸರ್ಜಾ ಚರ್ಚ್ ಗೆ ಆಗಮಿಸಿದ್ದರು. ಮೇಘನಾ ಪ್ಯೂರ್ ವೈಟ್ ಗೌನ್ ತೊಟ್ಟಿದ್ದು, ಚಿರಂಜೀವಿ ಸರ್ಜಾ ಅವರು ಬ್ಲ್ಯಾಕ್ ಸೂಟ್ ತೊಟ್ಟಿದ್ದರು.

ಮದುವೆಯಲ್ಲಿ ಹಾಜರಿದ್ದ ಗಣ್ಯರು ಗ್ರೇ ಸೂಟ್ ಹಾಗೂ ಪಿಂಕ್​ ಡ್ರೆಸ್​ನಲ್ಲಿ ಆಗಮಿಸಿದ್ದು ವಿಶೇಷ. ಇನ್ನು, ಫಾದರ್ ಸಮ್ಮುಖದಲ್ಲಿ ಬೈಬಲ್ ಮುಟ್ಟಿ ಚಿರು- ಮೇಘನಾ ಪ್ರಮಾಣ ವಚನ ಸ್ವೀಕರಿಸಿದರು. ಮದುವೆ ಒಪ್ಪಿಗೆಗೆ ಚಿರು ಸರ್ಜಾ ಮತ್ತು ಮೇಘನಾ ಸಹಿ ಹಾಕಿದರು. ನಂತ್ರ ವರನ ಕಡೆಯಿಂದ ಅರ್ಜುನ್ ಸರ್ಜಾ, ಪತ್ನಿ ಆಶಾರಾಣಿ ಹಾಗೂ ಧೃವ ಸರ್ಜಾ ಹಾಗೂ ವಧು ಕಡೆಯಿಂದ ಸಂತೋಷ್ ಕೋಷಿ, ಸೋಫಿಯಾ ಕೋಷಿ ಸಹಿ ಮಾಡಿದರು.

ಮಾದರಿಯಾಗಿ ಬದುಕುತ್ತೇವೆ..
ಚರ್ಚಿನಲ್ಲಿ ರಿಂಗ್​ ಬದಲಾಯಿಸಿದ ನಂತರ ಮಾತನಾಡಿದ ಚಿರು-ಮೇಘನಾ ಮದುವೆಯ ಸಂಭ್ರಮ ಹಂಚಿಕೊಂಡರು. 10 ವರ್ಷದ ಗೆಳೆತನ, ಐದು ವರ್ಷದ ಪ್ರೀತಿಯಿಂದಾಗಿ ಇಂದು ಮದುವೆಯಾಗ್ತಿದ್ದೀವಿ. ಮುಂದೆ ಇಬ್ಬರೂ ಚೆನ್ನಾಗಿ ಬಾಳಿ, ಬದುಕಿ ಎಲ್ಲರಿಗೂ ಮಾದರಿಯಾಗಿ ಇರ್ತೀವಿ. ಅದ್ರಲ್ಲೂ, ಎರಡೆರಡು ಬಾರಿ ಮದುವೆಯಾಗ್ತಿರೋದು ತುಂಬಾ ಖುಷಿ ತಂದಿದೆ ಅಂತಾ ತಿಳಿಸಿದರು. ಅಲ್ದೇ, ಒಳ್ಳೆಯ ಸ್ಕ್ರಿಪ್ಟ್​ ಸಿಕ್ಕರೇ, ಇಬ್ಬರೂ ಒಟ್ಟಿಗೆ ನಟಿಸ್ತೀವಿ ಅಂತಾ ತಿಳಿಸಿದರು.

ಚರ್ಚ್ ಫಾದರ್ ಸಮ್ಮುಖದಲ್ಲಿ ಪ್ರೇಯರ್ ಮಾಡಿ ಎರಡು ಕುಟುಂಬಸ್ಥರು ಪ್ರೇಯರ್ ನಲ್ಲಿ ಭಾಗಿಯಾಗಿದ್ದರು. ನಂತರ ಇಬ್ಬರು ಪ್ರಮಾಣ ವಚನ ನೀಡಿ ಬೈಬಲ್ ಮುಟ್ಟಿ ವಧು ವರರು ಮದ್ವೆಗೆ ಸಂಪೂರ್ಣ ಒಪ್ಪಿಗೆ ನೀಡಿದ್ದರು. ಬಳಿಕ ಮೇಘನಾ ಚಿರುಗೆ ರಿಂಗ್ ತೊಡಿಸಿದ್ದಾರೆ. ಚಿರು ಮೇಘನಾಗೆ ಚೈನ್ ಹಾಕಿದ್ದಾರೆ. ಮೇಘನಾ ಗೌನ್ ಧರಿಸಿ ಮಿಂಚಿದ್ರೆ ಚಿರು ಸೂಟ್ ಧರಿಸಿ ಕಂಗೊಳಿಸಿದ್ದಾರೆ.

ಎರಡೂ ಕುಟುಂಬಗಳಿಗೆ ಸಿನಿಮಾ ನಂಟಿರುವುದರಿಂದ ಅನೇಕ ತಾರೆಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಹತ್ತಿರದ ಸಂಬಂಧಿಕರನ್ನ ಮಾತ್ರ ಆಹ್ವಾನಿಸಲಾಗಿತ್ತು.

ವಧು ವರರ ಜೊತೆ ಚಿತ್ರರಂಗದ ತಾರೆಯರಾದ ಹಿರಿಯ ನಟಿ ತಾರಾ, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಐಶ್ವರ್ಯ ಸರ್ಜಾ, ಪ್ರಜ್ವಲ್ ದೇವರಾಜ್ ಬಂದಿದ್ದರು. ಮೇಘನಾ ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರಾದ್ದರಿಂದ ತಾಯಿ ಕಡೆಯ ಸಂಪ್ರದಾಯದಂತೆ ಇಂದು ಮದುವೆ ನಡೆದಿದೆ. ಮೇ 2 ರಂದು ಅರಮನೆ ಮೈದಾನದಲ್ಲಿ ಮತ್ತೊಮ್ಮೆ ಹಿಂದೂ ಸಂಪ್ರದಾಯದ ಇಬ್ಬರ ಪ್ರಕಾರ ವಿವಾಹ ನಡೆಯಲಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: