ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯನ್ನ ಹಾಡಿ ಹೊಗಳಿದ್ರು ರಮ್ಯಾ..! ಮೋಹಕ ತಾರೆ ಕೊಟ್ಟ ಕಾಂಪ್ಲಿಮೆಂಟ್ ಏನು..?

ಮೋಹಕ ತಾರೆ ರಮ್ಯಾ ಸಿನಿಮಾ ಮಾಡೋದು ಬಿಟ್ಟು ಜಮಾನಾ ಆಗಿದೆ. ಆದ್ರೂ ರಮ್ಯಾ ಇವತ್ತು ಬರ್ತಾರೆ. ನಾಳೆ ಬರ್ತಾರೆ ಅನ್ನೋ ನಿರೀಕ್ಷೆಯಲ್ಲೇ ಕಾಯ್ತಾ ಇದ್ದಾನೆ ಕನ್ನಡ ಸಿನಿರಸಿಕ. ಪಾಲಿಟಿಕ್ಸ್​ನಲ್ಲೇ ರಮ್ಯಾ ಆಕ್ಟೀವ್​ ಆಗಿ ಇದ್ರೂ. ಸಿನಿಮಾದ ನಂಟು ಅವ್ರನ್ನ ಬಿಡ್ತಾ ಇಲ್ಲ. ಸಿನಿಮಾದಿಂದ ದೂರವೇ ಉಳಿದು ಬರೀ ಪೊಲಿಟಿಕಲ್​ ವಿಷಯಗಳನ್ನೇ ಟ್ವೀಟ್​ ಮಾಡಿಕೊಂಡಿದ್ದ ರಮ್ಯಾ, ಇವತ್ತು ದಿಢೀರ್​​ ಅಂತ ಕನ್ನಡದ ಈ ಟ್ರೆಂಡಿಂಗ್​ ಸ್ಟಾರ್​​ನ ಮನಃ ಪೂರ್ವಕವಾಗಿ ಹೊಗಳಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರೀ ಮಿಸ್​ ಮಾಡಿಕೊಂಡಿದ್ದ್ದ ಕಲಾವಿದ ನೀವು ಅಂದಿದ್ದಾರೆ. ರಮ್ಯಾರಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಹೊಗಳಿಸಿಕೊಂಡಿದ್ದು, ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ. ರಕ್ಷಿತ್​ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಟೀಸರ್ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಒಳ್ಳೊಳ್ಳೆ ಸಿನಿಮಾಗಳಲ್ಲಿ ನನಗೆ ಇಷ್ಟವಾದ ಸಾಕಷ್ಟು ವಿಷಯಗಳಲ್ಲಿವೆ. ನಾನಗೆ ಯಾವಾಗ್ಲೋ ಗೊತ್ತು, ಕನ್ನಡ ಸಿನಿಮಾಗಳು ಮಿಸ್​ ಮಾಡಿಕೊಳ್ತಾ ಇದ್ದ ಅದ್ಭುತ ಟೆಕ್ನಿಷೀಯನ್​ ನೀವು. ನಿಮ್ಮ ಬಗ್ಗೆ ನನಗೆ ಇವತ್ತು ತುಂಬಾ ಹೆಮ್ಮೆ ಅನ್ನಿಸ್ತಾ ಇದೆ. ಗುಡ್​ ಲಕ್​ -ರಮ್ಯಾ

ರಮ್ಯಾ ‘ಸಿಂಪಲ್​​​​​​’ ಆಗಿ ಹೀಗೆಲ್ಲಾ ಹೇಳೋದಿಲ್ಲ..!

ರಮ್ಯಾ ಈ ಥರಾ ಸಿನಿಮಾ ಸ್ಟಾರ್​ಗಳನ್ನ ಹೊಗಳೋದು ತುಂಬಾನೇ ಅಪರೂಪ, ಅದ್ರಲ್ಲೂ ಸಿನಿಮಾದ ಸಹವಾಸವೇ ಬೇಡ ಅಂತ ದೂರ ಉಳಿದಿರೋ ರಮ್ಯಾರ ಈ ಟ್ವೀಟ್​ ಹಲವು ಪ್ರಶ್ನೆಗಳನ್ನ ಹುಟ್ಟುಹಾಕುತ್ತೆ. ಪಾಲಿಟಿಕ್ಸ್​ನಲ್ಲಿ ನಿಂತ ನೀರಾಗಿರೋ ರಮ್ಯಾ ಸ್ಯಾಂಡಲ್​​ವುಡ್​ ಕಡೆ ಹರೀತಾರಾ ಅನ್ನೋ ಡೌಟ್​ ಕೂಡ ಈಗ ಹುಟ್ಟಿಕೊಂಡಿದೆ. ಆದ್ರೆ ರಕ್ಷಿತ್​ ಶೆಟ್ಟಿ ಮಾಡಿರೋ ಒಳ್ಳೆ ಟೀಸರ್‌ಗೆ ಶಹಬಾಶ್​ ಅಂದಿದ್ದಾರೆ ರಮ್ಯಾ ಅಂತಷ್ಟೆೇ ಅರ್ಥ ಮಾಡ್ಕೊಂಡು ಈ ವಿಷ್ಯನ ಸದ್ಯಕ್ಕೆ ಇಲ್ಲೇ ಬಿಡೋಣ.

ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೆಂಡಿಂಗ್ ಟೀಸರ್ ಇಲ್ಲಿದೆ ನೋಡಿ..

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: