ಪೈಲ್ವಾನ್​​​ ಅಖಾಡದಲ್ಲಿ ಕಿಚ್ಚನ ಜೊತೆ ಸುನಿಲ್​ ಶೆಟ್ಟಿ..! ಹೇಗಿರಲಿದೆ ಸುನಿಲ್ ಶೆಟ್ಟಿಯ ಸ್ಯಾಂಡಲ್‌ವುಡ್ ಎಂಟ್ರೀ..? ಇಲ್ಲಿದೆ ಡೀಟೇಲ್ಸ್

ಕಿಚ್ಚ ಸುದೀಪ ಬಾಲಿವುಡ್​ ನಟ ಸುನಿಲ್​ ಶೆಟ್ಟಿ ಸಿಸಿಎಲ್​​​​​ನಲ್ಲಿ ಪಾಲ್ಗೊಳ್ಳೋದಕ್ಕೂ ಮೊದಲೇ ಫ್ರೆಂಡ್ಸ್ ಆಗಿದವರು.. ಸಿಸಿಎಲ್​ ಆದಮೇಲಂತೂ ಈ ಸ್ಟಾರ್ಸ್​ ಇನ್ನಷ್ಟು ಕ್ಲೋಸ್​ ಆದರು. ಈಗ ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್​ ಸಿನಿಮಾದಲ್ಲಿ ಸುದೀಪ ಜೊತೆಗೆ ಸ್ಕ್ರೀನ್​ ಶೇರ್​ ಮಾಡ್ತಾ ಇದ್ದಾರೆ ಸುನಿಲ್​ ಶೆಟ್ಟಿ. ಈ ಬಗ್ಗೆ ಖುದ್ದು ಸುದೀಪ್​ ಅವ್ರೇ ಟ್ವೀಟ್​ ಮೂಲಕ ಕನ್​​​​​​​​​​ಫರ್ಮ್​ ಮಾಡಿದ್ದಾರೆ.

ಬಾಕ್ಸಿಂಗ್​ ರಿಂಗ್​ನಲ್ಲಿರ್ತಾರಾ ಆ್ಯಕ್ಷನ್​ ಹೀರೋ?
ನಾಳೆಯಿಂದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಅಂತ ನಿರ್ದೇಶಕ ಕೃಷ್ಣ ಹೇಳಿದ್ರು. ಹೆಬ್ಬುಲಿ ಚಿತ್ರದ ನಂತರ ಕೃಷ್ಣ ಸುದೀಪ್ ಸಿನಿಮಾವನ್ನ ಡೈರೆಕ್ಟ್ ಮಾಡ್ತಾ ಇದ್ದು. ಆರ್ ಆರ್ ಆರ್ ಮೋಷನ್ ಪಿಚ್ಚರ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಶೂಟಿಂಗ್ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಲಾವಿದರ ಲೀಸ್ಟ್ ಬಿಡುಗಡೆ ಮಾಡುತ್ತಿದ್ದಾರೆ ನಿರ್ದೇಶಕರು. ಈ ನಡುವೆ ಕಿಚ್ಚ ತಮ್ಮ ಸಿನಿಮಾದಲ್ಲಿ ಸುನಿಲ್​ ಶೆಟ್ಟಿ ಇರೋದನ್ನ ಶೇರ್​ ಮಾಡಿದ್ದಾರೆ.

ಈ ಮೊದಲೇ ಕನ್ನಡದಲ್ಲಿ ನಟಿಸಬೇಕಿತ್ತು ಸುನೀಲ್​ ಶೆಟ್ಟಿ
ಮೂಲತಃ ಮಂಗಳೂರಿನರಾದ ಸುನೀಲ್ ಈ ಹಿಂದೆಯೇ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಭಾಗಿ ಆಗಬೇಕಿತ್ತು. ಕಾರಣಾಂತರಗಳಿದ ಆ ಚಿತ್ರ ಸೆಟ್ಟೇರಲಿಲ್ಲ. ಆದರೆ ಈಗ ಸುದೀಪ್ ಮತ್ತು ಸುನೀಲ್ ಶೆಟ್ಟಿ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಆದರೆ ಸುನೀಲ್ ಶೆಟ್ಟಿ ಯಾವ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನುವುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ ನಿರ್ದೆಶಕರು. ಸಿನಿಮಾಕ್ಕೆ ಅರ್ಜುನ್​ ಜನ್ಯಾ ಮ್ಯೂಸಿಕ್​​, ಕರುಣಾಕರ್​ ಕ್ಯಾಮರಾ ವರ್ಕ್​​​ ಇದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍