ಶಾರೂಕ್​​ ಖಾನ್​​ ಸಹೋದರಿ ಪಾಕ್​​ ಚುನಾವಣೆಯಲ್ಲಿ ಸ್ಪರ್ಧೆ..! ಯಾರು ಆ ಶಾರೂಕ್ ಸಹೋದರಿ..?

ಪಾಕಿಸ್ತಾನ: ಬಾಲಿವುಡ್​​ ಕಿಂಗ್​​ ಖಾನ್​​ ಶಾರೂಕ್​​​ರ ಸಹೋದರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದ್ರೆ ಯಾವ ಸಹೋದರಿ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಪಾಕಿಸ್ತಾನದಲ್ಲಿರುವ​​ ಶಾರೂಕ್​​ ಸಂಬಂಧಿ ನೂರ್​​ ಜಹಾನ್​​ ಎಂಬುವವರು ಮುಂಬರುವ ಪಾಕ್​​ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರಂತೆ.

ಪಾಕಿಸ್ತಾನದ ನಿಯತಕಾಲಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಕೈಬರ್​​-ಪಾಕ್​ತುಂಕವಾ ಕ್ಷೇತ್ರದಿಂದ ನೂರ್​​ ಜಹಾನ್​​ ಕಣಕ್ಕಿಳಿಯಲಿದ್ದಾರೆ. ಇನ್ನೂ ನೂರ್​​ ಜಹಾನ್​ ಸಂಬಂಧದಲ್ಲಿ ಶಾರೂಕ್​​​ಗೆ ತಂಗಿಯಾಗಬೇಕು. ಇತ್ತೀಚೆಗೆ ನೂರ್​ಜಹಾನ್​ ಶಾರೂಕ್​​​​​ ಮನೆಯವರನ್ನು ಮೀಟ್​​ ಮಾಡಿದ್ದರಂತೆ.

ನೂರ್​ಜಹಾನ್​​ ಅವಾಮಿ ನ್ಯಾಷನಲ್​​ ಪಾರ್ಟಿಯ ಟಿಕೆಟ್​​ ಆಕಾಂಕ್ಷಿಯಾಗಿದ್ದರು. ಆದ್ರೆ ಕೊನೆಗೆ ಟಿಕೆಟ್​​ ಸಿಗದಿದ್ದರಿಂದ ಅವರ ಅಣ್ಣ ಮನಸೂರ್​​​ ಸಲಹೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಹಿಂದೆಯೂ ಕೂಡಾ ನೂರ್​​ಜಹಾನ್​ ಕೌನ್ಸಿಲರ್​​ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಇನ್ನೂ ಮನಸೂರ್​​ ಹೇಳಿರುವಂತೆ ಶಾರೂಕ್​​​​ ಖಾನ್​ರ​​ ಪೂರ್ವಜರು 1946ರಲ್ಲಿ ಭಾರತಕ್ಕೆ ವಲಸೆ ಬಂದಿದ್ದರಂತೆ. ನೂರ್​​ಜಹಾನ್​ ಕೂಡ ಹಲವು ಬಾರಿ ಭಾರತಕ್ಕೆ ಬಂದು ಶಾರೂಕ್​​​​ ಮತ್ತವರ ಕುಟುಂಬದವರ ಜೊತೆ ಕಾಲ ಕಳೆದು ಹೋಗುತ್ತಾರೆ ಎಂದು ತಿಳಿದುಬಂದಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: