ಹೈಕೋರ್ಟ್ ತೀರ್ಪಿನ ನಂತರ ಸಿ ಎಂ ಕಚೇರಿಗೆ ಲಗ್ಗೆ ಇಟ್ಟ ಕನ್ನಡ ಪರ ಸಂಘಟನೆಗಳು..! ಕಾಲ ಬಿಡುಗಡೆ ಬಗ್ಗೆ ವೈಯಕ್ತಿಕ ಹೇಳಿಕೆ ನೀಡಿದ ಹೆಚ್ ಡಿಕೆ..!! ಸಿಎಂ ಏನಂದ್ರು ಗೊತ್ತಾ..?

ಬೆಂಗಳೂರು: ಕಾಲಾ ಸಿನಿಮಾ ಬಿಡುಗಡೆ ಮಾಡಲು ನ್ಯಾಯಾಲಯ ಸೂಚನೆ ನೀಡಿದ್ದು, ಆದರೆ ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ಸಿನಿಮಾ ಬಿಡುಗಡೆ ಮಾಡದಿರುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಸಿಎಂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

ನಟ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆಗೆ ಕೋರ್ಟ್ ಪೊಲೀಸ್ ರಕ್ಷಣೆ ನೀಡುವಂತೆ ಆದೇಶ ನೀಡಿದ ಬಳಿಕ ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡಪರ ಹೋರಾಟಗಾರರು ಸಾ.ರಾ ಗೋವಿಂದ್ ಅವರ ನೇತೃತ್ವದಲ್ಲಿ ಸಿಎಂ ಕುಮಾರಸ್ವಾಮಿ ಕೃಷ್ಣ ಗೃಹ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.. ಚರ್ಚೆ ಬಳಿಕ ಮಾತನಾಡಿದ ಸಿಎಂ ಕುಮಾರ ಸ್ವಾಮಿ ಅವರು, ಸಿನಿಮಾ ಬಿಡುಗಡೆಯ ಕುರಿತು ಹೋರಾಟಗಾರರು ಹಾಗೂ ಕನ್ನಡ ಚಲನಚಿತ್ರ ಮಂಡಳಿ ಅಧ್ಯಕ್ಷರು ಕುರಿತು ಚರ್ಚೆ ನಡೆಸಿದ್ದಾರೆ. ಆದರ ನ್ಯಾಯಾಲಯದ ಸೂಚನೆಯ ಅನ್ವಯ ಚಿತ್ರ ಬಿಡುಗಡೆಗೆ ಬೇಕಾದ ಭದ್ರತೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ ಕುಮಾರಸ್ವಾಮಿ ಅವರು, ನಾನು ಸಿನಿಮಾ ನಿರ್ಮಾಣ, ಹಂಚಿಕೆ ಕುರಿತು ಅನುಭವ ಹೊಂದಿದ್ದೇನೆ. ಆದರೆ ಸಾಮಾನ್ಯ ವ್ಯಕ್ತಿಯಾಗಿ ತಾನು ಕನ್ನಡಿಗರ ಪರ ಇದ್ದೇನೆ. ಇದು ಭಾವನಾತ್ಮಕ ಅಂಶವಾಗಿರುವುದರಿಂದ ಸಿನಿಮಾ ಬಿಡುಗಡೆ ಮಾಡುವವರು ಚಿಂತನೆ ನಡೆಸಬೇಕಿದೆ. ಆದರೆ ಇಂತಹ ಸಮಯದಲ್ಲಿ ಚಿತ್ರ ಬಿಡುಗಡೆ ಸೂಕ್ತವಲ್ಲ. ಅಲ್ಲದೇ ಹೋರಾಟಗಾರರು ಚರ್ಚೆಯ ವೇಳೆ 2016 ರಲ್ಲಿ ನಾಗರಹಾವು ಸಿನಿಮಾ ಬಿಡುಗಡೆಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.

ಪೊಲೀಸ್ ರಕ್ಷಣೆ ನೀಡಲು ಮಾತ್ರ ಸೂಚನೆ – ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು 

ಕಾಲಾ ಸಿನಿಮಾ ಬಿಡುಗಡೆ ಪೊಲೀಸ್ ರಕ್ಷಣೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ, ಆದರೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾರಾ ಗೋವಿಂದು ಹೇಳಿದ್ದಾರೆ.

ಸಿಎಂ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಾರಾ ಗೋವಿಂದ್, ಸಿನಿಮಾ ಬಿಡುಗಡೆಗೆ ರಕ್ಷಣೆ ಕೊಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ ಕನ್ನಡ ಪರ ಸಂಘಟನೆಗಳಿಗೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ಪೊಲೀಸರು ಯಾವುದೇ ಪ್ರಕರಣ ದಾಖಲಿಸಿದರೂ ಭಯವಿಲ್ಲ. ಈ ವಿಚಾರದಲ್ಲಿ ಜೈಲಿಗೂ ಹೋಗಲು ಸಿದ್ಧ. ಕಾಲಾ ಸಿನಿಮಾ ಬಿಡುಗಡೆಯನ್ನು ತಡೆದು ನಿಲ್ಲಿಸುತ್ತೇವೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ನಟ ರಜಿನಿಕಾಂತ್ ಅವರು ನೀಡಿರುವ ಹೇಳಿಕೆಗಳು ಸರಿಯಿಲ್ಲ. ಅದ್ದರಿಂದ ಕಾಲಾ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಸಾರಾ ಗೋವಿಂದು ಅವರು ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: