ಬಿಗ್ ಬಾಸ್ ನಲ್ಲಿ ನಟಿ ಪೂಜಾ ಗಾಂಧಿಗೆ ಕೈಕೊಟ್ಟಿದ್ದ ಕ್ರಿಕೆಟಿಗ ಐಯ್ಯಪ್ಪ, ಇದೀಗ ಮತ್ತೊಬ್ಬ ನಟಿ ಜೊತೆ ನಿಶ್ಚಿತಾರ್ಥ..! ಅಯ್ಯಪ್ಪ ಮದುವೆಯಾಗ್ತಿರೋ ಹುಡುಗಿ ಯಾರು ಗೊತ್ತಾ..?

ಬೆಂಗಳೂರು: ಬಿಗ್ ಬಾಸ್​ ಖ್ಯಾತಿಯ ಕ್ರಿಕೆಟಿಗ ಎನ್​.ಸಿ ಅಯ್ಯಪ್ಪ ಹಾಗೂ ನಟಿ ಮಾಳೇಟಿರ ಅನು ಅವರ ನಿಶ್ಚಿತಾರ್ಥ ಇಂದು ನಡೆಯಿತು. ಕಳೆದ ಒಂದು ವರ್ಷಗಳಿಂದ ಪ್ರೇಮ ಪಕ್ಷಿಗಳಂತೆ ಹಾರಾಡುತ್ತಿದ್ದ ಈ ಜೋಡಿ, ಸಪ್ತಪದಿ ತುಳಿಯೋದಕ್ಕೆ ರೆಡಿಯಾಗಿದೆ. ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಾಮಾಜದಲ್ಲಿ ಕೊಡವ ಸಂಪ್ರದಾಯದಂತೆ ಶುಭ ಸಮಾರಂಭ ನಡೆಯಿತು. ಎರಡು ಕುಟುಂಬದ ಗುರು ಹಿರಿಯರು ಹಾಗೂ ಬಂಧುಗಳ ಸಮ್ಮುಖದಲ್ಲಿ, ಅಯ್ಯಪ್ಪ ಹಾಗೂ ಅನು ಜೋಡಿ ಉಂಗುರ ಬದಲಿಸಿಕೊಂಡಿತು.

ಅಯ್ಯಪ್ಪ ಮದುವೆಯಾಗ್ತಿರೋ ಹುಡುಗಿ ಯಾರು..?
ತಮಿಳಿನ ಅಂಜಲಿ ಪಾಪ ಸೇರಿದಂತೆ ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್​ ಸೂಪರ್​​​, ಪಾನಿ ಪುರಿ ಸಿನಿಮಗಳಲ್ಲಿ ನಟಿಸಿರುವ ಅನು ಮಳೇಟಿರ, ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಲಕ್ಷ್ಮಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ನಟಿನೇ ಈಗ ಅಯ್ಯಪ್ಪ ಅವರ ಬಾಳ ಸಂಗಾತಿಯಾಗೋಕೆ ಹೊರಟಿರೋದು. ಮುಂದಿನ ವರ್ಷ ಅಯ್ಯಪ್ಪ-ಅನು ಜೋಡಿ, ಕೊಡಗಿನ ವಿರಾಜಪೇಟೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಆ್ಯಶ್​ ಕಲರ್​ ಸೂಟ್​ನಲ್ಲಿ ಅಯ್ಯಪ್ಪ ಮಿಂಚಿಂಗ್..!
ಕನ್ನಡದ ಖ್ಯಾತ ನಟಿ ಪ್ರೇಮ ಅವರ ಸಹೋದರ ಎನ್​.ಸಿ ಅಯ್ಯಪ್ಪ. ರಿಯಾಲಿಟಿ ಶೋ ಬಿಗ್​ ಬಾಸ್​​ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದ​​ ಅಯ್ಯಪ್ಪ, ತಮ್ಮ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಆ್ಯಶ್​ ಕಲರ್​ ಸೂಟ್​ನಲ್ಲಿ ಕಾಣಿಸಿಕೊಂಡ್ರೆ, ನಟಿ ಅನು ಹಸಿರು ಬಣ್ಣದ ಕೊಡವ ಸೀರೆಯುಟ್ಟು ಮಿಂಚುತ್ತಿದ್ರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍