ಸ್ಯಾಂಡಲ್‌ವುಡ್ ನಲ್ಲಿ ಮತ್ತೊಬ್ಬ ನಟನ ಸಪ್ತಪದಿ : ಮನ ಮೆಚ್ಚಿದ ಹುಡುಗಿ ಜೊತೆ ಸಪ್ತಪದಿ ತುಳಿದ ನಟ ‘ಎಸ್‌ಕ್ಯೂಸ್ ಮೀ’ ಸುನೀಲ್..!

ಚಪ್ಪಾಳೆ , ಬಾಬಾರೋ ರಸಿಕ , ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಒಂದು ಕಾಲದ ಚಾಕ್ಲೆಟ್ ಬಾಯ್ ಎಕ್ಸ್‌ ಕ್ಯೂಸ್ ಮಿ ಖ್ಯಾತಿಯ ಸುನೀಲ್ ರಾವ್ ನಟ ಸುನೀಲ್ ರಾವ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಪ್ರೇಯಸಿ ಶ್ರೇಯಾ ಐಯ್ಯರ್ ಅವರ ಜೊತೆ ಸುನೀಲ್ ಸಪ್ತಪದಿ ತುಳಿದಿದ್ದಾರೆ.

ಶ್ರೇಯಾ ಐಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಇತ್ತೀಚೆಗಷ್ಟೇ ಬಂದಿದ್ದ ಸುನೀಲ್ ಅಭಿನಯದ ವೆಬ್ ಸೀರಿಸ್ ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದು ಸದ್ಯ ‘ಟಕ್ಕರ್’ ಚಿತ್ರಕ್ಕೂ ವಸ್ತ್ರ ವಿನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೇಯಾ ಐಯ್ಯರ್ ಹಾಗೂ ಸುನೀಲ್ ರಾವ್ ಅವರಿಗೆ ವೆಬ್ ಸೀರಿಸ್ ಚಿತ್ರೀಕರಣದ ಸಮಯದಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಈಗ ಇಬ್ಬರು ಮನೆಯವರ ಒಪ್ಪಿಗೆಯಿಂದ ದಂಪತಿಗಳಾಗಿದ್ದಾರೆ. ಶ್ರೇಯಾ-ಸುನೀಲ್ ಮದುವೆ ಬೆಂಗಳೂರಿನ ಜೆಪಿ ನಗರದಲ್ಲಿ ಆಪ್ತರ ಸಮ್ಮುಖದಲ್ಲಿ ನಡೆದಿದೆ.

ಸಿಂಪಲ್ಲಾಗಿ ನಡೆದ ಮಾಡುವೆ ಕಾರ್ಯದಲ್ಲಿ ಸುನೀಲ್ ಆಪ್ತರಾದ ಅನುಪಮ ಗೌಡ ಹಾಗೂ ರಘುಶಾಸ್ತ್ರಿ ಸೇರಿದಂತೆ, ಚಿತ್ರರಂಗದ ಹಲವಾರು ಭಾಗಿಯಾಗಿದ್ದರು.

ಪ್ರಖ್ಯಾತಿ ಗಾಯಕಿ ಬಿ ಕೆ ಸುಮಿತ್ರ ಅವರ ಪುತ್ರನಾಗಿರುವ ಸುನೀಲ್ ಬಾಲ ನಟನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡು ನಂತರ ಗಾಯಕನಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು., ತದನಂತರ ‘ಎಕ್ಸ್‌ಕ್ಯೂಸ್ ಮಿ’ ಚಿತ್ರದ ಮೂಲಕ ಅಂದಿನ ಕಾಲದ ಚಾಕ್ಲೆಟ್ ಬಾಯ್ ಎನಿಸಿಕೊಂಡರು.

‘ತುರ್ತು ನಿರ್ಗಮನ’ ಸಿನಿಮಾ ಮೂಲಕ ಸುನೀಲ್ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಸ್ಟಾರ್ಟ್ ಮಾಡುವ ಸಂಭ್ರಮ ಒಂದು ಕಡೆಯಾದರೆ ಮತ್ತೊಂದು ಕಡೆ ರಿಯಲ್ ಲೈಫ್ ನಲ್ಲಿ ದಾಂಪತ್ಯ ಜೀವನ ಶುರು ಮಾಡುತ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..