ಕಿಚ್ಚ ಸುದೀಪ್​ ಮೇಲೆ ನನಗೆ ಅಪಾರ ಗೌರವವಿದೆ – ದುನಿಯಾ ವಿಜಿ

‘ಪೈಲ್ವಾನ್​’ ಅನ್ನೋ ಒಂದೇ ಒಂದು ಪದವೀಗ ಸ್ಯಾಂಡಲ್​ವುಡ್​ನಲ್ಲಿ ಬೆಂಕಿ -ಬಿರುಗಾಳಿ ಎಬ್ಬಿಸಿದೆ. ಇದೊಂದು ಡೈಲಾಗ್​ ಇಬ್ಬರು ಸ್ಟಾರ್​ ನಟರ ಮಧ್ಯೆ ದ್ವೇಷದ ಕಿಡಿ ಹಚ್ಚೋ ತನಕ ತಲುಪಿತ್ತು. ಆದ್ರೆ, ಕಿಚ್ಚ ಸುದೀಪ್​ ನಿನ್ನೆ ರಾತ್ರಿಯೇ ವಿವಾದಕ್ಕೆ ಎಳ್ಳು- ನೀರು ಬಿಟ್ಟಿದ್ದರು. ಇದೀಗ, ದುನಿಯಾ ವಿಜಿ ಕೂಡ ಸಂಭಾಷಣೆಯ ಇನ್ನರ್ ಸತ್ಯವನ್ನು ಹೇಳಿದ್ದಾರೆ.

ಡೈಲಾಗ್​ನಲ್ಲಿ ಯಾರಿಗೂ ಟಾಂಗ್​ ಕೊಟ್ಟಿಲ್ಲ..!

ಮೊನ್ನೆಯಷ್ಟೇ ಕುಸ್ತಿ ಸಿನಿಮಾದ ಟೀಸರ್​ ರಿಲೀಸ್ ಆಗಿತ್ತು. ದುನಿಯಾ ವಿಜಿ ತಮ್ಮ ಮಗನ ಎಂಟ್ರಿ ಅದ್ಧೂರಿ ಟೀಸರನ್ನೇ ಗಿಫ್ಟ್ ಮಾಡಿದ್ದರು. ಆದ್ರೆ, ಹಳದಿ ಕಣ್ಣುಗಳಿಗೆ ಸಾಮ್ರಾಟನ ಪರ್ಫಾರ್ಮೆನ್ಸ್​ಗಿಂತ ಕಂಡಿದ್ದೇ ಬೇರೆ. ಪೈಲ್ವಾನ್​ ಅನ್ನೋ ಹೆಸರು ಬಳಸಿಕೊಂಡು ವಿಜಿ, ಸುದೀಪ್​ಗೆ ಟಾಂಗ್​ ಕೊಟ್ಟಿದ್ದಾರೆ ಅನ್ನೋ ಗಾಸಿಪ್​ ಸೃಷ್ಟಿಯಾಗಿತ್ತು.

ಈ ವಿವಾದಕ್ಕೀಗ ದುನಿಯಾ ವಿಜಿಯೂ ಕ್ಲಾರಿಫಿಕೇಷನ್​ ಕೊಟ್ಟಿದ್ದಾರೆ. ‘ಕಿಚ್ಚ ಸುದೀಪ್​ ಮೇಲೆ ನನಗೆ ಅಪಾರ ಗೌರವವಿದೆ. ಕುಸ್ತಿ ಟೀಸರ್​ನಲ್ಲಿ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಇದು ಸಂದರ್ಭ ವೊಂದರಲ್ಲಿ ಬರೋ ಸಂಭಾಷಣೆಯಷ್ಟೇ. ಸಾಮ್ರಾಟ್​ ಒಂದು ಪಾತ್ರ ಮಾಡಿದ್ದಾನೆ. ಈ ಬಗ್ಗೆ ಯಾರನ್ನೂ ಗುರಿಯಾಗಿಸೋದನ್ನು ನಿಲ್ಲಿಸಿ. ಅಭಿಮಾನಿಗಳು ಯಾವುದೇ ಅನರ್ಥ ಕಲ್ಪಿಸಬೇಡಿ. ಪೈಲ್ವಾನ್​ ಸಿನಿಮಾಗೆ ಶುಭವಾಗಲಿ ಅಂತಾ ಟ್ವೀಟ್ ಮಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..