ರಜನಿಕಾಂತ್ ಜೊತೆ ‘ಕಾಲ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಾಯಿಗೆ ಬಂತು ಸ್ಟಾರ್ ವ್ಯಾಲ್ಯೂ : ನಾಯಿಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ರಜಿನಿಕಾಂತ್ ಭಾರತ ಚಿತ್ರರಂಗ ಕಂಡ ಗ್ರೇಟೆಸ್ಟ್ ಸೂಪರ್​ಸ್ಟಾರ್​. ಕೋಟ್ಯಾಂತರ ಅಭಿಮಾನಿಗಳ ಪಾಲಿನ ಆರಾಧ್ಯದೈವ. ಅವರೊಟ್ಟಿಗೆ ನಟಿಸೋ ಅವಕಾಶ ಸಿಕ್ಕರೇ ಮುಗೀತು, ಬೆಳಗಾಗೋದ್ರಲ್ಲಿ ನೀವೂ ಸ್ಟಾರ್​ ಆಗ್ತೀರಾ. ಇಂತಹ ಸ್ಟಾರ್​ ಚಾನ್ಸ್ ಕಾಲ ಚಿತ್ರದಲ್ಲಿ ನಾಯಿಗೂ ಸಿಕ್ಕಿತ್ತು. ಆ ನಾಯಿಗೆ ಈಗ ಕೋಟಿ- ಕೋಟಿ ಆಫರ್​ ಹುಡುಕಿ ಬಂದಿದೆ.

ಚಿತ್ರದಲ್ಲಿ ‘ಮಣಿ’ ಮಿಂಚಿಂಗ್​..!

‘ಕಾಲ’ ರಜಿನಿಕಾಂತ್​ ನಟನೆಯ ಮೋಸ್ಟ್ ಎಕ್ಸ್​ಪೆಕ್ಟೆಡ್​ ಸಿನಿಮಾ ತೆರೆಗೆ ಅಪ್ಪಳಿಸಿದೆ. ಬಾಷಾ, ಶಿವಾಜಿ ಮತ್ತು ಕಬಾಲಿ ಸಿನಿಮಾಗಳ ನಂತರ ರಜಿನಿ ಮತ್ತೆ ಗ್ಯಾಂಗ್​ಸ್ಟರ್​ ಆಗಿ ಮಿಂಚುತ್ತಿದ್ದಾರೆ. ಅವರ ಜೊತೆ ಮಣಿ ಅನ್ನೋ ನಾಯಿ ಕೂಡ ಸಖತ್ ಸುದ್ದಿಯಾಗಿದೆ. ‘ಕಾಲಾ’ ಚಿತ್ರ ಜಗತ್ತಿನಾದ್ಯಂತ ಹೆಸರು ಮಾಡುತ್ತಿದ್ದಂತೆ ಚಿತ್ರದಲ್ಲಿ ರಜನಿಕಾಂತ್ ಜೊತೆ ನಟಿಸಿದ್ದ ನಾಯಿ ಕೂಡ ಸಖತ್ ಫೇಮಸ್ ಆಗಿದೆ.

ಮಣಿ ಮೇಲೆ ಬಿತ್ತು ಮಲೇಷಿಯಾ ಕಣ್ಣು..!

ರಜಿನಿಕಾಂತ್​ ಮಲೇಷಿಯಾ ಜನರಿಗೆ ದೇವರ ಸಮಾನ. ರಜಿನಿ ಸಿನಿಮಾ ಬಂತೆಂದರೇ, ಅಲ್ಲಿಯ ಜನರಿಗೆ ಹಬ್ಬದ ಸಂಭ್ರಮ. ತಲೈವಾ ಸಿನಿಮಾಗಾಗಿ ಅಲ್ಲಿಯ ಜನ ಚಾತಕ ಪಕ್ಷಿಗಳಂತೆ ಕಾದು ಕೂತಿರುತ್ತಾರೆ. ಕಾಲ ಸಿನಿಮಾದ ಪೋಸ್ಟರ್​​ನಲ್ಲಿ ‘ದಳಪತಿ’​ ಪಕ್ಕ ಕೂತು ಲುಕ್​ ಕೊಟ್ಟಿದ್ದ ನಾಯಿಯತ್ತ ಮಲೇಷಿಯಾ ಜನರ ಕಣ್ಣು ಬಿದ್ದಿತ್ತು. ಅಂದ್ಹಾಗೆ, ಈ ನಾಯಿಯ ಹೆಸರು ಮಣಿ. ಮಣಿಯನ್ನು ಪ್ರಾಣಿ ತರಬೇತುದಾರ ಸೈಮನ್​ ಅನ್ನೋರು ನೋಡಿಕೊಳ್ಳುತ್ತಿದ್ದಾರೆ. ಸೈಮನ್​ ಹೇಳುವಂತೆ ಮಣಿಗೀಗ ಸ್ಟಾರ್ ವ್ಯಾಲು ಬಂದಿದೆಯಂತೆ. ಮಲೇಷಿಯಾದ ರಜಿನಿ ಫ್ಯಾನ್ಸ್​ ಮಣಿಯನ್ನು ಖರೀದಿಸಲು ಬೇಡಿಕೆ ಇಟ್ಟಿದ್ದಾರಂತೆ. ತಾವು ಎರಡು ಕೋಟಿ ಕೊಡೋಕು ಸಿದ್ಧರಿದ್ದು, ಮಣಿಯನ್ನು ತಮಗೆ ಮಾರಾಟ ಮಾಡುವಂತೆ ಕೇಳಿಕೊಂಡಿದ್ದಾರಂತೆ.

ರಜಿನಿಗೂ ಮಣಿ ಅಂದ್ರೆ ತುಂಬಾ ಲವ್

ಮಲೇಷಿಯಾ ಜನರ ಈ ಮನವಿಯನ್ನು ಸೈಮನ್​ ಪ್ರೀತಿಯಿಂದಲೇ ತಿರಸ್ಕರಿಸಿದ್ದಾರೆ. ಯಾಕಂದ್ರೆ, ಮಣಿಯನ್ನು ಸೈಮನ್​ ಮಗುವಿನಂತೆ ಪಾಲನೆ, ಪೋಷಣೆ ಮಾಡಿದ್ದಾರೆ. ಸ್ವಂತ ಮಗನನ್ನು ಮಾರೋಕೆ ಹೇಗೆ ಸಾಧ್ಯ ಅಂತಾ ಹೇಳ್ತಾರೆ ಸೈಮನ್​. ಅಲ್ದೇ, ತಲೈವಾಗೂ ಮಣಿ ಅಂದ್ರೆ ತುಂಬಾ ಪ್ರೀತಿಯಂತೆ. ಪ್ರತಿದಿನ ಸ್ವತಃ ರಜಿನಿಕಾಂತ್​ ಮಣಿಗೆ ಬಿಸ್ಕೆಟ್​ ತಿನ್ನಿಸುತ್ತಿದ್ದರಂತೆ. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇದೆ ಎಂದು ಅವ್ರು ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: