ಅಡ್ಜಸ್ಟ್​ಮೆಂಟ್, ಕಮಿಟ್​ಮೆಂಟ್ ಅಂದ್ರೆ ಮೆಟ್ಟಲ್ಲಿ ಬೀಳುತ್ತೆ, ಸೀದಾ ಹೋಗಿ ತಮಿಳುನಾಡು ಸೇರ್ಕೋಬೇಕು, ಹಂಗೆ ಬಾರಿಸ್ತೀನಿ. – ಮಂಗಳೂರಿನವರಾದ ಕನ್ನಡ ನಟಿ ಖುಷಿ ಶೆಟ್ಟಿ !!

ಬೆಂಗಳೂರು: ಅವಕಾಶಕ್ಕಾಗಿ ಮಂಚ ಏರು ಅಥವಾ ಕಾಸ್ಟಿಂಗ್ ಕೌಚ್ ಅನ್ನೋದು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರ್ತಿರೋ ಸಂಗತಿ. ಇದೀಗ ಕನ್ನಡದ ನಟಿ ಖುಷಿ ಶೆಟ್ಟಿ ಕಾಲಿವುಡ್ ಅಂಗಳದ ಮಂಚದ ಸತ್ಯವನ್ನ ಬಟಾಬಯಲು ಮಾಡಿದ್ದಾರೆ.

ಕಾಸ್ಟಿಂಗ್ ಕೌಚ್ ಅನ್ನೋ ಈ ಪೆಂಭೂತಕ್ಕೆ ಅದೆಷ್ಟೋ ನಟಿಯರು, ಮಾಡೆಲ್​ಗಳು ಬಲಿಯಾಗಿ ಕೊನೆಗೆ ಇತ್ತ ಅವಕಾಶವೂ ಇಲ್ಲ, ಅತ್ತ ಮರ್ಯಾದೆಯೂ ಇಲ್ಲ ಅನ್ನೋಂಥ ಸ್ಥಿತಿಗೆ ಒಳಗಾಗಿಬಿಡ್ತಾರೆ. ಆದ್ರೆ, ಇದೇ ಥರ ಪ್ರೊಡ್ಯೂಸರ್ ಜೊತೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಅಂತ ಕನ್ನಡದ ನಟಿ ಖುಷಿ ಶೆಟ್ಟಿಯವರಿಗೆ ಕೇಳಿದಾಗ ಆ ವ್ಯಕ್ತಿಯ ಮೈ ಚಳಿ ಬಿಡಿಸಿಬಿಟ್ಟಿದ್ದಾರೆ ಈ ಗಟ್ಟಿಗಿತ್ತಿ.

ಇನ್ನೊಂದು ಸರಿ ಅಡ್ಜಸ್ಟ್ ಮೆಂಟ್, ಕಮಿಟ್ಮೆಂಟ್ ಅಥವಾ ಯಾರೋ ಕೇಳ್ತಾರೆ ಅಂದ್ಕೊಂಡು ನನಗೆ ಏನಾದ್ರು ಮೆಸೇಜ್ ಮಾಡುದ್ರೆ ಮೆಟ್ಟು ಮೆಟ್ಟಲ್ಲಿ ಕರ್ನಾಟಕ ಬಿಟ್ಟು ತಮಿಳುನಾಡು ಸೇರ್ಕೋಬೇಕು ಹಂಗೆ ಬಾರಿಸ್ತೀನಿ. ಕಂತ್ರಿ ನನ್ ಮಕ್ಳಾ ನಿಮ್ ಸಿಸ್ಟರ್​ಗೂ ಹೀಗೆ ಕೇಳ್ತೀರಾ? ನಿಮ್ಮಂಥವರಿಂದಾನೇ ನಮ್ ಇಂಡಸ್ಟ್ರಿ ಹೆಸರು ಹೇಳೋಕೆ ಆಗದಿರೋಷ್ಟು ಹಾಳಾಗ್ತಿರೋದು. ಥೂ ನಿಮ್ಮ ಜನ್ಮಕ್ಕೆ – ಖುಷಿ, ನಟಿ

ಆಗಿದ್ದಾದರೂ ಏನು?
ಮೂಲತಃ ಮಂಗಳೂರಿನವರಾದ ಕನ್ನಡ ನಟಿ ಖುಷಿ ಶೆಟ್ಟಿಯವರನ್ನು ತಮಿಳು ಸಿನಿಮಾದ ಕೋ-ಆರ್ಡಿನೇಟರ್ ಶಶಿ ಎಂಬಾತ ಕಾಲ್ ಮಾಡಿದ್ದ. ತಮಿಳು ಸಿನಿಮಾವೊಂದರಲ್ಲಿ ನೀವು ಆ್ಯಕ್ಟ್ ಮಾಡ್ತೀರಾ? ಅಂತಾ ಕೇಳಿದ್ದ. ಅಷ್ಟೇ ಅಲ್ಲದೇ, ಬೆಂಗಳೂರಿನ ಕೆಂಗೇರಿಯಲ್ಲಿ 5 ದಿನ ಶೂಟಿಂಗ್ ಇರುತ್ತೆ, ತಮಿಳುನಾಡಿನಲ್ಲಿಯೂ ಶೂಟಿಂಗ್ ಇರುತ್ತೆ, ನೀವು ಆ್ಯಕ್ಟ್ ಮಾಡ್ತೀರಾ? ಅಂತಾ ಕೇಳಿದ್ದನಂತೆ. ಅದಕ್ಕೆ ಸಹಜವಾಗಿ ಖುಷಿ, ಹಾಂ ಮಾಡ್ತೀನಿ. ಆದ್ರೆ, ನನಗೆ ಎಷ್ಟು ಸಂಭಾವನೆ ಕೊಡ್ತೀರಾ? ನನ್ನ ಕಾಸ್ಟ್ಯೂಮ್ ಏನಿರುತ್ತೆ? ಅಂತ ಕೇಳಿದ್ದಾರೆ. ಆಗ ತನ್ನ ರೂಪ ತೋರಿಸಿದ ಆ ಭೂಪ, ಮೇಡಂ ರೆಮ್ಯುನರೇಶನ್ ಚೆನ್ನಾಗಿಯೇ ಕೊಡ್ತೀವಿ. ನಾನು ಈ ಥರ ಹೇಳ್ತೀನಿ ಅಂತಾ ತಪ್ಪು ತಿಳಿಬೇಡಿ. ನೀವು ನಮ್ಮ ಪ್ರೊಡ್ಯೂಸರ್ ಜೊತೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದಿದ್ದಾನೆ. ಈ ಮಾತಿಗೆ ಕೆರಳಿದ ಕನ್ನಡತಿ ಖುಷಿ, ಇನ್ನೊಂದು ಸರಿ ಅಡ್ಜಸ್ಟ್ ಮೆಂಟ್, ಕಮಿಟ್ ಮೆಂಟ್ ಅಥವಾ ಇನ್ನೊಬ್ಬರು ಕೇಳ್ತಾರೆ ಅಂತಾ ಇನ್ನೊಬ್ಬರು ಕೇಳ್ತಾರೆ ಅಂದುಕೊಂಡು ನನಗೆ ಏನಾದ್ರು ಮೆಸೇಜ್ ಮಾಡುದ್ರೆ ಮೆಟ್ಟು ಮೆಟ್ಟಲ್ಲಿ ಕರ್ನಾಟಕ ಬಿಟ್ಟು ತಮಿಳುನಾಡು ಸೇರ್ಕೋಬೇಕು ಹಂಗೆ ಬಾರಿಸ್ತೀನಿ. ಕಂತ್ರಿ ನನ್ ಮಕ್ಳಾ ನಿಮ್ ಸಿಸ್ಟರ್​ಗೂ ಹೀಗೆ ಕೇಳ್ತೀರಾ? ನಿಮ್ಮಂಥವರಿಂದಾನೇ ನಮ್ ಇಂಡಸ್ಟ್ರಿ ಹೆಸರು ಹೇಳೋಕೆ ಆಗದಿರೋಷ್ಟು ಹಾಳಾಗ್ತಿರೋದು. ಥೂ ನಿಮ್ಮ ಜನ್ಮಕ್ಕೆ… ಅವಕಾಶ ಸಿಗದೇ ಇದ್ರೂ ಹೇಗೆ ಬದುಕಬೇಕು ಅಂತಾ ನಮ್ ಪೇರೆಂಟ್ಸ್ ಹೇಳಿಕೊಟ್ಟಿದ್ದಾರೆ. ಎದುರಿಗೆ ಇದ್ದಿದ್ದರೆ ಚಪ್ಪಲಿ ಕಿತ್ತು ಹೋಗ್ತಾ ಇತ್ತು. ಕಣ್ಣಿಗೆ ಕಾಣಿಸದಹಾಗೆ ಕರ್ನಾಟಕ ಬಿಟ್ಟು ತೊಲಗಿ ಅಂತಾ ಆ ವ್ಯಕ್ತಿಗೆ ತಪರಾಕಿ ಹಾಕಿಬಿಟ್ಟಿದ್ದಾರೆ. ಈ ಬಗ್ಗೆ ಫಸ್ಟ್​ನ್ಯೂಸ್​ ಜೊತೆ ಮಾತನಾಡಿದ ಖುಷಿ, ಅವನ್ಯಾರೋ ಶಶಿ ಅಂತೆ. ತಮಿಳುನಾಡಿನವ. ಆದ್ರೆ, ಬೆಂಗಳೂರಲ್ಲೆ ಇರ್ತಾನಂತೆ. ನಾನು ಈ ಬಗ್ಗೆ ಪೋಸ್ಟ್ ಮಾಡಿದಾಗಿನಿಂದ ಹಲವು ಹುಡುಗೀರು ನನಗೆ ಮೆಸೇಜ್ ಮಾಡ್ತಾ ಇದ್ದಾರೆ. ಇವನು ಎಷ್ಟೋ ಹುಡುಗೀರಿಗೆ ಹೀಗೇ ಕೇಳಿದ್ದಾನಂತೆ. ಅಂತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ನಟಿಯರೇ, ಇಂಥವರು ಯಾರಾದ್ರು ನಿಮ್ಮನ್ನು ಸಂಪರ್ಕಿಸಿದ್ರೆ, ನೀವು ಅಂಥವರ ಮೈ ಚಳಿ ಬಿಡಿಸಿ ಬಿಡಿ.

ಚಂದ್ರಮುಖಿ ಹಾಗೂ ಮಹಾನದಿ ಸೀರಿಯಲ್‍ಗಳಲ್ಲಿ ಅಭಿನಯಿಸಿರುವ ಖುಷಿ, `ಇದೀಗ ಬಂದ ಸುದ್ದಿ’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್ ಬೆಳ್ಳಿತೆರೆ ಪ್ರವೇಶಿಸಿದ್ದರು. ಇದೀಗ ರಾಂಗ್ ಟರ್ನ್ ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍