ರಸ್ತೆ ಬದಿಯ ಅಂಗಡಿಯಲ್ಲಿ ಟೀ ಜೊತೆ ಚಿತ್ರಾನ್ನ ಸವಿದ ಕಿಚ್ಚ- ಅಂಗಡಿಮಾಲೀಕರಿಗೆ ಸುದೀಪ ಕೊಟ್ಟ ದುಡ್ಡೆಷ್ಟು ಗೊತ್ತಾ..?

ಅಭಿಮಾನಿಗಳ ಪರ-ವಿರೋಧ ಚರ್ಚೆಯ ನಡುವೆಯೂ ಕಿಚ್ಚ ಸುದೀಪ ಬಿಜೆಪಿಯ ಚಿತ್ರದುರ್ಗದ ಮೊಳಕಾಲ್ಮೂರು ಅಭ್ಯರ್ಥಿ ಶ್ರೀರಾಮುಲು ಪರ ಪ್ರಚಾರ ಕೈಗೊಂಡಿದ್ದಾರೆ.

ಹೆಬ್ಬುಲಿ ಕಿಚ್ಚ ಸುದೀಪ್ ಗೆ ಸಾವಿರಾರು ಅಭಿಮಾನಿಗಳಿದ್ದಾರೆ, ಆದರೆ ಸುದೀಪ್ ಮಾತ್ರ ಅತ್ಯಂತ ಸರಳ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ಸವಿದು, ಟೀ ಕುಡಿದು ಸುದೀಪ್ ಸರಳತೆ ಮೆರೆದಿದ್ದಾರೆ.

ಬಳ್ಳಾರಿಯಲ್ಲಿಂದು ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಪ್ರಚಾರಕ್ಕೆ ಬಂದ ವೇಳೆ ಸುದೀಪ್ ಮೊಳಕಾಲ್ಮೂರು ಗೆ ತೆರಳುವ ಮುನ್ಮ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೊಟೇಲ್‍ನಲ್ಲಿ ತಿಂಡಿ ತಿಂದು ಟೀ ಕುಡಿದರು.

ರಾಧಾ ಎನ್ನುವ ಬಡ ಮಹಿಳೆಯ ಚಪ್ಪರದ ಹೊಟೇಲಿನಲ್ಲಿ ಸುದೀಪ್ ಚಿತ್ರಾನ್ನ, ಟೀ ಕುಡಿದರು. ಬಳಿಕ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ. ಈ ವೇಳೆ ಮಹಿಳೆ ಹಣ ಪಡೆಯಲು ನಿರಾಕರಿಸಿದಾಗ ಒತ್ತಾಯಪೂರ್ವಕವಾಗಿ ಸುದೀಪ್, ಈ ಹಣದಲ್ಲಿ ಮಕ್ಕಳಿಗೆ ಎನಾದರೂ ಗಿಫ್ಟ್ ತಗೆದುಕೊಳ್ಳಿ ಎಂದು ಹೇಳಿದರು.

ಹೋಟೆಲ್ ಮಾಲಕಿ ರಾಧಾ ಅವರು 2 ಸಾವಿರ ರೂ. ಸಾಕು ಎಂದರೂ ಸುದೀಪ್ 10 ಸಾವಿರ ರೂ. ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಚುನಾವಣಾ ಪ್ರಚಾರದ ದೃಷ್ಟಿಯಿಂದ ನಾನು ಕೊಟ್ಟಿಲ್ಲ. ಪ್ರೀತಿಯಿಂದ ನಾನು ಕೊಟ್ಟದ್ದೇನೆ ಅಷ್ಟೇ ಎಂದರು.

ಈ ವೇಳೆ ಮ್ಯಾನೇಜರ್ ಕಾಸ್ಟ್ಲಿ ಕಪ್ ನಲ್ಲಿ ಟೀ ಕೊಡಲು ಮುಂದಾದ ವೇಳೆ ಸುದೀಪ್ ಪೇಪರ್ ಕಪ್‍ನಲೇ ಟೀ ಕುಡಿದು ಸರಳತೆ ಮೆರೆದರು. ಈ ವೇಳೆ ಸುದೀಪ್ ಗುರುತಿಸಿ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕೂಡ ತಗೆಸಿಕೊಂಡು ಹರ್ಷ ವ್ಯಕ್ತಪಡಿಸಿದರು.

ಪ್ರಚಾರಕ್ಕೆ ಬಂದಿದ್ದ ಸುದೀಪ್ ವಾಹನ ತಪಾಸಣೆ :

ಸುದೀಪ್ ಪ್ರಚಾರ ಮುಗಿಸಿ ಹೊರಡುತ್ತಿದ್ದಂತೆ ಅವರ ವಾಹನವನ್ನು ತಪಾಸಣೆ ಮಾಡಲಾಗಿದೆ. ಬಳ್ಳಾರಿ ತಾಲ್ಲೂಕು ಹಲಕುಂದಿ ಚೆಕ್ ಪೋಸ್ಟ್ ಬಳಿ ಅವರ ವಾಹನವನ್ನು ಪರಿಶೀಲಿಸಲಾಗಿದೆ. ವಿಡಿಯೋ ಇಲ್ಲಿದೆ :

ಚುನಾವಣಾಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಸುದೀಪ್ ವಾಹನದ ತಪಾಸಣೆ ನಡೆಸಿದ್ದಾರೆ. ಬಳಿಕ ಕೆಲವರು ಸುದೀಪ್ ಅವರೊಂದಿಗೆ ಸೆಲ್ಫಿ, ಫೋಟೋ ತೆಗೆದುಕೊಂಡಿದ್ದಾರೆ.

 

 

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍