ಕುಮಾರ ಸ್ವಾಮಿ ಅವರ ಬರ್ತ್ ಡೇ ಅನ್ನು ಅದ್ದೂರಿಯಾಗಿ ಆಚರಿಸಿದ ಅಭಿಮಾನಿಗಳು : ನಿಮ್ಮ ಪ್ರೀತಿಗೆ ಚಿರಋಣಿ ಎಂದ ಹೆಚ್ ಡಿ ಕೆ, ನಿಖಿಲ್ ರಾಜಕೀಯ ಪ್ರವೇಶದ ಬಗ್ಗೆ ಏನು ಹೇಳಿದ್ರು ಗೊತ್ತಾ..?

kumaraswami 59th birthday celebration with fans-kannadanaadi news-latest kannada news-online kannada news

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ 59ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಿಂದ ಆಚರಿಸಿ, ಸಂಭ್ರಮಪಟ್ಟರು. ಜೆಪಿ ನಗರದ ನಿವಾಸದಲ್ಲಿ ಹೆಚ್ ಡಿಕೆ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹೂಮಾಲೆ ಹಾಕಿ, ಕೇಕ್ ಕತ್ತರಿಸುವ ಮೂಲಕ ತಮ್ಮ ನಾಯಕನ ಹುಟ್ಟುಹಬ್ಬವನ್ನು ಆಚರಿಸಿದರು.

kumaraswami 59th birthday celebration with fans-kannadanaadi news-latest kannada news-online kannada news

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಇವರು ಈ ದಿನವನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ, ಕಲಾವಿದರಿಗೆ ಇಷ್ಟೊಂದು ಅಭಿಮಾನಿಗಳು ಅವರ ಹುಟ್ಟುಹಬ್ಬಕ್ಕಾಗಿ ಕಾದು ಕುಳಿತು ಆಚರಿಸುತ್ತಾರೆ. ಈಗ ಇದನ್ನು ನೋಡುತ್ತಿದ್ದರೆ ನನಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ ಎಂದರು.

kumaraswami 59th birthday celebration with fans-kannadanaadi news-latest kannada news-online kannada news

ಈ ಸಂದರ್ಭದಲ್ಲಿ ತಂದೆಯ ಹುಟ್ಟುಹಬ್ಬಕ್ಕೆ ನಿಖಿಲ್ ಶುಭಾಶಯ ಕೋರಿದ್ರು, ನಿಖಿಲ್ ಪಕ್ಷದ ಪ್ರಚಾರದಲ್ಲಿ ಮಾತ್ರ ಭಾಗಿಯಾಗುತ್ತಾನೆ ಹೊರತು, ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುದಿಲ್ಲ ಎಂದರು.

kumaraswami 59th birthday celebration with fans-kannadanaadi news-latest kannada news-online kannada news

ಹೆಚ್ ಡಿಕೆ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ರಕ್ತದಾನ ಶಿಬಿರ, ಬಾಂಡ್ ಮತ್ತು ಸಸ್ಯಗಳ ವಿತರಣೆ ಹಾಗೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ