ನಟಿಯೊಬ್ಬರ ಮೇಲೆ ಅತ್ಯಾಚಾರ : ಖ್ಯಾತ ನಟನ ಪತ್ನಿ, ಪುತ್ರನ ವಿರುದ್ಧ ಎಫ್‌.ಐ.ಆರ್‌ ಗೆ ಆದೇಶ..!

ಮುಂಬೈ: ಖ್ಯಾತ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಪುತ್ರ ಮಹಾಕ್ಷಯ್‌ ನಟಿಯೊಬ್ಬರ ಮೇಲೆ ಅತ್ಯಾಚಾರ ಮಾಡಿರೋ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಚಕ್ರವರ್ತಿ ಪತ್ನಿ ಯೋಗಿತಾ ಬಾಲಿ ಹಾಗೂ ಪುತ್ರ ಮಹಾಕ್ಷಯ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ದೆಹಲಿ ಕೋರ್ಟ್‌ ಆದೇಶಿಸಿದೆ. ಅತ್ಯಾಚಾರ ಆರೋಪದ ಜೊತೆಗೆ ವಂಚನೆ, ಒಪ್ಪಿಗೆ ಪಡೆಯದೆ ಗರ್ಭಪಾತ ಮಾಡಿಸಿರೋ ಆರೋಪವೂ ಇವರ ಮೇಲಿದೆ. ಸಂತ್ರಸ್ತ ನಟಿ ಹಿಂದಿ ಮತ್ತು ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

ಮಹಾಕ್ಷಯ್‌ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ನನ್ನೊಂದಿಗೆ ದೈಹಿಕವಾಗಿ ಸಂಬಂಧ ಇಟ್ಟುಕೊಂಡಿದ್ದ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಮಿಥುನ್‌ ಚಕ್ರವರ್ತಿ ಪತ್ನಿ ಮೇಲೂ ಕೇಸ್‌ ದಾಖಲಿಸುವಂತೆ ಕೋರ್ಟ್‌ ಆದೇಶಿಸಿರುವುದು ಕುತೂಹಲ ಮೂಡಿಸಿದೆ. ಒಟ್ನಲ್ಲಿ ಕೋರ್ಟ್‌ ಆದೇಶದಿಂದ ಚಕ್ರವರ್ತಿ ಕುಟುಂಬಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಸ್ಯಾಂಡಲ್‌ವುಡ್‌ನ ಮೋಸ್ಟ್‌ ಎಕ್ಸ್‌ಪೆಕ್ಟೆಡ್‌ ಮೂವಿ ದಿ ವಿಲನ್‌ ಚಿತ್ರದಲ್ಲಿ ಮಿಥುನ್‌ ಚಕ್ರವರ್ತಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..