ನಮ್ಮನಿ ಮಾಣಿ ಕಿರುಚಿತ್ರದ ಮೂಲಕ ಇಂದಿನ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಾರೆ ಪ್ರಮೋದ್ ಮರವಂತೆಯವರು.

nammani maani pramod maravante kannadanaadi news-latest kannada news-online kannada news

ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ‘ಅಂಜನೀಪುತ್’ರ ಚಿತ್ರದಲ್ಲಿ ‘ಚೆಂದ ಚೆಂದ ಚೆಂದ ಚೆಂದ ನನ್ನ್ ಹೆಂಡ್ತಿ’ ಹಾಡಿನ ಸಾಹಿತ್ಯ ಬರೆದು, ಜನಮನ್ನಣೆ ಗಳಿಸಿರುವ ಪ್ರಮೋದ್ ಮರವಂತೆಯವರು ಈಗ ‘ನಮ್ಮನಿ ಮಾಣಿ’ ಎಂಬ ಕಿರುಚಿತ್ರದ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೇಳಲು ಹೊರಟಿದ್ದಾರೆ.

nammani maani pramod maravante kannadanaadi news-latest kannada news-online kannada news

ಈ ಮೊದಲು ಹಲವಾರು ಚಿತ್ರಗಳಲ್ಲಿ ಸಂಭಾಷಣೆ ಬರೆದಿದ್ದು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಪ್ರಶಸ್ತಿ ಪಡೆದ ಕಿರುಚಿತ್ರದಲ್ಲಿ ‘ದೂರ ಸಂಬಂಧಿ’ಯೂ ಒಂದು.
ಕಲರ್ಸ್ ಸೂಪರ್’ನಲ್ಲಿ ಪ್ರಸಾರವಾಗುವ ‘ಶಾಂತಂ ಪಾಪಂ’ ಕ್ರೈಂ ಸೀರಿಸ್’ನಲ್ಲಿ 15 ಕ್ಕೂ ಹೆಚ್ಚು ಎಪಿಸೋಡ್’ಗಳಿಗೆ ಸಂಭಾಷಣೆ ಬರೆದಿದ್ದಾರೆ.

nammani maani pramod maravante kannadanaadi news-latest kannada news-online kannada news

ಸಮಯದ ಬಳಕೆ ಎಲ್ಲಿ ಆಗಬೇಕು, ಆ ಸಮಯಕ್ಕಿರುವ ಬೆಲೆ ಏನು!? ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರಾದ ಪ್ರಮೋದ್ ಮರವಂತೆಯವರು.

nammani maani pramod maravante kannadanaadi news-latest kannada news-online kannada news

ಈ ಕಿರುಚಿತ್ರಕ್ಕೆ ಸಚಿನ್ ಬಸ್ರೂರ್ ಅವರು ಸಂಗೀತ ನೀಡಿದ್ದು, ಹೊಸ ಪ್ರತಿಭೆಗಳಾದ ಅಭಿನವ್ ಆಚಾರ್, ಸುದರ್ಶನ್ ಗಾಣಿಗ, ಗಣೇಶ್ ಮರವಂತೆ, ಸುಬ್ಬು ಕಟ್ಬ್ಯಾಲ್ತುರ್, ಅನ್ವಿತಾ ಆರ್ ಅಭಿನಯಿಸಿದ್ದಾರೆ.

ಕಿರುಚಿತ್ರವನ್ನು ಇಲ್ಲಿ ನೋಡಿ

👍👍ಸಿನಿಮಾ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ👍👍