ಶಾರುಕ್ ಖಾನ್ ಬಳಿ ಇದೆ ಇಷ್ಟೊಂದು ಆಸ್ತಿ…!

ಅತಿ ಹೆಚ್ಚು ಗಳಿಸುವ ಸ್ಟಾರ್ ಪಟ್ಟಿಯಲ್ಲಿ ಶಾರುಕ್ ಹೆಸರಿದೆ. ಗಳಿಕೆಯಲ್ಲಿ ಮುಂದಿರುವ ಶಾರುಕ್ ಬಳಿ ಎಷ್ಟು ಸಂಪತ್ತಿದೆ ಗೊತ್ತಾ? ಹಾಲಿವುಡ್ ನಟರಿಗಿಂತ ಹೆಚ್ಚು ಸಂಭಾವನೆಯನ್ನು ಶಾರುಕ್ ಒಂದು ಚಿತ್ರಕ್ಕೆ ಪಡೆಯುತ್ತಾರೆ ಎನ್ನಲಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಶಾರುಕ್ ಖಾನ್ ಬಳಿಯಿರುವ ಒಟ್ಟು ಆಸ್ತಿ 600 ಮಿಲಿಯನ್ ಡಾಲರ್ ಅಂದ್ರೆ ಸುಮಾರು 4000 ಕೋಟಿ. ದಿ ಸನ್ ವರದಿ ಪ್ರಕಾರ 2008ರಲ್ಲಿ ಶಾರುಕ್ ಖಾನ್ 75 ಮಿಲಿಯನ್ ಡಾಲರ್ ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಖರೀದಿ ಮಾಡಿದ್ದರು.

ಪ್ರತಿ ಚಿತ್ರಕ್ಕೆ ಶಾರುಕ್ ಖಾನ್ 2.51 ಅರಬ್ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಶಾರುಕ್ ಹೆಸರಿನಲ್ಲಿ ದೆಹಲಿಯಲ್ಲಿ ಮನ್ನತ್ ಹೆಸರಿನ ಮನೆಯಿದೆ. ಶಾರುಕ್ ಖಾನ್ 1995ರಲ್ಲಿ 15 ಕೋಟಿಗೆ ಈ ಮನೆ ಖರೀದಿ ಮಾಡಿದ್ದರು. ಈಗ ಈ ಮನೆ ಬೆಲೆ 200 ಕೋಟಿ ರೂಪಾಯಿಯಾಗಿದೆ. ದುಬೈನಲ್ಲಿ ಕೂಡ ಶಾರುಕ್ ಒಂದು ಮನೆ ಹೊಂದಿದ್ದಾರೆ.

ಇಷ್ಟೇ ಅಲ್ಲ ಲಂಡನ್ ನಲ್ಲಿ ಕೂಡ ಶಾರುಕ್ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಇದ್ರ ಬೆಲೆ 1 ಅರಬ್ ರೂಪಾಯಿಯಾಗಿದೆ. ಶಾರುಕ್ ಅನೇಕ ಕಂಪನಿಗಳ ರಾಯಭಾರಿಯಾಗಿದ್ದಾರೆ. ಜಾಹೀರಾತಿಗೆ ಶಾರುಕ್ ಕೋಟಿ ಕೋಟಿ ಸಂಬಳ ಪಡೆಯುತ್ತಾರೆ. ಈವೆಲ್ಲವನ್ನೂ ಸೇರಿಸಿದ್ರೆ ಶಾರುಕ್ ಒಟ್ಟು ಗಳಿಕೆ 600 ಮಿಲಿಯನ್ ಡಾಲರ್.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍