ಪ್ರೇಮಿಗಳಿಗೆ ಸ್ಪೂರ್ತಿಯಾದ ನಿಹಾರಿಕಾ

niharika album song kannadanaadi news-latest kannada news-online kannada news

ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಸಂಗೀತದ ಮೂಲಕ ಕನ್ನಡಿಗರ ಮನಗೆದ್ದ ಉಗ್ರಂ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಅಳಿಯ ಸಚಿನ್ ಬಸ್ರೂರ್ ಅವರು ಪ್ರೇಮಿಗಳ ದಿನಕ್ಕೆ ಕೊಡುಗೆಯಾಗಿ ನಿಹಾರಿಕಾ ಎಂಬ ಆಲ್ಬಂ ಸಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ. ಮಾತ್ರವಲ್ಲದೆ, ಎಲ್ಲರಿಂದಲೂ ಇದಕ್ಕೆ ಉತ್ತಮವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಹೊಸ ಸಂಗೀತ ನಿರ್ದೇಶಕರೊಬ್ಬರ ಆಗಮನವಾಗಿದೆ.

niharika album song kannadanaadi news-latest kannada news-online kannada news

ಈಗಾಗಲೇ ಹಲವಾರು ಆಲ್ಬಂ ಸಾಂಗ್’ಗಳಿಗೆ ಸಂಗೀತ ನೀಡಿ ಹಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರದಲ್ಲಿ ಮಗರಿಯಾ ಹಾಡನ್ನು ಹಾಡುವ ಮೂಲಕ ಎಲ್ಲಿರಿಂದ ಸೈ ಎನ್ನಿಸಿಕೊಂಡಿದ್ದಾರೆ.

niharika album song kannadanaadi news-latest kannada news-online kannada news

ನಿಹಾರಿಕಾ ಪಾತ್ರದಲ್ಲಿ ಪುತ್ತೂರಿನ ಮಹಾಲಸಾ ಪೈ ಅವರು ಕಾಣಿಸಿಕೊಂಡಿದ್ದಾರೆ. “ಇದೊಂದು ನನಗೆ ಉತ್ತಮವಾದ ಅನುಭವ. ಮೊದಲ ಬಾರಿಗೆ ಈ ರೀತಿಯ ಹಾಡಿನಲ್ಲಿ ಅಭಿನಯಿಸಿರುವುದು, ಈ ತಂಡದೊಂದಿಗೆ ಕೆಲಸ ಮಾಡಿರುವುದಕ್ಕೆ ಖುಷಿಯಾಗಿದೆ” ಎಂದರು. ಪ್ರಥಮ ಪಿಯುಸಿ ಓದುತ್ತಿರುವ ಈಕೆ, ‘ಕನಸು ಕಣ್ಣು ತೆರೆದಾಗ’ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದ್ದರು. ಮಾತ್ರವಲ್ಲದೆ, ಪಾಶ್ಚಾತ್ಯ ನೃತ್ಯ ಪ್ರವೀಣೆಯಾಗಿರುವ ಇವರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯಭ್ಯಾಸ ಮಾಡಿಸುತ್ತಿದ್ದಾರೆ.

niharika album song kannadanaadi news-latest kannada news-online kannada news

ಸುಮಾರು ಐದು ದಿನಗಳ ಕಾಲ ಹಾಸನ, ಕುದುರೆಮುಖ, ಕುಂದಾಪುರದಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ರವಿ ಬಸ್ರೂರ್ ಅವರ ನಿರ್ಮಾಣದ ಈ ಹಾಡಿಗೆ ಕಿನ್ನಾಳ ರಾಜ್ ಅವರು ಸಾಹಿತ್ಯ ಬರೆದಿದ್ದು, ಬದ್ರಿನಾಥ್ ವೆಂಕಟೇಶ್ ಅವರ ಛಾಯಾಗ್ರಹಣವಿದೆ.

👍👍ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ👍👍

ಹಾಡನ್ನು ಇಲ್ಲಿ ನೋಡಿ