ವಿಧಾನಸಭೆ ಚುನಾವಣೆ : ಒಟ್ಟಾಗಿ ಇದುವರೆಗೂ ಸಿನಿಮಾ ಮಾಡದಿದ್ರೂ ಜಗ್ಗೇಶ್ ಗೆ ವೋಟ್ ನೀಡಿ ಅಂದ್ರು ನಿರ್ದೇಶಕ ಪವನ್ ಒಡೆಯರ್..!! ಯಾಕೆ ಗೊತ್ತಾ..?

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಎಲೆಕ್ಷನ್​ ಅಖಾಡಕ್ಕೆ ಇಳಿದಿರೋ ನಟ ಜಗ್ಗೇಶ್​ಗೆ ಚಿತ್ರರಂಗದ ಅನೇಕರು ಬೆಂಬಲ ನೀಡಿದ್ದಾರೆ. ನಿರ್ದೇಶಕ ಯೋಗರಾಜ್​ ಭಟ್​, ಜಗ್ಗೇಶ್​ಗೆ ಮತ ಚಲಾಯಿತಿ ಅಂತಾ ಟ್ವೀಟ್​ ಮಾಡಿದ್ರು.

ಇದ್ರ ಬೆನ್ನಲ್ಲೇ, ಯುವ ನಿರ್ದೇಶಕ ಪವನ್​ ಒಡೆಯರ್​ ಕೂಡ ಜಗ್ಗೇಶ್ ಗೆಲುವಿಗೆ ಸಪೋರ್ಟ್ ಮಾಡಿ ಅಂತಾ ಟ್ವೀಟ್ ಮಾಡಿದ್ದಾರೆ. “ಇದೊಂದು ಅವರೂಪದ ಕಾಂಬಿನೇಷನ್​. ಜಗ್ಗೇಶ್​ ಹೃದಯವಂತ ವ್ಯಕ್ತಿ ಜೊತೆಗೆ ದೂರದೃಷ್ಟಿವುಳ್ಳ ರಾಜಕಾರಣಿ. ಸದಾ ನೊಂದವರಿಗೆ ಸಹಾಯಹಸ್ತ ನೀಡೋ ಜಗ್ಗೇಶ್​ ಅವರಿಗೆ ವೋಟ್​ ಮಾಡಿ” ಅಂತಾ ಪವನ್ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ, ಪವನ್​ ಒಡೆಯರ್​ ಇದೂವರೆಗೂ ಜಗ್ಗೇಶ್​ ಜೊತೆ ಯಾವುದೇ ಸಿನಿಮಾದಲ್ಲಿ ಕೆಲಸ ಮಾಡಿಲ್ಲ. ಆದ್ರೆ ಜಗ್ಗೇಶ್​ ಸಹೋದರ ಕೋಮಲ್ ನಟನೆಯ ‘ಗೋವಿಂದಾಯ ನಮಃ‘ ಸಿನಿಮಾದಿಂದ ಪವನ್​ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍