ಬಿಗ್ ಬಿ ಮೊಮ್ಮಗನ ಜೊತೆ ಶಾರುಖ್ ಪುತ್ರಿಯ ಪಾರ್ಟಿ..!

ಲಿಟಲ್ ಗರ್ಲ್ ಸುಹಾನಾ ಈಗ ಗ್ಲಾಮರಸ್ ಬೆಡಗಿಯಾಗಿ ಬದಲಾಗಿದ್ದಾಳೆ. ಬಾಲಿವುಡ್ ಎಂಟ್ರಿಗೆ ಸಜ್ಜಾಗಿರುವಂತಿದೆ ಶಾರುಖ್ ಪುತ್ರಿಯ ಹೊಸ ಹೊಸ ಲುಕ್. ಸ್ಟಾರ್ ಕಿಡ್ಸ್ ಜೊತೆಗೆ ಆಗಾಗ ಸುಹಾನಾ ಖಾನ್ ಪಾರ್ಟಿ ಮಾಡ್ತಾಳೆ.

ಸ್ವಿಮ್ಮಿಂಗ್, ಪಾರ್ಟಿ, ವೆಕೇಶನ್ ಅಂತೆಲ್ಲಾ ಬಿಂದಾಸ್ ಆಗಿ ಸುತ್ತಾಡ್ತಾಳೆ.  ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಸೇರಿದಂತೆ ಇತರ ಸ್ನೇಹಿತರ ಜೊತೆಗೆ ಸುಹಾನಾ ಪಾರ್ಟಿ ಮಾಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶ್ಲೋಕಾ ಬಿರ್ಲಾ ಹಾಗೂ ಅಜರ್ ದುಬಾಶ್ ಕೂಡ ಜೊತೆಗಿದ್ರು. ಶ್ಲೋಕಾ, ಉದ್ಯಮಿಗಳಾದ ಅವಂತಿ ಹಾಗೂ ಯಶ್ ಬಿರ್ಲಾ ದಂಪತಿಯ ಪುತ್ರಿ. ಶಾರುಖ್ ಹಾಗೂ ಅಮಿತಾಭ್ ಬಚ್ಚನ್ ನಡುವೆ ಉತ್ತಮ ಒಡನಾಟವಿದೆ.

ಈಗ ಯುವ ಪೀಳಿಗೆ ಕೂಡ ಅದನ್ನು ಮುಂದುವರಿಸಿಕೊಂಡು ಹೋಗ್ತಿದೆ. ಬಿಗ್ ಬಿ ಮೊಮ್ಮಗ ಅಗಸ್ತ್ಯ ಹಾಗೂ ಶಾರುಖ್ ಪುತ್ರಿ ಸುಹಾನಾ ಮಧ್ಯೆ ಆತ್ಮೀಯ ಸ್ನೇಹ ಬೆಳೆದಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍