ಧೋನಿ, ಕೊಹ್ಲಿಗೂ ಪ್ರಿಯಾ ವಾರೀಯರ್ ಶಾಕ್.. ತನ್ನಇನ್ಸ್ಟಗ್ರಾಂ ಅಕೌಂಟಿನಿಂದ ಲಕ್ಷ-ಲಕ್ಷ ಸಂಪಾದಿಸುತ್ತಿರುವ ಪ್ರಿಯಾ !!

priya-warrior-earning-lakhs-from-her-social-media-accounts-kannadanaadi-latest news kannada

ಕೇವಲ 8 ಸೆಕೆಂಡ್ ವಿಡಿಯೋದಿಂದ ದಿನ ಬೆಳಗಾಗುವುದರೊಳಗೆ ಸೆಲೆಬ್ರಿಟೀಯಾದ ಈಕೆಯ ಜೀವನ ಉತ್ತುಂಗದಲ್ಲಿದೆ. ಎಷ್ಟರ ಮಟ್ಟಿಗೆ ಎಂದರೆ ಈಕೆ ಸದ್ಯ ತನ್ನಬ್ರ್ಯಾಂಡ್ ವ್ಯಾಲ್ಯೂ ಮೂಲಕ ಅತಿ ಹೆಚ್ಚು ಹಣ ಗಳಿಸುತ್ತಿರುವ ಸೆಲೆಬ್ರಿಟೀ ಎನ್ನಬಹುದು. ಏನಿದು ಬ್ರ್ಯಾಂಡ್ ವ್ಯಾಲ್ಯೂ ? ಹಣ  ? ಜೀವನ ? ಅಂತಿದ್ದಾರೆ ಅನ್ಕೊಂಡ್ರಾ ಮುಂದೆ ಓದಿ…

ಕೇರಳದ ಹುಡುಗಿ ಪ್ರಿಯಾ ವಾರಿಯರ್ ಬಗ್ಗೆ ಹೇಳ್ತ ಇದ್ದಿವಿ… ಹೌದು. ಹುಬ್ಬೇರಿಸೋ ಹಾಡಿನ ಮೂಲಕ ಪಡ್ಡೆ ಹುಡುಗರ ಹಾರ್ಟಿಗೆ ಕಚಗುಳಿ ಇಟ್ಟ ಈಕೆ ಸದ್ಯದ ಟ್ರೆಂಡ್ ಸೆಟ್ಟರ್… ಈಕೆ ಏನು ಮಾಡಿದರು ಅದು ಸುದ್ದಿಯಾಗುತ್ತೆ. ಎಲ್ಲಿ ಹೋದರೂ ಜನರು ಇರುವ ಮುತ್ತಿಕೊಳ್ಳುವ ಹಾಗೆ ಮುತ್ತಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈಕೆ ಭಾರತೀಯ ಸೂಪರ್ ಸ್ಟಾರ್‌ಗಳನ್ನೂ ಮೀರಿಸಿ ಸಾಮಾಜಿಕ ಜಾಲತಾಣದಲ್ಲಿ ರಾಣಿಯಾಗಿ ಮೆರೆಯುತ್ತಿದ್ದಾಳೆ..

priya-warrior-earning-lakhs-from-her-social-media-accounts-kannadanaadi-latest news kannada

ಸಾಧಾರಣವಾಗಿ ಚಿತ್ರರಂಗ, ಕ್ರಿಕೆಟ್ ಆಟದ ಸೆಲಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿವಿಧ ಕಂಪೆನಿಗಳ ಪ್ರಚಾರಮಾಡುವ ಪೋಸ್ಟ್‌ಗಳನ್ನು ಮಾಡುತ್ತಾರೆ. ಅದಕ್ಕೆ ಅವರು ತಕ್ಕ ಸಂಭಾವನೆಯನ್ನೂ ಕೂಡ ಕಂಪನಿಗಳಿಂದ ಪಡೆಯುತ್ತಾರೆ. ಪ್ರಿಯಾ ಪ್ರಕಾಶ್ ವಿಚಾರದಲ್ಲೂ ಇದು ಆಗುತ್ತಿದ್ದು ಒಂದು ಪೋಸ್ಟ್‌ಗೆ 8 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

priya-warrior-earning-lakhs-from-her-social-media-accounts-kannadanaadi-latest news kannada

ಪ್ರಿಯಾಗೆ ಇನ್ಸ್ಟಾಗ್ರಾಮ್‌ನಲ್ಲಿ 67 ಲಕ್ಷ ಮಂದಿ ಫಾಲೋವರ್ ಗಳಿರುವುದರಿಂದ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತಿದೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.. ಒಟ್ಟಿನಲ್ಲಿ ಅರ್ಧ ನಿಮಿಷದ ವಿಡಿಯೋ ಮೂಲಕವೇ ಪ್ರಪಂಚದಾದ್ಯಂತ ಸುದ್ದಿಯಾಗಿದ್ದ ಪ್ರಿಯಾ ಅದೃಷ್ಟ ಖುಲಾಯಿಸಿದ್ದು ಕೇವಲ ಒಂದು ಪೋಸ್ಟ್ ಮೂಲಕೆ ಬರೋಬ್ಬರಿ ಎಂಟು ಲಕ್ಷ ಪಡೆದು ಎಲ್ಲರು ಬೆರಗಾಗುವಂತೆ ಮಾಡಿದ್ದಾಳೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍