ನಟ ದುನಿಯಾ ವಿಜಯ್ ಗೆ ಎದುರಾಗಿದೆ ದೊಡ್ಡ ಸಂಕಷ್ಟ..!

‘ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸಹ ನಟರಿಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಸುಂದರ್ ಗೌಡರನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಟ ದುನಿಯಾ ವಿಜಯ್ ಅವರನ್ನು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಇಂದು ತಮಿಳುನಾಡಿನಲ್ಲಿ ಬಂಧಿಸಿದ್ದರು.

ಆದರೆ ದುನಿಯಾ ವಿಜಯ್ ಅವರಿಗೆ ನಿರೀಕ್ಷಣಾ ಜಾಮೀನು ದೊರೆತ ಹಿನ್ನೆಲೆಯಲ್ಲಿ ಬಂಧನವಾದ ಕೆಲ ಕ್ಷಣದಲ್ಲೇ ಅವರನ್ನು ಬಿಡುಗಡೆಗೊಳಿಸಿದ್ದರು. ಆದರೆ ಇದೀಗ ದುನಿಯಾ ವಿಜಯ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಮುಂದಾಗಿರುವ ಪೊಲೀಸರು, ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ದುನಿಯಾ ವಿಜಯ್ ಅವರನ್ನು ತಮಿಳುನಾಡಿನಲ್ಲಿ ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಬೆಳಗ್ಗೆ 8.30 ಕ್ಕೆ ಬಂಧಿಸಿದ್ದರು. ಈ ಮಾಹಿತಿಯನ್ನು ನ್ಯಾಯಾಲಯಕ್ಕೂ ನೀಡಿದ್ದರೆನ್ನಲಾಗಿದೆ. ಆದರೆ, ವಿಜಯ್ ಅವರಿಗೆ 12.30 ಕ್ಕೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.

ಈ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಅವರನ್ನು ಮತ್ತೆ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆನ್ನಲಾಗಿದೆ. ಇದಕ್ಕಾಗಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಅವರು ಹಸಿರು ನಿಶಾನೆ ತೋರಿಸಿದರೆ ಯಾವುದೇ ಕ್ಷಣದಲ್ಲಿ ದುನಿಯಾ ವಿಜಯ್ ಮತ್ತೊಮ್ಮೆ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.

ನೀನು ಸಿನೆಮಾದಲ್ಲಿ ಮಾತ್ರ ಹೀರೋ : ಪೊಲೀಸರ ಖಡಕ್ ವಾರ್ನಿಂಗ್

ಹೌದು, ದುನಿಯಾ ವಿಜಿ ಬಂಧನವಾಗಿ ಬೇಲ್ ಸಿಕ್ಕಿ ಬಿಡುಗಡೆ ಮಾಡುವಾಗ ಪೊಲೀಸ್ ಅಧಿಕಾರಿಗಳು ವಾರ್ನಿಂಗ್ ನೀಡಿ “ನೀನು ಸಿನೆಮಾದಲ್ಲಿ ಮಾತ್ರ ಹೀರೋ.. ನಿಜ ಜೀವನದಲ್ಲಿ ಹೀರೊ ಆಗೋಕೆ ಹೋದ್ರೆ ಹುಷಾರ್..” ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..