ಸಾಮಾಜಿಕ ಜಾಲತಾಣದಲ್ಲಿ ರ‍್ಯಾಪಿಡ್ ರಶ್ಮಿಗೆ ಕಿರುಕುಳ..!

ಬೆಂಗಳೂರು: ಕೆಲವು ದಿನಗಳ ಹಿಂದೆ ಆರ್ ಜೆ ರ‍್ಯಾಪಿಡ್ ರಶ್ಮಿ ರಾಜರಥ ಸಿನಿಮಾದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಆದರೆ ಈಗ ಅವರಿಗೆ ಅತ್ಯಾಚಾರದ ಬೆದರಿಕೆ ಬರುತ್ತಿದೆ ಹಾಗೂ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ.

ಈ ಹಿಂದೆ ರಾಜರಥ ತಂಡ ಸಿನಿಮಾ ನೋಡದವರು ಕಚಡಾ, ಲೋಫರ್ ನನ್ ಮಕ್ಳು ಎಂದು ಹೇಳಿದ್ದರು. ಇದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಇಂತಹ ಪ್ರಶ್ನೆ ಕೇಳಿದ ರ‍್ಯಾಪಿಡ್ ರಶ್ಮಿಗೂ ನಿಂದಿಸಿದ್ದರು.

ನಿನ್ನ ರೇಟ್ ಎಷ್ಟು? ಎಂದು ಕೆಲವರು ನನಗೆ ಫೇಸ್‍ಬುಕ್ ಹಾಗೂ ಯೂಟ್ಯೂಬ್‍ನಲ್ಲಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ. ಇನ್ನೂ ಕೆಲ ಕಿಡಿಗೇಡಿಗಳು ಅಶ್ಲೀಲ ಪದಗಳನ್ನು ಉಪಯೋಗಿಸಿ ನನಗೆ ಕಿರುಕುಳ ನೀಡಿ, ಅತ್ಯಾಚಾರದ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ರಶ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಫೇಸ್‍ಬುಕ್ ಹಾಗೂ ಯೂಟ್ಯೂಬ್ ನಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿರುವ ಪ್ರತಿಯೊಂದು ಕಾಮೆಂಟ್‍ನನ್ನು ಮಹಿಳಾ ಆಯೋಗಕ್ಕೆ ತಿಳಿಸಿದ್ದೇನೆ. ಇದರ ಬಗ್ಗೆ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಜನಗಳು ನನ್ನ ಕಾರ್ಯಕ್ರಮದ ಬಗ್ಗೆ ಮಾತನಾಡಲಿ. ಆದರೆ ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಅತ್ಯಾಚಾರದ ಬೆದರಿಕೆ ಹಾಕಿ, ಬಾಯಿಗೆ ಬಂದಂತೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: