ಇನ್ಮೇಲೆ ಸ್ಯಾಂಡಲ್‌ವುಡ್ ಗೆ ಯಶ್ ಅವರೇ ಬಾಸ್ : ತಮ್ಮ ಬ್ರ್ಯಾಂಡ್ ನ್ಯೂ ಬೆಂಜ್ ಕಾರ್ ಗೆ “ಮೈ ಬಾಸ್” ಎಂಬ ಫ್ಯಾನ್ಸೀ ನಂಬರ್ ಖರೀದಿಸಿದ ರಾಕಿಂಗ್ ಸ್ಟಾರ್..! ಇದರ ಬೆಲೆ ಎಷ್ಟು ಗೊತ್ತಾ..?

ಬೆಂಗಳೂರು: ನಾಲ್ಕು ಚಕ್ರ ವಾಹನಗಳ ನೋಂದಣಿ ಸಂಖ್ಯೆಗಾಗಿ ಫ್ಯಾನ್ಸಿ‌ ನಂಬರ್ ಹರಾಜು ಪ್ರಕ್ರಿಯೆ ಶಾಂತಿನಗರದ ಆರ್.ಟಿ.ಒ ಕೇಂದ್ರ ಕಚೇರಿಯಲ್ಲಿ ಇಂದು ನಡೆಯಿತು. ಆರ್.ಟಿ.ಒ ಉಪ ಆಯುಕ್ತ ನಾರಾಯಣ ಸ್ವಾಮಿ ನೇತೃತ್ವದಲ್ಲಿ ನಡೆದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ 50ಕ್ಕೂ‌ ಹೆಚ್ಚು ಮಂದಿ ಭಾಗಿಯಾಗಿದ್ದರು.

ಅದರಲ್ಲಿ ರಾಕಿಂಗ್​ ಸ್ಟಾರ್ ಯಶ್​ ಅವರ ಹೊಸ ಬೆಂಜ್ ಕಾರು ಗಮನ ಸೆಳೆದಿದೆ. ಯಶ್ ತಮ್ಮ ಹೊಸ ಬೆಂಜ್ ಗೆ BOSS ನಂಬರ್ ಖರೀದಿ ಮಾಡಿದ್ದಾರೆ. KA 05 MY 8055 ನೋಂದಣೆ ಸಂಖ್ಯೆಯನ್ನು ₹ 72 ಸಾವಿರಕ್ಕೆ ಹರಾಜು ಮೂಲಕ ಖರೀದಿಸಿದ್ದಾರೆ.

ಸ್ಯಾಂಡಲ್ ವುಡ್ ಗೆ BOSS ಯಾರು ಎಂಬ ಚರ್ಚೆ ನಡೆಯುತ್ತಿರುವಾಗಲೇ ಯಶ್ 8055 ನಂಬರ್ ಖರೀಸಿದಿಸಿರುವುದು ಕುತೂಹಲಕಾರಿಯಾಗಿದೆ. ಯಶ್ ಪರವಾಗಿ ಹರಾಜು ಪ್ರಕ್ರಿಯೆಯಲ್ಲಿ ರಾಕೇಶ್ ಭಾಗವಹಿಸಿದ್ದರು. ಎಷ್ಟೇ ಹಣ ಆದರೂ ಪರವಾಗಿಲ್ಲ ಬಾಸ್ ನಂಬರ್ ಅನ್ನೇ ತೆಗೆದುಕೊಳ್ಳುವಂತೆ ರಾಕೇಶ್​ಗೆ ಯಶ್ ಸೂಚಿಸಿದ್ದರು. ಆದರೆ ಯಾರೂ ಬಿಡ್ ಮಾಡದ ಹಿನ್ನಲೆ 78 ಸಾವಿರಕ್ಕೆ BOSS ನಂಬರ್ (8055) ಅನ್ನು ಯಶ್ ತಮ್ಮದಾಗಿಸಿಕೊಂಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..