ಚಿತ್ರೀಕರಣ ಮುಗಿಸಿದ ‘ಸಮಾಪ್ತಿ’ ಚಿತ್ರತಂಡ. ಇದೇ ತಿಂಗಳಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ

samapti kannada movie-kannadanaadi news-latest kannad news-online kannada news

ಕುಂದಾಪುರದ ಹೊಸ ಪ್ರತಿಭೆಗಳಿಂದ ನಿರ್ಮಾಣವಾದ ‘ಸಮಾಪ್ತಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಗೊಳ್ಳಲಿದೆ.

samapti kannada movie-kannadanaadi news-latest kannad news-online kannada news

ಇಕ್ಬಾಲ್ ಎಸ್ ಗುಲ್ವಾಡಿ ಅವರ ಕನಸಿನ ಕುಸಾದ ‘ಸಮಾಪ್ತಿ’ ಚಿತ್ರಕ್ಕೆ ಅವರೇ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್’ಗಳಂತಹ ಮಾದಕ ದ್ರವ್ಯಗಳಿಗೆ ಸಿಲುಕಿ ಒದ್ದಾಡುತ್ತಿರುವುದನ್ನು ಕಂಡು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನಿರ್ದೇಶಕರು.

samapti kannada movie-kannadanaadi news-latest kannad news-online kannada news

ಯುವ ನಟ ಗ್ಲಾವಿನ್ ಡೇಸಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಉತ್ತಮ್ ಸಾರಂಗ್ ಸಂಗೀತ ಸಂಯೋಜಿಸಿದ್ದು, ಮಂಜುನಾಥ್ ಅವರ ಛಾಯಾಗ್ರಹಣವಿದೆ ಹಾಗೂ ಅನಿಲ್ ಅವರ ಸಂಕಲನವಿದೆ. ತಾರಾಂಗಣದಲ್ಲಿ ಅನಿಲ್, ಶಾಶ್ವತ್ ಶೆಟ್ಟಿ, ರೋಲ್ವಿನ್, ಸೋನಿಯಾ, ಗುಲ್ವಾಡಿ ಫ್ರೆಂಡ್ಸ್ ಹಾಗೂ ಹಲವಾರು ಯುವ ಪ್ರತಿಭೆಗಳು ಅಭಿನಯಿಸಿದ್ದಾರೆ.

samapti kannada movie-kannadanaadi news-latest kannad news-online kannada news

ಟ್ರೈಲರ್ ಹಾಗೂ ಚಿತ್ರದ ಹಾಡುಗಳು ಈ ಕೆಳಗಿನ ಯೂಟ್ಯೂಬ್ ಚಾನೆಲ್’ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಎಲ್ಲಾ ಅಪ್ಡೇಟ್ಸ್’ಗಳಿಗಾಗಿ ಈ ಕೆಳಗಿನ ಯೂಟ್ಯೂಬ್ ಚಾನಲನ್ನು subscribe ಮಾಡಿ ಚಿತ್ರತಂಡವನ್ನು ಬೆಂಬಲಿಸಿ.

https://www.youtube.com/channel/UCG4ZV8XLjLZB9EcAqpQH1Cg

👍👍ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ👍👍