ಕುಂದಾಪುರದ ಇತಿಹಾಸದಲ್ಲೇ ಅತೀ ಹೆಚ್ಚು ಸದ್ದು ಮಾಡಿದ ಕಿರುಚಿತ್ರದ ಟೀಸರ್ ‘ಸಮಾಪ್ತಿ’..!!

ಇತ್ತೀಚಿನ ದಿನಗಳಲ್ಲಿ ವಿಭಿನ್ನ ಪ್ರತಿಭೆಗಳಿರುವ ಹಲವಾರು ಯುವ ಪ್ರತಿಭೆಗಳು ಚಿತ್ರರಂಗದತ್ತ ಮುಖ ಮಾಡುತ್ತಿದ್ದು, ಅದರಲ್ಲೂ ಕಿರುಚಿತ್ರಗಳ ಮೂಲಕ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರಾವಳಿ ಅಗ್ರಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಈ ಪ್ರಯತ್ನಕ್ಕೆ ಕರಾವಳಿ ಕುಂದಾಪುರ ಭಾಗದ ಪ್ರತಿಭೆಗಳು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಕುಂದಾಪುರದ ಯುವ ಪ್ರತಿಭೆಗಳು ಸೇರಿ ಮಾಡಿರುವ ಸಮಾಜಮುಖಿ ‘ಸಮಾಪ್ತಿ’ ಕಿರುಚಿತ್ರದ ಟೀಸರ್ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಅತಿಹೆಚ್ಚು ಜನರ ವೀಕ್ಷಣೆ ಪಡೆಯುವ ಮೂಲಕ ಕುಂದಾಪುರದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಕಿರುಚಿತ್ರದ ಟೀಸರ್ ಅತಿಹೆಚ್ಚು ಜನರಿಂದ ವೀಕ್ಷಣೆ ಪಡೆದಿರುವ ಕಿರುಚಿತ್ರದ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

samapti kannada movie-kannadanaadi news-latest kannad news-online kannada news

ಕೆಲವೇ ದಿನಗಳಲ್ಲಿ ಈ ಕಿರುಚಿತ್ರದ ವಿಡಿಯೋ ಸಾಂಗ್ ತೆರೆ ಕಾಣಲಿದ್ದು, ಕಿರುಚಿತ್ರಗಳ ಪ್ರಶಸ್ತಿಯ ಸಾಲಿನಲ್ಲಿ ಆಯ್ಕೆ ಸಮಿತಿಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದೆ‌.

samapti kannada movie-kannadanaadi news-latest kannad news-online kannada news

ಇದೇ ತಂಡದಿಂದ ಒಂದು ಅದ್ದೂರಿ ಚಿತ್ರಕ್ಕಾಗಿ ತಯಾರಿ ನಡೆಯುತ್ತಿದ್ದು, ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಹಾಗೂ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭಕ್ಕಾಗಿ ವಿಭಿನ್ನ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿದೆ.

👍👍ಸಿನಿಮಾ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ👍👍

ಕಿರುಚಿತ್ರದ ಟೀಸರ್ ಇಲ್ಲಿ ನೋಡಿ