ಱಂಬೋ-2​ ಕಲೆಕ್ಷನ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ : ವಿದೇಶದಲ್ಲೂ ಶರಣ್​ಗೆ ಬಂತು ಬೇಡಿಕೆ..! ಒಟ್ಟು ಗಳಿಕೆ ಎಷ್ಟು ? ಈ ಸುದ್ದಿ ಓದಿ..

ಸ್ಯಾಂಡಲ್​ವುಡ್​​ನಲ್ಲೀಗ ಕಡಿಮೆ ಅಂದರೂ​ ವಾರಕ್ಕೆರಡು ಸಿನಿಮಾ ರಿಲೀಸ್ ಆಗ್ತಿವೆ. ಆದರೆ, ಪ್ರೇಕ್ಷಕ ಮಹಾಪ್ರಭು ಸೆಲೆಕ್ಟೆಡ್​ ಚಿತ್ರಗಳಿಗಷ್ಟೇ ಜೈ ಅಂದಿದ್ದಾನೆ. ಈ ಹಗ್ಗ-ಜಗ್ಗಾಟ, ಸೋಲು – ಗೆಲುವಿನ ಮಧ್ಯೆ ಕಾಮಿಡಿ ಕಿಂಗ್​ ಶರಣ್​ ನಟನೆಯ ಱಂಬೋ-2 ಸೂಪರ್ ಹಿಟ್ ಆಗಿದೆ. ಅಸಲಿಗೆ ಯಶಸ್ವಿಯಾಗಿ ಐದನೇ ವಾರ ಪೂರೈಸಿರೋ ಱಂಬೋ- 2 ಚಿತ್ರದ ಕಲೆಕ್ಷನ್​ ಎಷ್ಟು ಗೊತ್ತಾ.? ಅಷ್ಟಕ್ಕೂ ಈ ಕಲೆಕ್ಷನ್​ ಶರಣ್​ ಜೀವಮಾನದ ಶ್ರೇಷ್ಠ ಸಾಧನೆ ಅಂತಲೇ ಗಾಂಧಿನಗರದಲ್ಲಿ ಹೇಳಲಾಗ್ತಿದೆ.

5 ವಾರ, 12 ಕೋಟಿ…!
ಸಿನಿಮಾದ ಡಿಸ್ಟ್ರಿಬ್ಯೂಟರ್​ ಜಯಣ್ಣ ಪ್ರಕಾರ ಱಂಬೋ-2 ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆರಂಭದಲ್ಲಿ ಸುಮಾರು 220 ಥಿಯೇಟರ್​ಗಳಲ್ಲಿ ಚಿತ್ರ ರಿಲೀಸ್ ಆಗಿದ್ದು, ಈಗ 125 ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಶೋ ನಡೆಯುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಶರಣ್​ ಗೂಗ್ಲಿಗೆ ಜನ ಫಿದಾ ಅಂದಿದ್ದಾರೆ. ಡಿಸ್ಟ್ರಿಬ್ಯೂಟರ್ ಪ್ರಕಾರ 60ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಸಿನಿಮಾ 50 ದಿನ ಪೂರೈಸಲಿದೆ. ಜಸ್ಟ್​ 25ದಿನಗಳಲ್ಲೇ ಸಿನಿಮಾ 12 ಕೋಟಿಗೂ ಹೆಚ್ಚು ಕಲೆಕ್ಷನ್ ಗಿಟ್ಟಿಸಿದೆ.

ವಿದೇಶದಲ್ಲೂ ಶರಣ್​ಗೆ ಬಂತು ಬೇಡಿಕೆ..!
ರಾಜ್ಯವಲ್ಲದೇ ವಿದೇಶಗಳಲ್ಲೂ ಶರಣ್​ ಕಾಮಿಡಿಗೆ ಜನ ಥಂಡಾ ಹೊಡೆದಿದ್ದಾರೆ. ಇಂಗ್ಲಿಷ್​ ಸಬ್​ಟೈಟಲ್​ನಲ್ಲಿ ಯುಎಸ್​ಎ ಮತ್ತು ಆಸ್ಟ್ರೇಲಿಯಾದಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸಿಂಗಾಪುರ, ನ್ಯೂಜಿಲ್ಯಾಂಡ್, ಕೆನಡಾ ಹಾಗೂ ಯೂರೋಪ್​ನಲ್ಲೂ ಸಿನಿಮಾ ರಿಲೀಸ್ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..