300 ಚಿತ್ರ ಮಂದಿರದಲ್ಲಿ ತೆರೆ ಕಾಣಲಿದೆ “ಮಾಸ್ ಲೀಡರ್”…

shivarajkumar's mass leader releases in 300 theatres on august 11 - kannada naadi news

ಟೈಟಲ್ ವಿವಾದದಿಂದ ಕೋರ್ಟ್ ಮೆಟ್ಟಿಲೇರಿರುವ ಶಿವಣ್ಣ ಅಭಿನಯಿಸಿದ “ಮಾಸ್ ಲೀಡರ್” ಸಿನೆಮಾ, ಈಗ ಮಾತುಕತೆಯಿಂದ ಎಲ್ಲವೂ ಇತ್ಯರ್ಥವಾಗಿ ಬಿಡುಗಡೆ ನಿಂತಿದೆ.

ಚಿತ್ರದ ಪೋಸ್ಟರ್ ಹಾಗೂ ಟೀಸರ್ ನಿಂದ ಸದ್ದು ಮಾಡಿ, ಪ್ರೇಕ್ಷಕರ ಮನಗೆದ್ದಿದೆ. ಕಾಶ್ಮೀರದಲ್ಲಿಯೂ ಚಿತ್ರೀಕರಣ ಮಾಡಲಾಗಿದೆ ಮತ್ತು ಅದ್ದೂರಿಯಾಗಿ ಚಿತ್ರ ಮೂಡಿ ಬಂದಿದೆ.

ಚಿತ್ರದ ಮತ್ತೊಂದು ವಿಶೇಷತೆ ಅಂದರೆ ತಾರಾಗಣ. ಶಿವರಾಜ್‌ ಕುಮಾರ್‌, ವಿಜಯ್‌ ರಾಘವೇಂದ್ರ, ಪ್ರಣಿತಾ, ಶರ್ಮಿಳಾ ಮಾಂಡ್ರೆ ಸಿನಿಮಾದಲ್ಲಿದ್ದಾರೆ. ಭ್ರಷ್ಟಾಚಾರವು ದೇಶದ ಎಲ್ಲ ವ್ಯವಸ್ಥೆಗಳ ಜತೆ ಮಿಲಿಟರಿ ಸಿಸ್ಟಮ್‌ ಅನ್ನು ಹೇಗೆ ಆವರಿಸಿಕೊಳ್ಳುತ್ತಿದೆ ಅನ್ನುವ ಕತೆಯು ಸಿನಿಮಾದಲ್ಲಿದೆ. ಜತೆಗೆ ಅಕ್ರಮ ನುಸುಳಿಕೋರರ ಬಗೆಗೂ ಚಿತ್ರಕತೆಯಲ್ಲಿ ಹೇಳಲಾಗಿದೆಯಂತೆ.

shivaraj kumar's mass leader set to release - kannada naadi news

ನರಸಿಂಹ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ವೀರ ಸಮರ್ಥ ಸಂಗೀತ ನೀಡಿದ್ದಾರೆ. ತರುಣ್ ಕಂಬೈನ್ಸ್ ಅಡಿಯಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ರಾಜ್ಯಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಮಾಸ್ ಲೀಡರ್ ಚಿತ್ರವು ಬಿಡುಗಡೆಯಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.