ಶಾಹೀದ್ ಕಪೂರ್ ಹೊಸ ಮನೆ ಬೆಲೆ ಕೇಳಿದ್ರೆ ನೀವು ಸುಸ್ತಾಗೋದು ಗ್ಯಾರಂಟಿ…! ತಿಳಿಯಲು ಈ ಸುದ್ದಿ ಓದಿ..

ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್, ಪದ್ಮಾವತಿಯ ಪತಿ ಶಾಹೀದ್ ಕಪೂರ್ ಹೊಸ ಹುಮ್ಮಸ್ಸಿನಲ್ಲಿದ್ದಾರೆ. ಶಾಹೀದ್ ಅಭಿನಯದ ಪದ್ಮಾವತ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ಲೂಟಿ ಮಾಡಿದ ನಂತರ ಶಾಹೀದ್ ಸಿನಿ ಕೆರಿಯರ್ ಗೆ ಮತ್ತೊಮ್ಮೆ ಬೂಸ್ಟ್ ಸಿಕ್ಕಿದೆ. ಸಂಸಾರದಲ್ಲೂ ಶಾಹೀದ್ ಕಪೂರ್ ಸುಖೀ ಪುರುಷನಾಗಿಬಿಟ್ಟಿದ್ದಾರೆ. ಪತ್ನಿ ಮೀರಾ ರಜ್ಪೂತ್ರಿಂದ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಸಮಯದಲ್ಲಿ ಮತ್ತೊಂದು ಖುಷಿ ಶಾಹೀದ್ ಕಪೂರ್ ಪಾಲಿಗೆ ಸಿಕ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಶಾಹೀದ್ ಕಪೂರ್ ಮುಂಬೈನ ಖ್ಯಾತ ಅಪಾರ್ಟ್ಮೆಂಟ್ ಒಂದರಲ್ಲಿನ ವಿಶಾಲವಾದ ಡುಪ್ಲೆಕ್ಸ್ ಮನೆಯೊಂದಕ್ಕೆ ಒಡೆಯರಾಗುತ್ತಿದ್ದಾರೆ. ಈ ಮನೆಯ ಬೆಲೆ ಎಷ್ಟು ಗೊತ್ತಾ…? ಬರೋಬ್ಬರಿ 55 ಕೋಟಿ 60 ಲಕ್ಷ ರೂಪಾಯಿ. ಈಗಾಗ್ಲೇ ಮನೆಗಾಗಿ ಶಾಹೀದ್ ಕಪೂರ್ 2ಕೋಟಿ 91 ಲಕ್ಷ ರೂಪಾಯಿಯ ಸ್ಟ್ಯಾಂಪ್ ಡ್ಯೂಟಿ ಹಣವನ್ನು ಮನೆಯ ರಿಜಿಸ್ಟ್ರೇಷನ್ ಗಾಗಿ ಪಾವತಿಸಿದ್ದಾರೆ.

ಇಷ್ಟೊಂದು ಬೆಲೆಬಾಳುವ ಈ ಮನೆ ಇರೋದು ಮುಂಬೈನ ವ್ರೋಲಿಯಲ್ಲಿ. ರಿಟ್ಸ್ ಕಾರ್ಲ್ಟಾನ್ ನ ಬಹುಮಹಡಿ ವಾಸಗೃಹಗಳಲ್ಲಿ ನ 42 ಮತ್ತು 43ನೇ ಫ್ಲೋರ್ನಲ್ಲಿ ಈ ಮನೆ ಇದೆ. ಸಮುದ್ರ ತೀರಕ್ಕೆ ಮುಖ ಮಾಡಿದಂತಿರುವ ವಿಶಾಲವಾದ ಲಿವಿಂಗ್ ರೂಮ್ ಸೇರಿದಂತೆ ಹಲವು ಐಷಾರಾಮವನ್ನು ಈ ಮನೆಗಾಗಿ ಕಲ್ಪಿಸಲಾಗಿದೆ.

ಸದ್ಯ ಮನೆಯ ರಿನೋವೇಷನ್ ಕಾರ್ಯ ನಡೆಯುತ್ತಿದ್ದು, ಸದ್ಯದಲ್ಲೇ ಶಾಹೀದ್ ಮತ್ತು ಮೀರಾ ಈ ಮನೆಗೆ ಶಿಫ್ಟ್ ಆಗಲಿದ್ದಾರಂತೆ. ಶಾಹೀದ್ ಈಗ ಶ್ರಿ ನಾರಾಯಣ್ ಸಿಂಗ್ ನಿರ್ದೇಶನದ ಬತ್ತಿ ಗುಲ್ ಮೀಟರ್ ಚಾಲೂ ಚಿತ್ರದಲ್ಲಿ ಅಭಿನಯಿಸಿದ್ದು ಸೆಪ್ಟೆಂಬರ್ನಲ್ಲಿ ಚಿತ್ರ ತೆರೆಗೆ ಬರಲಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..