ವಿಜಯಲಕ್ಷ್ಮೀ ನೋವಿನ ಕರೆಗೆ ಸ್ಪಂದಿಸಿದ್ರು ದುನಿಯಾ ವಿಜಯ್‌..!

ದುನಿಯಾ ವಿಜಿ ಕುಸ್ತಿ ಪಟುವಾಗಿ ಕಾಣಿಸಿಕೊಳ್ತಾ ಇರೋ ಮೊದಲ ಸಿನಿಮಾ ಕುಸ್ತಿ. ಈ ಸಿನಿಮಾ ಮೂಲಕ ದುನಿಯಾ ವಿಜಿ ಮಗ ಸಾಮ್ರಾಟ್‌ ಕೂಡ ಸ್ಯಾಂಡಲ್​​​ವುಡ್​​ಗೆ ಎಂಟ್ರಿ ಕೊಡ್ತಾ ಇದ್ದಾರೆ. ಈ ಸಿನಿಮಾಕ್ಕಾಗಿ ಅಪ್ಪ ಮಗ ಇಬ್ಬರು ಸಾಕಷ್ಟು ವರ್ಕೌಟ್‌​ ಮಾಡ್ತಿದ್ದಾರೆ.

ಈಗ ಸಿನಿಮಾ ತನ್ನ ಸ್ಟಾರ್​ಕಾಸ್ಟ್​ನಿಂದ ಮತ್ತೆ ಸುದ್ದಿಯಾಗ್ತಾ ಇದೆ. ಇತ್ತೀಚೆಗೆ ಮಿಡಿಯಾದೆದುರು ಕೂತು ತಮ್ಮ ಕಣ್ಣೀರ ಕಥೆ ಹೇಳಿ, ತಮ್ಮ ಜೀವನವನ್ನ ಕನ್ನಡಿಗರ ಮುಂದಿಟ್ಟ ನಟಿ ವಿಜಯಲಕ್ಷ್ಮೀ ಕುಸ್ತಿ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ವಿಜಯಲಕ್ಷ್ಮೀ ನೋವಿನ ಕರೆಗೆ ದುನಿಯಾ ವಿಜಯ್‌ ಸ್ಪಂದಿಸಿದ್ರು..!

ಕನ್ನಡ ಚಿತ್ರರಂಗದಿಂದಲೂ ದೂರಾಗಿ, ತಮಿಳು ಸಿನಿಮಾಗಳಲ್ಲಿ ಆಫರ್ಸ್​ ಇಲ್ಲದೆ. ಕಷ್ಟದ ಜೀವನ ಸಾಗಿಸ್ತಿದ್ದ ವಿಜಯಲಕ್ಷ್ಮೀ ತಮಗೆ ಸಿನಿಮಾ ಬಿಟ್ಟು ಬೇರೆ ಏನೂ ಗೊತ್ತಿಲ್ಲ, ಸಿನಿಮಾ ಆಫರ್​ ಸಿಕ್ಕರೆ ನಟಿಸೋಕೆ ಸಿದ್ಧ ಅಂತ ಹೇಳಿದ್ರು ಅದಕ್ಕೆ ಪ್ರತಿಕ್ರಿಯಿಸ್ತಾ, ಕನ್ನಡದ ಸಾಕಷ್ಟು ನಿರ್ಮಾಪಕರು ವಿಜಯಲಕ್ಷ್ಮೀಯವ್ರಿಗೆ ಆಫರ್ಸ್​ ನೀಡ್ತಾ ಇದ್ದಾರೆ.

ಅದ್ರಂತೆ,ಖುದ್ದು ದುನಿಯಾ ವಿಜಯ್‌ ವಿಜಯಲಕ್ಷ್ಮೀಯವರ ನೋವಿಗೆ ಸ್ಪಂದಿಸಿ, ಕರೆದು ಕುಸ್ತಿ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದನ್ನ ಕೊಟ್ಟಿದ್ದಾರೆ.

ಅಂದ್ಹಾಗೆ, ದುನಿಯಾ ವಿಜಿ ಹೋಮ್​ ಬ್ಯಾನರ್​ನ ಕುಸ್ತಿ ಸಿನಿಮಾವನ್ನ ರಘು ಶಿವಮೊಗ್ಗ ನಿರ್ದೇಶನ ಮಾಡ್ತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..